ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ನರೇಂದ್ರ ಮೋದಿ ಲಡಾಖ್ ಭೇಟಿ: ಟ್ವಿಟರ್‌ನಲ್ಲಿ ಪರ–ವಿರೋಧ ಚರ್ಚೆ

ಅಕ್ಷರ ಗಾತ್ರ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಲಡಾಖ್‌ಗೆ ಭೇಟಿ ನೀಡಿರುವ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪರ–ವಿರೋಧ ಚರ್ಚೆ ನಡೆಯುತ್ತಿದೆ. #ModiRocksChinShocked ಹ್ಯಾಷ್‌ಟ್ಯಾಗ್‌ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದೆ. #ModiStrongestPmEver ಹ್ಯಾಷ್‌ಟ್ಯಾಗ್‌ ಸಹ ಟ್ರೆಂಡಿಂಗ್ ಆಗಿದೆ.

‘ಯಾವತ್ತೂ ಮುಂದೆ ನಿಂತು ಮುನ್ನಡೆಸುವವರು. ನನ್ನ ಪ್ರಧಾನಿ ನನ್ನ ಹೆಮ್ಮೆ’ ಎಂದು ಸೋನಿಕಾ ಶರ್ಮಾ ಎಂಬುವವರು ಟ್ವೀಟ್ ಮಾಡಿದ್ದಾರೆ.

ನಿಮುವಿನಲ್ಲಿ ಮಾತನಾಡುತ್ತಿರುವ ಪ್ರಧಾನಿ, ನಮ್ಮ ಸಶಶ್ತ್ರ ಪಡೆಗಳ ಬಗ್ಗೆ ದೇಶದ ಜನರಿಗೆ ಹೆಮ್ಮೆಯಿದೆ ಎಂದು ಧರ್ಮವೀರ್ ಜಂಗ್ರಾ ಎಂಬುವವರು ಟ್ವೀಟ್ ಮಾಡಿದ್ದಾರೆ.

‘ನೊ ಕ್ಯಾಪ್ಷನ್ ನೀಡೆಡ್’ ಎಂದು ಮಾಜಿ ಪ್ರಧಾನಿ ಡಾ.ಮನಮೋಹ್ ಸಿಂಗ್ ಅವರ ಚಿತ್ರದ ಜತೆ ಮೋದಿಯವರನ್ನು ಹೋಲಿಸಿ ಪುಷ್ಪೇಂದ್ರ ಕುಲಶ್ರೇಷ್ಠ ಎಂಬುವವರು ಟ್ವೀಟ್ ಮಾಡಿದ್ದಾರೆ.

‘ಚೀನಾ ನಮ್ಮ ಭೂಮಿಯನ್ನು ವಶಪಡಿಸಿದೆ ಎಂದು ಲಡಾಖ್‌ನವರು ಹೇಳುತ್ತಿದ್ದಾರೆ. ಯಾರೂ ನಮ್ಮ ಭೂಪ್ರದೇಶವನ್ನು ಅತಿಕ್ರಮಿಸಿಲ್ಲ ಎಂದು ಪ್ರಧಾನಿ ಮೋದಿಯವರು ಹೇಳುತ್ತಿದ್ದಾರೆ. ನಿಶ್ಚಿತವಾಗಿಯೂ ಯಾರೋ ಒಬ್ಬರು ಸುಳ್ಳು ಹೇಳುತ್ತಿದ್ದಾರೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

‘#ModiRocksChinShocked #ModiStrongestPmEver ಹ್ಯಾಷ್‌ಟ್ಯಾಗ್‌ಗಳನ್ನು ಟ್ರೆಂಡ್ ಮಾಡುತ್ತಿರುವ ಮೂರ್ಖರು, ಚೀನಾ ನಮ್ಮ ಭೂಪ್ರದೇಶಕ್ಕೆ ಅಕ್ರಮ ಪ್ರವೇಶ ಮಾಡಿತ್ತು ಮತ್ತು 20 ಯೋಧರನ್ನು ಹತ್ಯೆ ಮಾಡಿತ್ತು ಎಂಬುದನ್ನು ಮನವರಿಕೆ ಮಾಡಿಕೊಳ್ಳಿ. ಅವರು ನಮ್ಮ ಭೂಪ್ರದೇಶದ 8 ಕಿಲೋಮೀಟರ್ ಒಳಗೆ ಸಂಕೇತ ಪ್ರಕಟಿಸಿದ್ದಾರೆ ಮತ್ತು ಗಾಲ್ವನ್ ಕಣಿವೆಯ 423 ಮೀಟರ್ ಪ್ರದೇಶ ಅತಿಕ್ರಮಿಸಿದ್ದಾರೆ. ಸುಳ್ಳು ಅನಿಸಿಕೆಗಳನ್ನು ಯಾಕೆ ಹರಡಬೇಕು?’ ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT