ಮಂಗಳವಾರ, ಅಕ್ಟೋಬರ್ 20, 2020
22 °C

ಕಮಲಾ ಹ್ಯಾರಿಸ್ ಹೆಸರು ತಪ್ಪಾಗಿ ಉಚ್ಚರಿಸಿದ ರಿಪಬ್ಲಿಕನ್ ಸಂಸದ: ಪರಿಣಾಮವೇನು?

ಪಿಟಿಐ Updated:

ಅಕ್ಷರ ಗಾತ್ರ : | |

Kamala Harris

ವಾಷಿಂಗ್ಟನ್: ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರ ಹೆಸರನ್ನು ರಿಪಬ್ಲಿಕನ್ ಪಕ್ಷದ ಸಂಸದ ಡೇವಿಡ್ ಪರ್ಡ್ಯೂ ತಪ್ಪಾಗಿ ಉಚ್ಚರಿಸಿದ್ದು ಕಮಲಾ ಬೆಂಬಲಿಗರ ಆಕ್ರೋಶಕ್ಕೆ ಗುರಿಯಾಗಿದೆ. ಕಮಲಾ ಅವರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣಗಳಲ್ಲಿ #MyNameIs ಹಾಗೂ #IstandwithKamala ಹ್ಯಾಷ್‌ಟ್ಯಾಗ್‌ಗಳೊಂದಿಗೆ ಅಭಿಯಾನ ಆರಂಭಿಸಲಾಗಿದೆ.

ಜಾರ್ಜಿಯಾದ ಮ್ಯಾಕಾನ್ ನಗರದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚುನಾವಣಾ ಪ‍್ರಚಾರ ರ್‍ಯಾಲಿಯಲ್ಲಿ ಮಾತನಾಡಿದ ಡೇವಿಡ್ ಅವರು, ‘ಕಾಹ್–ಮಾಹ್–ಲಾಹ್? ಕಮಲಾ–ಮಲಾ–ಮಲಾ? ನನಗೆ ಗೊತ್ತಿಲ್ಲ. ಏನೋ ಒಂದು’ ಎಂದು ಸಾವಿರಾರು ಮಂದಿಯ ಸಮ್ಮುಖದಲ್ಲಿ ಹೇಳಿದ್ದರು.

ಇದು ಕಮಲಾ ಬೆಂಬಲಿಗರ ಆಕ್ರೋಶಕ್ಕೆ ಗುರಿಯಾಗಿದೆ. ‘ನಾನಿದನ್ನು ಹಗುರವಾಗಿ ಪರಿಗಣಿಸುತ್ತೇನೆ. ನೀವು ಡೇವಿಡ್ ಪರ್ಡ್ಯೂ ಅವರ ಹೆಸರನ್ನು ಉಚ್ಚರಿಸಬಲ್ಲವರಾದರೆ ಭಾವಿ ಉಪಾಧ್ಯಕ್ಷೆ ಕಮಲಾ ಅವರ ಹೆಸರನ್ನೂ ಉಚ್ಚರಿಸಬಲ್ಲಿರಿ’ ಎಂದು ಕಮಲಾ ಹ್ಯಾರಿಸ್ ವಕ್ತಾರ ಸಬ್ರಿನಾ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: 

ಕಮಲಾ ಹೆಸರನ್ನು ತಪ್ಪಾಗಿ ಉಚ್ಚರಿಸಿದ್ದರಿಂದ ಜಾರ್ಜಿಯಾದಿಂದ ಮರುಆಯ್ಕೆ ಬಯಸುತ್ತಿರುವ ಡೇವಿಡ್‌ಗೆ ಹಿನ್ನಡೆಯಾಗಿದೆ ಎಂದು ‘ಬಜ್‌ಫೀಡ್’ ಮಾಧ್ಯಮ ಶನಿವಾರ ವರದಿ ಮಾಡಿತ್ತು.

ಅನೇಕರು ತಮ್ಮ ಹೆಸರಿನ ಅರ್ಥಗಳನ್ನು ಟ್ವೀಟ್ ಮಾಡುವ ಮೂಲಕ ಡೇವಿಡ್‌ ವಿರುದ್ಧದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನ್ಯೂಯಾರ್ಕ್‌ನ ಮಾಜಿ ಅಟಾರ್ನಿ ಜನರಲ್ ಪ್ರೀತ್ ಭರಾರ ಅವರು, ‘ನನ್ನ ಹೆಸರು ಪ್ರೀತ್. ಅಂದರೆ ಪ್ರೀತಿ ಎಂದರ್ಥ’ ಎಂದು ಟ್ವೀಟ್ ಮಾಡಿದ್ದಾರೆ.

‘ನನ್ನ ಹೆಸರು ಮೀನಾಕ್ಷಿ. ಹಿಂದೂ ದೇವರ ಹೆಸರು, ನನ್ನ ಮುತ್ತಜ್ಜಿಯ ಹೆಸರು. ಪರಂಪರೆಯ ಬಗ್ಗೆ ಹೆಮ್ಮೆಪಡುವಂತೆ ಮತ್ತು ಗೌರವ ಹೊಂದುವಂತೆ, ವಿಶೇಷವಾಗಿ ಡೇವಿಡ್ ಪರ್ಡ್ಯೂನಂತಹ ಬಿಳಿಯ ಜನಾಂಗೀಯ ಪುರುಷರ ಬೆದರಿಕೆಗಳಿಗೆ ಬಗ್ಗದಿರುವಂತೆ ಕಲಿಸಿದ್ದ ಮಹಿಳೆಯರ ಹಿನ್ನೆಲೆಯಿಂದ ನಾನು ಬಂದಿದ್ದೇನೆ’ ಮೀನಾ ಹ್ಯಾರಿಸ್ ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು