ಶನಿವಾರ, ಸೆಪ್ಟೆಂಬರ್ 18, 2021
24 °C

ಟ್ವಿಟರ್ ಇಂಡಿಯಾ ಎಂಡಿಗೆ ಯುಪಿ ಪೊಲೀಸರು ನೀಡಿದ್ದ ನೋಟಿಸ್ ರದ್ದುಪಡಿಸಿದ ಹೈಕೋರ್ಟ್

ಡೆಕ್ಕನ್ ಹೆರಾಲ್ಡ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋಮು ಸೂಕ್ಷ್ಮ ವಿಡಿಯೊ ಟ್ವೀಟ್‌ ವಿಚಾರವಾಗಿ ‘ಟ್ವಿಟರ್‌ ಇಂಡಿಯಾ’ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ಅವರಿಗೆ ಉತ್ತರ ಪ್ರದೇಶ ಪೊಲೀಸರು ನೀಡಿದ್ದ ನೋಟಿಸ್‌ ಅನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ರದ್ದುಪಡಿಸಿದೆ.

ಗಾಜಿಯಾಬಾದ್‌ನಲ್ಲಿ ನಡೆದ ಹಲ್ಲೆಯದ್ದು ಎನ್ನಲಾದ ಕೋಮು ಸೂಕ್ಷ್ಮ ವಿಡಿಯೊವೊಂದನ್ನು ಟ್ವಿಟರ್ ಪ್ಲಾಟ್‌ಫಾರ್ಮ್‌ನಲ್ಲಿ ಬಳಕೆದಾರರೊಬ್ಬರು ಅಪ್‌ಲೋಡ್ ಮಾಡಿದ್ದರು. ಈ ವಿಚಾರವಾಗಿ ಮಹೇಶ್ವರಿ ಅವರಿಗೆ ನೋಟಿಸ್ ನೀಡಲಾಗಿತ್ತು.

ಓದಿ: ಟ್ವಿಟರ್ ಐಎನ್‌ಸಿಗೆ ಟ್ವಿಟರ್ ಇಂಡಿಯಾದಲ್ಲಿ ಯಾವ ಷೇರೂ ಇಲ್ಲ: ಹೈಕೋರ್ಟ್‌ಗೆ ಎಂಡಿ

ನ್ಯಾಯ ವ್ಯಾಪ್ತಿ ಮೀರಿ ಮತ್ತು ಕಾನೂನಿನ ಪರಿಮಿತಿಯಲ್ಲಿ ಒಳಗೊಳ್ಳದೆ ಅಪರಾಧ ದಂಡಸಂಹಿತೆಯ ಸೆಕ್ಷನ್ 41ರ ಅಡಿ ನೋಟಿಸ್ ನೀಡಲಾಗಿತ್ತು. ಜೂನ್ 17ರಂದು ಅಪರಾಧ ದಂಡಸಂಹಿತೆಯ ಸೆಕ್ಷನ್ 160ರ ಅಡಿ ಮೊದಲ ನೋಟಿಸ್ ನೀಡಲಾಗಿತ್ತು ಎಂದು ಮಹೇಶ್ವರಿ ಪರ ವಕೀಲರಾದ ಸಿ.ವಿ. ನಾಗೇಶ್ ವಾದಿಸಿದ್ದರು.

ನ್ಯಾಯಮೂರ್ತಿ ಜಿ. ನರೇಂದ್ರ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು