ಶನಿವಾರ, ಮೇ 28, 2022
31 °C

ಟ್ವಿಟರ್‌ಗೆ ವಿದಾಯ ಹೇಳಿದ ಟ್ವಿಟರ್ ಇಂಡಿಯಾದ ಮಾಜಿ ಮುಖ್ಯಸ್ಥ ಮನೀಶ್‌ ಮಹೇಶ್ವರಿ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಟ್ವಿಟರ್ ಇಂಡಿಯಾದ ಮಾಜಿ ಮುಖ್ಯಸ್ಥ ಮನೀಶ್ ಮಹೇಶ್ವರಿ ಟ್ವಿಟರ್‌ಗೆ ವಿದಾಯ ಹೇಳಿದ್ದಾರೆ. 

ಈ ಕುರಿತು ಟ್ವೀಟ್‌ ಮಾಡಿರುವ ಅವರು, ‘ಭಾರವಾದ ಹೃದಯದಿಂದ ನಾನು ಟ್ವಿಟರ್‌ ಅನ್ನು ತೊರೆಯುತ್ತಿದ್ದೇನೆ. ಮೂರು ವರ್ಷಗಳ ಬಳಿಕ ಶಿಕ್ಷಣ ಹಾಗೂ ಬೋಧನೆಗೆ ನನ್ನನ್ನು ನಾನು ಅರ್ಪಿಸಿಕೊಳ್ಳುತ್ತಿದ್ದೇನೆ‘ ಎಂದು ತಿಳಿಸಿದ್ದಾರೆ. 

ಟ್ವಿಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರ ಸ್ಥಾನದಿಂದ ಮನೀಶ್‌ ಮಹೇಶ್ವರಿ ಆಗಸ್ಟ್‌ನಲ್ಲಿ ನಿರ್ಗಮಿಸಿದ್ದರು. ಆ ನಂತರ ಅವರಿಗೆ ಅಮೆರಿಕದಲ್ಲಿ ಉನ್ನತ ಹುದ್ದೆಯ ಜವಾಬ್ದಾರಿಯನ್ನು ಟ್ವಿಟರ್‌ ನೀಡಿತ್ತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು