ಗುರುವಾರ , ಜೂಲೈ 9, 2020
21 °C

ಫೇಸ್‌ಬುಕ್ ಪ್ರೊಫೈಲ್‌ಗೂ ಬೀಗಹಾಕಬಹುದು!

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

Prajavani

ಸಾಮಾಜಿಕ ಜಾಲತಾಣಗಳಲ್ಲಿ, ವಿಶೇಷವಾಗಿ ಮಹಿಳಾ ಸುರಕ್ಷತೆಯ ದೃಷ್ಟಿಯಿಂದ, ನಮ್ಮ ಪ್ರೊಫೈಲ್ ಚಿತ್ರವನ್ನು ಬೇರೆಯವರು ಡೌನ್‌ಲೋಡ್ ಮಾಡಿ, ತಿರುಚಿ ಶೇರ್ ಮಾಡದಂತೆ ಅಥವಾ ಬೇರೆ ಖಾತೆಗೆ ಅಳವಡಿಸಿಕೊಳ್ಳದಂತೆ ಫೇಸ್‌ಬುಕ್ ಅದನ್ನು ಲಾಕ್ ಮಾಡುವ ಸೌಕರ್ಯವನ್ನು ಪರಿಚಯಿಸಿತ್ತು. ಇದನ್ನು ನಮ್ಮ ಪ್ರೈವೆಸಿ ವಿಭಾಗದಲ್ಲಿ ಸಕ್ರಿಯಗೊಳಿಸಬಹುದಾಗಿತ್ತು.

ಇದೀಗ ಹೊಸ ವೈಶಿಷ್ಟ್ಯವನ್ನು ಫೇಸ್‌ಬುಕ್ ಪರಿಚಯಿಸುತ್ತಿದೆ. ಇದು ಪ್ರೊಫೈಲ್ ಫೋಟೋವನ್ನು ಲಾಕ್ ಮಾಡುವ 'ಪ್ರೊಫೈಲ್ ಪಿಕ್ಚರ್ ಗಾರ್ಡ್'ನ ಮುಂದುವರಿದ ಭಾಗ. ಅಂದರೆ, ನಮ್ಮ ಇಡೀ ಪ್ರೊಫೈಲನ್ನೇ ಲಾಕ್ ಮಾಡುವುದು. ಈ ರೀತಿ ಮಾಡಿದರೆ, ನಮ್ಮ ಪ್ರೊಫೈಲ್ ಚಿತ್ರವಷ್ಟೇ ಅಲ್ಲದೆ, ನಮ್ಮ ಯಾವುದೇ ಅಪ್‌ಡೇಟ್‌ಗಳು ಕೂಡ ನಮ್ಮ ಸ್ನೇಹಿತರಲ್ಲದವರಿಗೆ ಕಾಣಿಸುವುದಿಲ್ಲ. ಇದು ನಮ್ಮ ಪ್ರೊಫೈಲನ್ನೇ ಲಾಕ್ ಮಾಡುವ ವಿಧಾನ.

ಈ ಲಾಕ್ ಆನ್ ಮಾಡಿಟ್ಟುಕೊಂಡರೆ, ನೀಲಿ ಬಣ್ಣದ ಬ್ಯಾಡ್ಜ್ ಒಂದು ಕಾಣಿಸುತ್ತದೆ. ನಾವು ಮಾಡುವ ಯಾವುದೇ ಪೋಸ್ಟ್‌ಗಳು ನಮ್ಮ ಸ್ನೇಹಿತರಿಗೆ ಮಾತ್ರವೇ ಕಾಣಿಸುತ್ತದೆ. ಪೋಸ್ಟ್ ಮಾಡುವಾಗಲೇ 'ಪಬ್ಲಿಕ್' ಆಗಿ ಪೋಸ್ಟ್ ಮಾಡಲಾಗುವುದಿಲ್ಲ ಎಂಬ ಎಚ್ಚರಿಕೆಯುಳ್ಳ ಸಂದೇಶವೊಂದು ಪಾಪ್-ಅಪ್ ಆಗುತ್ತದೆ.

ಈ ಸೌಕರ್ಯವು ಭಾರತದ ಫೇಸ್‌ಬುಕ್ ಬಳಕೆದಾರರಿಗೂ ಹಂತಹಂತವಾಗಿ ಪರಿಚಯಿಸಲಾಗುತ್ತಿದ್ದು, ಕೆಲವರಿಗೆ ಈಗಾಗಲೇ ಲಭ್ಯವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು