ಸೋಮವಾರ, ಅಕ್ಟೋಬರ್ 21, 2019
26 °C

ಟ್ವಿಟರ್‌ನಲ್ಲಿ ನರೇಂದ್ರ ಮೋದಿ ಗೋಬ್ಯಾಕ್- ವೆಲ್‌ಕಮ್ ಸಂಘರ್ಷ

Published:
Updated:
Narendra Modi Xi Jinping

ಚೆನ್ನೈ:  ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಎರಡು ದಿನಗಳ ಭೇಟಿಗಾಗಿ ಶುಕ್ರವಾರ ಭಾರತಕ್ಕೆ ಬರುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಷಿ ಅವರನ್ನು ಸ್ವಾಗತಿಸಲು ತಮಿಳುನಾಡಿನ ಕಡಲತಡಿಯ ಪ್ರವಾಸಿತಾಣ ಮಾಮಲ್ಲಪುರಂ ಸಜ್ಜುಗೊಂಡಿದೆ. ನರೇಂದ್ರ ಮೋದಿಯವರು ಈಗ ಚೆನ್ನೈ ತಲುಪಿದ್ದಾರೆ.

ಷಿ ಜಿನ್‌ಪಿಂಗ್ ಅವರು  ಶುಕ್ರವಾರ ಬೆಳಗ್ಗೆ ಬೀಜಿಂಗ್‌ನಿಂದ ಚೆನ್ನೈಗೆ ಹೊರಟಿದ್ದು ಮಧ್ಯಾಹ್ನ 2.10ಕ್ಕೆ ತಲುಪಲಿದ್ದಾರೆ ಎಂದು ಎಎನ್ಐ ಸುದ್ದಿಸಂಸ್ಥೆ ಟ್ವೀಟಿಸಿದೆ.

ತಮಿಳುನಾಡಿಗೆ ಮೋದಿ ಭೇಟಿ ನೀಡುತ್ತಿರುವ ಹೊತ್ತಲ್ಲಿ ಬಿಜೆಪಿ ಅಭಿಮಾನಿಗಳು ಮತ್ತು ವಿರೋಧಿಗಳ ನಡುವೆ ಟ್ವಿಟರ್‌ ಸಮರವೇರ್ಪಟ್ಟಿದೆ.

ಇದನ್ನೂ ಓದಿ:  ಷಿ–ಮೋದಿ ಸ್ವಾಗತಕ್ಕೆ ಮಾಮಲ್ಲಪುರಂ ಸಜ್ಜು

ಮೋದಿ ಭೇಟಿ ವಿರೋಧಿಸಿ ಟ್ವಿಟರ್‌ನಲ್ಲಿ #GoBackModi ಹ್ಯಾಶ್‌ಟ್ಯಾಗ್  ಟ್ರೆಂಡ್ ಆಗಿದೆ.

2018ರ ಏಪ್ರಿಲ್‌ 12ರಂದು ಮೋದಿ ಅವರು ಚೆನ್ನೈಗೆ ಭೇಟಿ ಕೊಟ್ಟಾಗ ‘ಗೋಬ್ಯಾಕ್‌ ಮೋದಿ’ ಹ್ಯಾಶ್‌ಟ್ಯಾಗ್‌ ಮೊದಲ ಬಾರಿಗೆ ಜೋರು ಸದ್ದು ಮಾಡಿತ್ತು. ರಾಜ್ಯಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಕೇಂದ್ರದ ನಿಷ್ಕ್ರಿಯತೆಯನ್ನು ವಿರೋಧಿಸಿ ಈ ಹ್ಯಾಶ್‌ಟ್ಯಾಗ್ ಆರಂಭಿಸಲಾಗಿತ್ತು. ಇದಕ್ಕೆ ಭಾರಿ ಬೆಂಬಲವೂ ವ್ಯಕ್ತವಾಗಿತ್ತು. 

ಇದನ್ನೂ ಓದಿ: 'Go Back Modi' ಅಂದರೆ ದೆಹಲಿಗೆ ಹೋಗಿ ಮತ್ತೆ ಅಧಿಕಾರದಲ್ಲಿ ಕುಳಿತುಕೊಳ್ಳಿ: ಮೋದಿ

 ಇದರ ಜತೆಗೆ #TNWelcomesModi  ಎಂಬ ಹ್ಯಾಶ್‌ಟ್ಯಾಗ್ ಮೂಲಕ ಕೆಲವು ಟ್ವೀಟಿಗರು ಮೋದಿಗೆ ಸ್ವಾಗತ ಕೋರಿದ್ದಾರೆ.

ಇದನ್ನೂ ಓದಿತಮಿಳು ಭಾಷೆ ಹೊಗಳಿದ ಮೋದಿ

 

 

Post Comments (+)