ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಮೇನಲ್ಲಿ 71,132, ಜೂನ್‌ನಲ್ಲಿ 83,613 ಕಂಟೆಂಟ್ ತೆಗೆದುಹಾಕಿದ ಗೂಗಲ್

Last Updated 30 ಜುಲೈ 2021, 7:53 IST
ಅಕ್ಷರ ಗಾತ್ರ

ನವದೆಹಲಿ: ಬಳಕೆದಾರರ ದೂರುಗಳ ಆಧಾರದ ಮೇ ತಿಂಗಳಲ್ಲಿ 71,132 ಮತ್ತು ಜೂನ್‌ನಲ್ಲಿ 83,613 ಕಂಟೆಂಟ್‌ಗಳನ್ನು ತನ್ನ ವೇದಿಕೆಯಿಂದ ತೆಗೆದುಹಾಕಿರುವುದಾಗಿ ಗೂಗಲ್ ಕಂಪನಿ ಶುಕ್ರವಾರ ಬಿಡುಗಡೆ ಮಾಡಿರುವ ಮಾಸಿಕ ಪಾರದರ್ಶಕತೆ ವರದಿಯಲ್ಲಿ ತಿಳಿಸಿದೆ.

ಬಳಕೆದಾರರ ದೂರುಗಳಲ್ಲದೆ, ಗೂಗಲ್ ತನ್ನ ಸ್ವಯಂಚಾಲಿತ ಪತ್ತೆಯ ಪರಿಣಾಮವಾಗಿ ಮೇ ತಿಂಗಳಲ್ಲಿ 6,34,357 ಮತ್ತು ಜೂನ್‌ನಲ್ಲಿ 5,26,866 ಕಂಟೆಂಟ್‌ಗಳನ್ನು ತೆಗೆದುಹಾಕಿದೆ.

ಮೇ 26 ರಿಂದ ಜಾರಿಗೆ ಬಂದಿರುವ ಭಾರತದ ಹೊಸ ಐಟಿ ನಿಯಮಗಳ ಅನುಸರಣೆಯ ಭಾಗವಾಗಿ ಅಮೆರಿಕ ಮೂಲದ ಗೂಗಲ್ ಕಂಪನಿ ಈ ಪ್ರಕಟಣೆಗಳನ್ನು ಮಾಡಿದೆ. ಸ್ಥಳಿಯ ಕಾನೂನು ಮತ್ತು ವೈಯಕ್ತಿಕ ಹಕ್ಕುಗಳ ಉಲ್ಲಂಘನೆಯ ಆರೋಪದ ಮೇಲೆ ಭಾರತದ ಬಳಕೆದಾರರಿಂದ ಈ ವರ್ಷ ಏಪ್ರಿಲ್‌ನಲ್ಲಿ 27,700ಕ್ಕೂ ಹೆಚ್ಚು ದೂರುಗಳು ಬಂದಿದ್ದು, ಅದರನ್ವಯ 59,350 ಕಂಟೆಂಟ್ ತೆಗೆದುಹಾಕಲಾಗಿದೆ ಎಂದು ತನ್ನ ಮೊದಲ ವರದಿಯಲ್ಲಿ ತಿಳಿಸಿದೆ.

ಮೇ ತಿಂಗಳಲ್ಲಿ ಭಾರತೀಯ ವೈಯಕ್ತಿಕ ಬಳಕೆದಾರರಿಂದ 34,883 ದೂರುಗಳನ್ನು ಸ್ವೀಕರಿಸಲಾಗಿದೆ ಎಂದು ಗೂಗಲ್ ತನ್ನ ವರದಿಯಲ್ಲಿ ತಿಳಿಸಿದೆ. ಅದರನ್ವಯ, 71,132 ಕಂಟೆಂಟ್ ತೆಗೆಯಲಾಗಿದೆ ಎಂದು ತಿಳಿಸಿದೆ.
ಈ ದೂರುಗಳು ಗೂಗಲ್‌ನ ಎಸ್‌ಎಸ್‌ಎಂಐ (ಮಹತ್ವದ ಸಾಮಾಜಿಕ ಮಾಧ್ಯಮ ಮಧ್ಯವರ್ತಿ) ಪ್ಲಾಟ್‌ಫಾರ್ಮ್‌ಗಳಲ್ಲಿ ಸ್ಥಳೀಯ ಕಾನೂನುಗಳು ಅಥವಾ ವೈಯಕ್ತಿಕ ಹಕ್ಕುಗಳನ್ನು ಉಲ್ಲಂಘಿಸುವ ಮೂರನೇ ವ್ಯಕ್ತಿಯ ಕಂಟೆಂಟ್‌ಗಳಿಗೆ ಸಂಬಂಧಿಸಿದ್ದಾಗಿವೆ ಎಂದು ಅದು ಹೇಳಿದೆ.

ಕಾಪಿ ರೈಟ್ (70,365), ಮಾನನಷ್ಟ (753), ನಕಲಿ (5), ಇತರ ಕಾನೂನು (4) ಮತ್ತು ಗ್ರಾಫಿಕ್ ಲೈಂಗಿಕ ವಿಷಯ (2) ಸೇರಿದಂತೆ ಹಲವು ವರ್ಗಗಳ ಅಡಿಯಲ್ಲಿ ಬರುವ ಕಂಟೆಂಟ್‌ಗಳನ್ನು ತೆಗೆದುಹಾಕಲಾಗಿದೆ.

ಒಂದೇ ದೂರು ಒಂದೇ ಅಥವಾ ವಿಭಿನ್ನ ವಿಷಯಗಳಿಗೆ ಸಂಭಾವ್ಯವಾಗಿ ಸಂಬಂಧಿಸಿರುವ ಅನೇಕ ವಸ್ತುಗಳನ್ನು ನಿರ್ದಿಷ್ಟಪಡಿಸಬಹುದು ಎಂದು ಗೂಗಲ್ ವಿವರಿಸಿದೆ, ನಿರ್ದಿಷ್ಟ ದೂರಿನಲ್ಲಿರುವ ಪ್ರತಿಯೊಂದು ಯುಆರ್‌ಎಲ್ ಅನ್ನು ತೆಗೆದುಹಾಕಲಾದ ಪ್ರತ್ಯೇಕ ‘ಐಟಂ’ ಎಂದು ಪರಿಗಣಿಸಲಾಗುತ್ತದೆ ಎಂದು ಗೂಗಲ್ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT