ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಬೀದಿಗಳಲ್ಲಿ ‘ದಿ ನನ್’ ನೋಡಿ ಬೆಚ್ಚಿ ಬಿದ್ದ ಜನ! ವಿಡಿಯೊ ನೋಡಿ

ಡಿಮೊನ್ ನನ್ ರೀತಿ ಮೇಕಪ್ ಮಾಡಿಕೊಂಡು ಗಮನ ಸೆಳೆದ ಯುವತಿ
Published 11 ಅಕ್ಟೋಬರ್ 2023, 10:05 IST
Last Updated 11 ಅಕ್ಟೋಬರ್ 2023, 10:05 IST
ಅಕ್ಷರ ಗಾತ್ರ

ಬೆಂಗಳೂರು: 2018 ರಲ್ಲಿ ಬಿಡುಗಡೆಯಾಗಿದ್ದ ಹಾಲಿವುಡ್‌ನ ಖ್ಯಾತ ಸಿನಿಮಾ ‘ದಿ ನನ್’ (The Nun) ಸಾಕಷ್ಟು ಜನಪ್ರಿಯತೆಗಳಿಸಿತ್ತು. ಅದರಲ್ಲಿನ ‘ಡಿಮೊನ್ ನನ್’ (ರಾಕ್ಷಸಿ ನನ್) ಪಾತ್ರ ಸಿನಿ ಪ್ರೇಮಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

ಈ ಸಿನಿಮಾದ ಎರಡನೇ ಭಾಗ ‘ದಿ ನನ್ 2‘ (The Nun 2) ಕೂಡ ಇತ್ತೀಚೆಗೆ ತೆರಕಂಡಿತ್ತು. ಅದರಲ್ಲೂ ಕೂಡ ಡಿಮೊನ್ ನನ್ ಪಾತ್ರ ಮತ್ತೆ ಗಮನ ಸೆಳೆದಿತ್ತು.

ವಿಷಯ ಏನೆಂದರೆ ನನ್ ಪಾತ್ರದ ರೀತಿ ಮೇಕಪ್ ಮಾಡಿಕೊಂಡು ದೆಹಲಿಯಲ್ಲಿ ಯುವತಿಯೊಬ್ಬಳು ಜನರನ್ನು ಬೆಚ್ಚಿಬೀಳಿಸಿರುವ ಘಟನೆ ನಡೆದಿದೆ. ಇಜಾ ಸೇಥಿಯಾ ಎನ್ನುವ ಮೇಕಪ್ ಕಲಾವಿದೆಯೊಬ್ಬರು ಥೇಟ್ ಡಿಮೊನ್ ನನ್ ರೀತಿ ಮೇಕಪ್ ಮಾಡಿಕೊಂಡು ಜನರನ್ನು ಹೆದರಿಸಿದ್ದಾರೆ.

ಈ ವಿಡಿಯೊವನ್ನು ಇಜಾ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು ಅನೇಕರು ಅವರನ್ನು ನೋಡಿ ಹೆದರಿದರೆ ಇನ್ನೂ ಅನೇಕರು ಅವರ ಮೇಕಪ್ ಕಲೆಯನ್ನು ಮೆಚ್ಚಿಕೊಂಡು ಭೇ‌ಷ್ ಎಂದಿದ್ದಾರೆ.

ಇಜಾ ಅವರಿಗೆ ಇನ್‌ಸ್ಟಾಗ್ರಾಂನಲ್ಲಿ 3.20 ಲಕ್ಷ ಫಾಲೋವರ್‌ಗಳು ಇದ್ದಾರೆ. ಈ ಕುರಿತು ಎನ್‌ಡಿಟಿವಿ ವರದಿ ಮಾಡಿದೆ.

ಕೊರಿನ್ ಹಾರ್ಡಿ ನಿರ್ದೇಶನದ ದಿ ನನ್ ಸಿನಿಮಾದಲ್ಲಿ ಡಿಮೊನ್ ನನ್ ಪಾತ್ರವನ್ನು ಅಮೆರಿಕ ಮೂಲದ ನಟಿ ಬೋನಿ ಅರೋನ್ಸ್ ನಿರ್ವಹಿಸಿದ್ದರು. ಅವರಿಂದಾಗಿ ನನ್ ಪಾತ್ರ ಸಾಕಷ್ಟು ಗಮನ ಸೆಳೆದಿದೆ. ನನ್ ಸಿನಿಮಾ 176 ಕೋಟಿ ರೂಪಾಯಿಯಲ್ಲಿ ನಿರ್ಮಾಣಗೊಂಡು ಜಾಗತಿಕವಾಗಿ 2,920 ಕೋಟಿ ರೂಪಾಯಿ ಬಾಕ್ಸ್‌ ಆಫೀಸ್‌ ಗಳಿಕೆ ಕಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT