ಗುರುವಾರ , ಸೆಪ್ಟೆಂಬರ್ 23, 2021
27 °C

ಬ್ಯುಸಿನೆಸ್ ಖಾತೆಗಳ ಆನ್‌ಲೈನ್‌ ಸ್ಟೇಟಸ್ ತೆಗೆದು ಹಾಕಿದ ವಾಟ್ಸ್‌ಆ್ಯಪ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Representative Image. Credit: AFP Photo

ಬೆಂಗಳೂರು: ವಾಟ್ಸ್ಆ್ಯಪ್ ಆಂಡ್ರಾಯ್ಡ್ ಆವೃತ್ತಿ ಬಳಕೆದಾರರಿಗೆ ಹೊಸ ಬೀಟಾ ಅಪ್‌ಡೇಟ್ ಪರಿಚಯಿಸಿದ್ದು, ಬ್ಯುಸಿನೆಸ್ ಖಾತೆ ಹೊಂದಿರುವವರಿಗೆ ನೂತನ ಆಯ್ಕೆ ಲಭ್ಯವಾಗಲಿದೆ.

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸ್‌ಆ್ಯಪ್ ಬ್ಯುಸಿನೆಸ್ ಖಾತೆ ಬಳಸುವವರಿಗೆ ಹೊಸ ಅಪ್‌ಡೇಟ್‌ನಿಂದ ಅನುಕೂಲವಾಗಲಿದೆ.

ವಾಟ್ಸ್‌ಆ್ಯಪ್ ಬ್ಯುಸಿನೆಸ್ ಖಾತೆಗಳಲ್ಲಿ ಮುಂದೆ ಆನ್‌ಲೈನ್ ಸ್ಟೇಟಸ್ ಮತ್ತು ಲಾಸ್ಟ್ ಸೀನ್ ಆಯ್ಕೆ ಕಾಣಿಸಿಕೊಳ್ಳುವುದಿಲ್ಲ. ಇದರಿಂದಾಗಿ ವಿವಿಧ ಉದ್ಯಮ ಮತ್ತು ವಾಣಿಜ್ಯ ಉದ್ದೇಶಕ್ಕೆ ವಾಟ್ಸ್ಆ್ಯಪ್ ಬ್ಯುಸಿನೆಸ್ ಆವೃತ್ತಿ ಬಳಸುವವರಿಗೆ ಪ್ರಯೋಜನವಾಗಲಿದೆ.

ಪ್ರಸ್ತುತ ಆಂಡ್ರಾಯ್ಡ್ ಬೀಟಾ ಆವೃತ್ತಿಯಲ್ಲಿ ಹೊಸ ಆಯ್ಕೆ ಪರಿಚಯಿಸಿ, ಪರಿಶೀಲಿಸಲಾಗುತ್ತಿದೆ. ಆದರೆ ವಾಟ್ಸ್‌ಆ್ಯಪ್ ವೆಬ್ ಮತ್ತು ಐಫೋನ್ ವಾಟ್ಸ್‌ಆ್ಯಪ್‌ಗಳಲ್ಲಿ ಆನ್‌ಲೈನ್ ಸ್ಟೇಟಸ್ ಮತ್ತು ಲಾಸ್ಟ್ ಸೀನ್ ಇನ್ನೂ ಕಾಣಿಸಿಕೊಳ್ಳುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು