ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಕರ್ತರಿಗೆ ಆದಾಯ ಗಳಿಸಲು ಎಕ್ಸ್‌ನಲ್ಲಿ ಆಹ್ವಾನ ನೀಡಿದ ಮಸ್ಕ್‌

Published 22 ಆಗಸ್ಟ್ 2023, 3:28 IST
Last Updated 22 ಆಗಸ್ಟ್ 2023, 3:28 IST
ಅಕ್ಷರ ಗಾತ್ರ

ಸ್ಯಾನ್‌ಫ್ರಾನ್ಸಿಸ್ಕೊ: ಬರವಣಿಗೆಗೆ ಮುಕ್ತ ಸ್ವಾತಂತ್ರ್ಯಕಲ್ಪಿಸುವ ನಿಟ್ಟಿನಲ್ಲಿ ಹಾಗೂ ಪತ್ರಕರ್ತರು ಆದಾಯ ಗಳಿಸಲು ನೇರವಾಗಿ ತಮ್ಮ ಲೇಖನಗಳನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ (ಟ್ವಿಟರ್‌) ಪ್ರಕಟಿಸುವಂತೆ ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ ಮನವಿ ಮಾಡಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಮಸ್ಕ್‌ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಪತ್ರಕರ್ತರು ತಾವು ಬರೆದಿರುವ ಲೇಖನಗಳನ್ನು ಎಕ್ಸ್‌ನಲ್ಲಿ ಪ್ರಕಟಿಸಿದರೆ, ಲೇಖನಗಳನ್ನು ಓದುವವರಿಗೆ ಇಂತಿಷ್ಟು ಶುಲ್ಕವೆಂದು ವಿಧಿಸಲಾಗುವುದು. ಇದರಿಂದ ಪತ್ರಕರ್ತರು ಹೆಚ್ಚಿನ ಹಣ ಗಳಿಸಬಹುದು ಎಂದು ಮಸ್ಕ್‌ ಮಾಹಿತಿ ನೀಡಿದ್ದಾರೆ.

ಲೇಖನಗಳ ಆಧಾರದ ಮೇಲೆ ಓದುಗಾರರಿಗೆ ಶುಲ್ಕ ವಿಧಿಸಲಾಗುವುದು. ಚಂದದಾರರಾಗದಿದ್ದರೆ, ಶುಲ್ಕದ ಪ್ರಮಾಣ ಹೆಚ್ಚಿಸಲಾಗುತ್ತದೆ ಎಂದು ಮಸ್ಕ್‌ ತಿಳಿಸಿದ್ದಾರೆ.

ಮಸ್ಕ್ ಅವರು ಟ್ವಿಟರ್‌ ಅನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡ ಬಳಿಕ ಪ್ರಸಿದ್ಧ ಮೈಕ್ರೋಬ್ಲಾಗಿಂಗ್‌ ಪ್ಲಾಟ್‌ಫಾರ್ಮ್​ನಲ್ಲಿ ಹಲವು ಬದಲಾವಣೆ ಮಾಡುತ್ತಲೇ ಇದ್ದಾರೆ. ಜುಲೈ 24ರಂದು ಮಿನುಗುತ್ತಿರುವ ‘X’ ಚಿತ್ರವನ್ನು ಮಸ್ಕ್‌ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿ ಹೊಸ ಲೋಗೊವನ್ನು ಘೋಷಣೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT