ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಹಿತಿ ಕದಿಯುವ ಆ್ಯಪ್‌ಗಳು !

Last Updated 20 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಅತಿ ಹೆಚ್ಚು ಡೌನ್‌ಲೋಡ್ ಆಗುತ್ತಿರುವ ಆ್ಯಪ್‌ಗಳೇ ಬಳಕೆದಾರನ ಮಾಹಿತಿ ಕದಿಯುತ್ತಿವೆ. ಪ್ಲೇ ಸ್ಟೋರ್‌ ನಲ್ಲಿ ಇಂತಹ ಆ್ಯಪ್‌ಗಳಿವೆ ಎಂದು ಗೂಗಲ್‌ನ ಗಮನಕ್ಕೆ ಬರುವ ಹೊತ್ತಿಗಾಗಲೇ ಸಾಕಷ್ಟು ಮಾಹಿತಿಗಳು ಕಳುವಾಗಿಬಿಟ್ಟಿರುತ್ತವೆ. ಇದಕ್ಕೆ ಪರಿಹಾರ ಇದ್ದಂತೆ ಕಾಣುತ್ತಿಲ್ಲ. ಅಗತ್ಯವಿರುವ ಆ್ಯಪ್‌ಗಳನ್ನು ಮಾತ್ರ ಬಳಸುವುದೊಂದೇ ನಮ್ಮ ಮುಂದಿರುವ ಆಯ್ಕೆ.

ಗೂಗಲ್ ಪ್ಲೇ ಸ್ಟೋರ್ ಸುರಕ್ಷಿತವಾಗಿಲ್ಲ ಎನ್ನುವುದು ಜಗಜ್ಜಾಹೀರಾಗಿದೆ. ಹೀಗಿದ್ದರೂ ಗ್ರಾಹಕರ ವಿಶ್ವಾಸ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕಂಪನಿ ಅಷ್ಟಾಗಿ ತಲೆಕೆಡಿಸಿಕೊಳ್ಳುತ್ತಿಲ್ಲ. ಕಳೆದ ಅಕ್ಟೋಬರ್‌ನಿಂದ ಇಲ್ಲಿಯವರೆಗೆ ಪ್ಲೇ ಸ್ಟೋರ್‌ನಿಂದ ಕೈಬಿಟ್ಟಿರುವ ಆ್ಯಪ್‌ಗಳ ಸಂಖ್ಯೆಯನ್ನು ಗಮನಿಸಿದರೆ ಅದು ಇನ್ನಷ್ಟು ಸ್ಪಷ್ಟವಾಗುತ್ತದೆ.

ಮೊಬೈಲ್‌ನ ಮಾಹಿತಿಗಳೆಲ್ಲವನ್ನೂ ಕದಿಯುತ್ತಿದ್ದ 42 ಆ್ಯಪ್‌ಗಳನ್ನು ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾಗಿದೆ. ಈ ಆ್ಯಪ್‌ಗಳು ಮೊಬೈಲ್ ಸ್ಕ್ರೀನ್‌ನ ಪೂರ್ತಿ ಭಾಗದಲ್ಲಿಯೂ ಜಾಹೀರಾತು ಕಾಣಿಸಿಕೊಳ್ಳುವಂತೆ ಮಾಡುತ್ತಿದ್ದವು. ಅಲ್ಲದೆ, ಯಾವ ಮೊಬೈಲ್, ಅದರಲ್ಲಿ ಇರುವ ಒಎಸ್ ಯಾವುದು? ಬಳಸುತ್ತಿರುವ ಭಾಷೆ, ಎಷ್ಟು ಆ್ಯಪ್‌ಗಳು ಇನ್‌ಸ್ಟಾಲ್‌ ಆಗಿವೆ, ಮೊಬೈಲ್‌ನಲ್ಲಿ ಎಷ್ಟು ಖಾಲಿ ಜಾಗ ಉಳಿದಿದೆ, ಬ್ಯಾಟರಿ ಎಷ್ಟು ಖಾಲಿಯಾಗಿದೆ, ಫೇಸ್‌ಬುಕ್‌ ಮತ್ತು ಫೇಸ್‌ಬುಕ್‌ ಮೆಸೆಂಜರ್‌ ಇನ್‌ಸ್ಟಾಲ್‌ ಆಗಿದೆಯೇ .. ಹೀಗೆ ಇನ್ನೂ ಹಲವು ಮಾಹಿತಿಗಳನ್ನು ಕದಿಯುತ್ತಿದ್ದವು ಎಂದು ಸೈಬರ್ ಸುರಕ್ಷತಾ ಸಂಸ್ಥೆ ಇಎಸ್ಇಟಿ ತಿಳಿಸಿದೆ.

ಮಾಹಿತಿ ಕದಿಯುತ್ತಿರುವುದು ಗೂಗಲ್‌ನ ಸುರಕ್ಷತಾ ವ್ಯವಸ್ಥೆಯ ಗಮನಕ್ಕೆ ಬಾರದೇ ಇರುವ ರೀತಿಯಲ್ಲಿ ಈ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಲಾಗಿತ್ತು. ಹೀಗಾಗಿ, ದುರ್ಬಳಕೆ ಆಗುತ್ತಿರುವುದನ್ನು ಕಂಡುಕೊಳ್ಳಲು ಒಂದು ವರ್ಷವೇ ಬೇಕಾಯಿತು ಎಂದು ಹೇಳಿದೆ.

ಈ ಆ್ಯಪ್‌ಗಳು ಒಟ್ಟಾರೆ 80 ಲಕ್ಷ ಡೌನ್‌ಲೋಡ್‌ ಆಗಿವೆ. ಇವುಗಳಲ್ಲಿ video donwloader master ಅತಿ ಹೆಚ್ಚು ಅಂದರೆ 50 ಲಕ್ಷ ಆ್ಯಪ್‌ ಡೌನ್‌ಲೋಡ್‌ ಆಗಿವೆ.

ಕೆಲವು ಪ್ರಮುಖ ಆ್ಯಪ್‌ಗಳು

video donwloader master

alarm clock

calculator

Free magnifying Glass

super-bright flashlight

super-bright led falshlight

Smart Gallery

Savinsta

Free Radio FM

Smart Note

Free social video

Mp4 video downloader

Flat music players

Water drink reminder

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT