ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇನ್ನು ಮುಂದೆ ವಾಟ್ಸ್‌ಆ್ಯಪ್‌ ಸಂದೇಶಗಳನ್ನು ‘ಎಡಿಟ್‌’ ಮಾಡಲು ಸಿಗಲಿದೆ ಅವಕಾಶ: ಆದರೆ...

Published 22 ಮೇ 2023, 15:44 IST
Last Updated 22 ಮೇ 2023, 15:44 IST
ಅಕ್ಷರ ಗಾತ್ರ

ಬೆಂಗಳೂರು: ವಾಟ್ಸ್‌ಆ್ಯಪ್‌ ಬಳಕೆದಾರರು ಇನ್ನು ಮುಂದೆ ತಾವು ಕಳುಹಿಸಿದ ಸಂದೇಶಗಳನ್ನು ‘ಎಡಿಟ್‌’ (ತಿದ್ದುವಿಕೆ) ಮಾಡಬಹುದು.

ಈ ವಿಷಯವನ್ನು ವಾಟ್ಸ್‌ಆ್ಯಪ್‌ ಸೋಮವಾರ ಘೋಷಿಸಿದೆ.

‘ಕಾಗುಣಿತ ತಪ್ಪು ಸರಿಪಡಿಸುವುದರಿಂದ ಹಿಡಿದು, ಸಂದೇಶಕ್ಕೆ ಹೆಚ್ಚುವರಿಯಾಗಿ ಮತ್ತಷ್ಟು ವಿಷಯ ಸೇರಿಸುವವರೆಗೆ ನಿಮ್ಮ ಚಾಟ್‌ಗಳ ಮೇಲೆ ನಿಮಗೆ ಹೆಚ್ಚಿನ ನಿಯಂತ್ರಣ ನೀಡಲು ನಾವು ಉತ್ಸುಕರಾಗಿದ್ದೇವೆ. ನೀವು ಮಾಡಬೇಕಾಗಿರುವುದು ಇಷ್ಟೇ. ಕಳುಹಿಸಿದ ಸಂದೇಶವನ್ನು ಲಾಂಗ್‌ಪ್ರೆಸ್‌ ಮಾಡಿದರೆ, ಅಲ್ಲಿ ನಿಮಗೆ ‘ಎಡಿಟ್‌’ ಆಯ್ಕೆ ಕಾಣುತ್ತದೆ. ‘ಎಡಿಟ್‌’ ಮೇಲೆ ಟ್ಯಾಪ್‌ ಮಾಡಿ ನೀವು ನಿಮ್ಮ ಸಂದೇಶವನ್ನು ತಿದ್ದಬಹುದು. ಆದರೆ, ಸಂದೇಶ ಕಳುಹಿಸಿದ 15 ನಿಮಿಷಗಳ ವರೆಗೆ ಮಾತ್ರ ನಿಮಗೆ ಈ ಅವಕಾಶ ಇರಲಿದೆ’ ಎಂದು ವಾಟ್ಸ್‌ಆ್ಯಪ್‌ ತಿಳಿಸಿದೆ.

ತಿದ್ದಲಾದ ಸಂದೇಶಗಳ ಪಕ್ಕದಲ್ಲೇ ‘ಎಡಿಟೆಡ್‌’ ಎಂದು ತೋರಿಸುತ್ತಿರುತ್ತದೆ. ಹೀಗಾಗಿ ಸಂದೇಶ ಸ್ವೀಕರಿಸಿದವರಿಗೆ ಇದು ತಿದ್ದುಪಡಿಯಾದ ಸಂದೇಶ ಎಂಬುದು ಗೊತ್ತಾಗುತ್ತದೆ. ಆದರೆ, ‘ಎಡಿಟ್‌ ಹಿಸ್ಟ್ರಿ’ ಗೊತ್ತಾಗುವುದಿಲ್ಲ ಎಂದು ಮೆಸೆಜಿಂಗ್‌ ಆ್ಯಪ್‌ ತಿಳಿಸಿದೆ.

ಈ ವಿಶೇಷತೆ ಜಾಗತಿಕವಾಗಿ ಮುಂಬರುವ ವಾರಗಳಲ್ಲಿ ಎಲ್ಲರಿಗೂ ಲಭ್ಯವಾಗಲಿದೆ ಎಂದು ವಾಟ್ಸ್‌ಆ್ಯಪ್‌ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT