ಬಂಗಾಳದ ಹೌರಾದಲ್ಲಿ 70ರ ವೃದ್ಧೆಯೊಬ್ಬರು ಸ್ವ–ಉದ್ಯಮ ಮಾಡುವ ಮೂಲಕ ಇಳಿವಯಸ್ಸಿನಲ್ಲಿಯೂ ಹೋಟೆಲ್ ನಡೆಸಿ ಬದುಕು ನಡೆಸುತ್ತಿದ್ದಾರೆ.

ಇತ್ತೀಚೆಗೆ ಬಂಗಾಳ ಮೂಲದ 'ಆರಾಧನಾ ಚಟರ್ಜಿ' ಎಂಬುವವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ವೃದ್ಧೆಯ ವಿಡಿಯೊವನ್ನು ಹಂಚಿಕೊಂಡಿದ್ದರು. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಜನರಿಂದ ಮೆಚ್ಚುಗೆ ಪಡೆದುಕೊಂಡಿದೆ.
.ಪೌರತ್ವ ಪರೀಕ್ಷೆಗೆ ಯುಪಿ ಪೊಲೀಸರಿಂದ ಹೊಸ ತಂತ್ರ: ವಿಡಿಯೊ ವೈರಲ್.
70 ವರ್ಷದ ‘ದೀಪಾಲಿ ಘೋಷ್’ ಅವರು ಪತಿಯ ಮರಣದ ನಂತರ ಒಬ್ಬಂಟ್ಟಿಯಾದರು. ಬಡತನವಿದ್ದ ಕಾರಣ ಇತರೆ ಕೆಲಸಗಳನ್ನು ಮಾಡಲು ಶುರು ಮಾಡಿದರು. ನಂತರ ತಮ್ಮದೇ ಆದ ಚಿಕ್ಕ ಹೋಟೆಲ್ ಆರಂಭಿಸಿದರು. ಹೀಗೆ ಆರಂಭವಾದ ಹೋಟೆಲ್ಗೆ 30 ವರ್ಷ ತುಂಬಿದೆ.

ಇವರ ಪ್ರಧಾನ ಆದಾಯದ ಮೂಲ ಹೋಟೆಲ್ ಆಗಿದೆ. ಇವರ ಹೋಟೆಲ್ನಲ್ಲಿ ಯಾವುದೇ ಸಪ್ಲೈಯರ್, ಬಾಣಸಿಗನಾಗಲಿ ಇಲ್ಲ. ಸ್ವತಃ ದೀಪಾಲಿ ಘೋಷ್ ಅವರೇ ಆಹಾರವನ್ನು ತಯಾರಿಸುವುದು, ಉಣಬಡಿಸುವುದು ಹಾಗೂ ಪಾತ್ರೆಗಳನ್ನು ತೊಳೆದನ್ನೂ ಒಳಗೊಂಡು ಎಲ್ಲ ಕೆಲಸವನ್ನು ತಾವೇ ನಿಭಾಯಿಸುತ್ತಿದ್ದಾರೆ.

ಆರಂಭದಲ್ಲಿ ಇವರ ಹೋಟೆಲ್ಗೆ ಸಾಕಷ್ಟು ಜನ ಬರುತ್ತಿದ್ದರು. ಈಗ ಇದರ ಸಂಖ್ಯೆ 5ಕ್ಕೆ ಇಳಿದಿದೆ. ಅದೇ ಹೋಟೆಲ್ನ ಒಂದು ಜಾಗದಲ್ಲಿ ಮಲಗುತ್ತೇನೆ ಎಂದು ಸ್ವತಃ ದೀಪಾಲಿ ಘೋಷ್ ಅವರೇ ಹೇಳಿಕೊಂಡಿದ್ದಾರೆ.

‘ಅಗತ್ಯ ಔಷಧಿಗಳನ್ನು ಖರೀದಿಸಲು ಹೋಟೆಲ್ ನಡೆಸುವುದು ಅನಿವಾರ್ಯವಾಗಿದೆ. ವೃದ್ಧಾಶ್ರಮಕ್ಕೆ ಹೋಗಲು ನಾನು ಬಯಸುವುದಿಲ್ಲ. ನಾನು ಬದುಕಿರುವವರೆಗೂ ಹೋಟೆಲ್ ಮುಂದುವರಿಸಲು ಬಯಸುತ್ತೇನೆ. ಕೋವಿಡ್ ನಂತರದ ದಿನಗಳಲ್ಲಿ ವ್ಯಾಪಾರ ಕುಸಿಯಿತು. ಇದು ನನ್ನ ಆರ್ಥಿಕ ಮುಗ್ಗಟ್ಟಿಗೆ ಕಾರಣವಾಯಿತು. ನನಗೆ ನನ್ನವರೆಂದು ಯಾರೂ ಇಲ್ಲ’, ಎಂದು ಘೋಷ್ ಹೇಳಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.