ಶುಕ್ರವಾರ, ಜನವರಿ 21, 2022
30 °C

ಧನ್ಯವಾದ ಜಾಕ್: ಟ್ವಿಟರ್‌ನ ಮಾಜಿ ಸಿಇಒ ಜೊತೆಗಿನ ಫೋಟೊ ಹಂಚಿಕೊಂಡ ಅಗರ್‌ವಾಲ್

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಟ್ವಿಟರ್‌ನ ನೂತನ ಸಿಇಒ ಆಗಿ ನೇಮಕಗೊಂಡಿರುವ ಪರಾಗ್ ಅಗರ್‌ವಾಲ್ ಅವರು ಮಾಜಿ ಸಿಇಒ ಜಾಕ್‌ ಡೋರ್ಸಿ ಜೊತೆಗಿನ ಚಿತ್ರವನ್ನು ಟ್ವೀಟ್‌ ಮಾಡುವ ಮೂಲಕ ಧನ್ಯವಾದ ತಿಳಿಸಿದ್ದಾರೆ. 

ಜಾಕ್‌ ಡೋರ್ಸಿ ಜೊತೆಗೆ ನಗುತ್ತ ನಿಂತಿರುವ ಚಿತ್ರವನ್ನು ಅಗರ್‌ವಾಲ್ ಟ್ವೀಟಿಸಿದ್ದಾರೆ. ಅದರ ಜೊತೆಗೆ ‘ಧನ್ಯವಾದ ಜಾಕ್‘ ಎಂದೂ ಬರೆದುಕೊಂಡಿದ್ದಾರೆ.

ಟ್ವಿಟರ್‌ನ ಸಹ ಸಂಸ್ಥಾಪಕ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಥಾನಕ್ಕೆ ಜಾಕ್‌ ಡೋರ್ಸಿ ಅವರು ಸೋಮವಾರ ರಾಜೀನಾಮೆ ನೀಡಿದ್ದಾರೆ. 

ಟ್ವಿಟರ್‌ನ ಪ್ರಸ್ತುತ ಮುಖ್ಯ ತಂತ್ರಜ್ಞಾನ ಅಧಿಕಾರಿ ಪರಾಗ್ ಅಗರ್‌ವಾಲ್ ಸಿಇಒ ಸ್ಥಾನ ವಹಿಸಿಕೊಳ್ಳಲಿದ್ದಾರೆ. 

ಡೋರ್ಸಿ ಅವರ ನಿರ್ಗಮನಕ್ಕೆ ಕಂಪನಿಯ ಆಡಳಿತ ಮಂಡಳಿಯು ವರ್ಷದಿಂದ ಸಿದ್ಧತೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಫೇಸ್‌ಬುಕ್ ಮತ್ತು ಟಿಕ್‌ಟಾಕ್‌ನಂತಹ ಸಾಮಾಜಿಕ ಮಾಧ್ಯಮ ಪ್ರತಿಸ್ಪರ್ಧಿಗಳೊಂದಿಗೆ ಪೈಪೋಟಿ ನಡೆಸಲು ಮತ್ತು 2023 ರ ವೇಳೆಗೆ ವಾರ್ಷಿಕ ಆದಾಯವನ್ನು ದ್ವಿಗುಣಗೊಳಿಸುವ ಗುರಿಯನ್ನು ತಲುಪಲು ಟ್ವಿಟರ್ ಕಳೆದ ವರ್ಷ ತನ್ನ ಉತ್ಪನ್ನದ ಆವಿಷ್ಕಾರದ ವೇಗವನ್ನು ಹೆಚ್ಚಿಸಲಾರಂಭಿಸಿತ್ತು. ಈ ಮಧ್ಯೆ ಡೋರ್ಸಿ  ನಿರ್ಗಮನವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು