ರಮೇಶ್ ಕುಮಾರ್ 'ಅತ್ಯಾಚಾರ ಸಂತ್ರಸ್ತೆ' ಹೋಲಿಕೆಗೆ ನೆಟಿಜನ್‍ಗಳ ಆಕ್ರೋಶ

7

 ರಮೇಶ್ ಕುಮಾರ್ 'ಅತ್ಯಾಚಾರ ಸಂತ್ರಸ್ತೆ' ಹೋಲಿಕೆಗೆ ನೆಟಿಜನ್‍ಗಳ ಆಕ್ರೋಶ

Published:
Updated:

ಬೆಂಗಳೂರು: ಆಡಿಯೋ ಪ್ರಕರಣದ ಕುರಿತು ವಿಧಾಸಭೆಯಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿರುವ ಚರ್ಚೆಯ ವೇಳೆ ಮಾತನಾಡಿದ ಸಭಾಧ್ಯಕ್ಷ ರಮೇಶ್ ಕುಮಾರ್, ‘ನನ್ನ ಸ್ಥಿತಿ ರೇಪ್‌ಗೆ ಒಳಗಾದವರಂತಾಗಿದೆ’ ಎಂದು ಹೇಳಿದ್ದು, ಈ ಹೋಲಿಕೆಗೆ ನೆಟಿಜನ್‍ಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಡಳಿತ ಮತ್ತು ಬಿಜೆಪಿ ಸದಸ್ಯರು ಪದೇ ಪದೆ ತಮ್ಮ ಹೆಸರು ಪ್ರಸ್ತಾಪ ಮಾಡುತ್ತಿರುವುದನ್ನು ನೋಡಿ ಸಭಾಧ್ಯಕ್ಷರು, ‘ರೇಪ್ ಒಂದೇ ಸಲ ಆಗಿ ಹೋಗಿರುತ್ತದೆ. ಆದರೆ ವಿಚಾರಣೆ ವೇಳೆ ಯಾರು ಮಾಡಿದರು, ಎಲ್ಲಿ ಮಾಡಿದರು, ಹೇಗೆ ಮಾಡಿದರು, ಎಷ್ಟೊತ್ತು ಮಾಡಿದರು? ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಪದೇ ಪದೇ ಕೇಳಿ ಕಿರಿಕಿರಿ ಉಂಟು ಮಾಡಲಾಗುತ್ತದೆ. ಈ ಪ್ರಕರಣದಲ್ಲಿ ನನ್ನ ಸ್ಥಿತಿಯೂ ಹಾಗೆಯೇ ಆಗಿದೆ’ ಎಂದಿದ್ದರು. ಸಭಾಧ್ಯಕ್ಷರ ಈ ಮಾತಿಗೆ ಅಲ್ಲಿದ್ದ ಶಾಸಕರು ನಕ್ಕಿದ್ದಾರೆ.

ಕಲಾಪ ದೃಶ್ಯ ಮಾಧ್ಯಮಗಳಲ್ಲಿ ನೇರ ಪ್ರಸಾರವಾಗುತ್ತಿದ್ದಂತೆ ಸಭಾಧ್ಯಕ್ಷರ ಈ ಹೋಲಿಕೆ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಖಂಡನೆ ವ್ಯಕ್ತವಾಗಿದೆ. ಸಭಾಧ್ಯಕ್ಷರು ಸಂವೇದನಾರಹಿತ ಹೋಲಿಕೆ ನೀಡಿದ್ದು, ಕ್ಷಮೆಯಾಚಿಸಬೇಕೆಂದು ನೆಟಿಜನ್‍ಗಳು ಒತ್ತಾಯಿಸಿದ್ದಾರೆ. 

 

 

 

 

 

 

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !