ಮಂಗಳವಾರ, ಜನವರಿ 26, 2021
17 °C

ಡೊನಾಲ್ಡ್ ಟ್ರಂಪ್ ಫೇಸ್‌ಬುಕ್ ಖಾತೆ ಅನಿರ್ದಿಷ್ಟಾವಧಿ ಸ್ಥಗಿತ

ಎಎ‍ಫ್‌ಪಿ Updated:

ಅಕ್ಷರ ಗಾತ್ರ : | |

US President Donald Trump. Credit: AFP Photo

ಸ್ಯಾನ್ ಫ್ರಾನ್ಸಿಸ್ಕೊ: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತ ಬಳಿಕ ಡೊನಾಲ್ಡ್ ಟ್ರಂಪ್ ಹಲವು ವಿವಾದಕ್ಕೆ ಕಾರಣರಾಗುತ್ತಿದ್ದಾರೆ. ಕ್ಯಾಪಿಟಲ್ ಕಟ್ಟಡದ ಮೇಲೆ ಟ್ರಂಪ್ ಬೆಂಬಲಿಗರ ದಾಳಿ ಮತ್ತು ಬಳಿಕ ನಡೆದ ಹಿಂಸಾಚಾರದಲ್ಲಿ ಹಲವರು ಮೃತಪಟ್ಟ ಬಳಿಕವೂ ಟ್ರಂಪ್ ಸಾಮಾಜಿಕ ತಾಣಗಳ ಮೂಲಕ ಹೇಳಿಕೆ ನೀಡಿ ಜನರನ್ನು ಪ್ರಚೋದಿಸಲು ಯತ್ನಿಸಿದ್ದರಿಂದ, ಅವರ ಫೇಸ್‌ಬುಕ್ ಖಾತೆಯನ್ನು ಅನಿರ್ದಿಷ್ಟಾವಧಿಗೆ ತಡೆಹಿಡಿಯಲಾಗಿದೆ.

ಡೊನಾಲ್ಡ್ ಟ್ರಂಪ್ ಫೇಸ್‌ಬುಕ್ ಖಾತೆಯನ್ನು ದಿನದ ಮಟ್ಟಿಗೆ ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು. ಆದರೆ ನಿಯಮ ಪಾಲಿಸದ ಟ್ರಂಪ್ ಖಾತೆಯನ್ನು ಅನಿರ್ದಿಷ್ಟಾವಧಿಯವರೆಗೆ ಬಂದ್ ಮಾಡಲಾಗಿದೆ ಎಂದು ಫೇಸ್‌ಬುಕ್ ಮುಖ್ಯ ನಿರ್ವಹಣಾಧಿಕಾರಿ (ಸಿಇಒ) ಮಾರ್ಕ್ ಜುಕರ್ ಬರ್ಗ್ ತಿಳಿಸಿದ್ದಾರೆ.

ಟ್ರಂಪ್ ಅಧಿಕೃತ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಖಾತೆಯನ್ನು ಆರಂಭದಲ್ಲಿ ಒಂದು ದಿನದ ಮಟ್ಟಿಗೆ ಮಾತ್ರ ಸ್ಥಗಿತಗೊಳಿಸುವ ಉದ್ದೇಶವಿತ್ತು. ಆದರೆ ಮತ್ತೆ ಪ್ರಚೋದಿತ ಹೇಳಿಕೆಯನ್ನು ಟ್ರಂಪ್ ನೀಡುವ ಸಾಧ್ಯತೆ ಇರುವುದರಿಂದ, ಅವರ ಖಾತೆಯನ್ನು ಅನಿರ್ದಿಷ್ಟವಾಗಿ ತಡೆಹಿಡಿಯಲಾಗಿದೆ.

ಟ್ವಿಟರ್ ಖಾತೆಯ ಮೇಲೂ ಕ್ರಮ

ಅಮೆರಿಕ ಸಂಸತ್ ಮೇಲಿನ ದಾಳಿ ಮತ್ತು ಹಿಂಸಾಚಾರ ಸಂಭವಿಸುತ್ತಲೇ ಟ್ರಂಪ್ ಟ್ವಿಟರ್ ಖಾತೆಯನ್ನು 12 ಗಂಟೆ ಕಾಲ ಸ್ಥಗಿತಗೊಳಿಸಲಾಗಿತ್ತು. ಅದಾದ ಬಳಿಕ, ಮತ್ತೆ ಬಳಕೆಗೆ ಒದಗಿಸಲಾಗಿದೆ. ಆದರೆ ಮತ್ತೆ ವಿವಾದಾತ್ಮಕ ಹೇಳಿಕೆ ನೀಡುವುದನ್ನು ಮುಂದುವರಿಸಿದರೆ, ಶಾಶ್ವತವಾಗಿ ಟ್ವಿಟರ್ ಖಾತೆಯನ್ನು ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ನೀಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.