ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿದ್ಧಾರ್ಥ್ ಮಲ್ಯ– ಜಾಸ್ಮಿನ್ ವಿವಾಹ ಆರಂಭ: ಸಂತಸ ಹಂಚಿಕೊಂಡ ಜೋಡಿ

Published 18 ಜೂನ್ 2024, 15:51 IST
Last Updated 18 ಜೂನ್ 2024, 15:51 IST
ಅಕ್ಷರ ಗಾತ್ರ

ಮುಂಬೈ: ಉದ್ಯಮಿ, ಮದ್ಯದ ದೊರೆ ಎಂದೇ ಹೆಸರಾದ ವಿಜಯ್ ಮಲ್ಯ ಪುತ್ರ ಸಿದ್ಧಾರ್ಥ ಮಲ್ಯ ತಮ್ಮ ಬಹುಕಾಲದ ಗೆಳತಿ ಜಾಸ್ಮಿನ್‌ ಅವರನ್ನು ವಿವಾಹವಾಗುತ್ತಿದ್ದಾರೆ.

ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಜಾಸ್ಮಿನ್‌ ಅವರೊಂದಿಗೆ ಪೋಸ್ಟ್‌ ಹಂಚಿಕೊಂಡಿರುವ ಅವರು, ‘ವಿವಾಹದ ವಾರ ಆರಂಭವಾಗಿದೆ’ ಎಂದು ಬರೆದುಕೊಂಡಿದ್ದಾರೆ.

ಈ ಜೋಡಿ 2023ರ ನವೆಂಬರ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿತ್ತು.

ಮಾಡೆಲ್‌ ಹಾಗೂ ನಟರಾಗಿರುವ ಸಿದ್ಧಾರ್ಥ್ ಮಲ್ಯ ಕ್ಯಾಲಿಪೋರ್ನಿಯಾದ ಲಾಸ್‌ಏಂಜಲಿಸ್‌ನಲ್ಲಿ ವಾಸವಾಗಿದ್ದಾರೆ.

ಜಾಸ್ಮಿನ್‌ ಕೂಡ ಅಮೆರಿಕದಲ್ಲೇ ವಾಸವಿದ್ದು ಆಗಾಗ ಪ್ರಯಾಣದ ವಿಡಿಯೊಗಳನ್ನು ಹಂಚಿಕೊಳ್ಳುತ್ತಾರೆ.

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಫೋಟೊದಲ್ಲಿ ಸಿದ್ಧಾರ್ಥ್‌ ಬಿಳಿ ಬಣ್ಣದ ಶರ್ಟ್‌ ಮತ್ತು ಗುಲಾಬಿ ಬಣ್ಣದ ಉಡುಗೆ ತೊಟ್ಟಿದ್ದಾರೆ. ಜಾಸ್ಮಿನ್‌ ತಿಳಿ ಹಸಿರು ಬಣ್ಣದ ಉಡುಪಿನಲ್ಲಿ ಕಂಗೊಳಿಸಿದ್ದಾರೆ. 

ಮದುವೆಯ ಕುರಿತು ಪೋಸ್ಟ್‌ ಹಂಚಿಕೊಂಡ ಬಳಿಕ ಈ ಜೋಡಿಗೆ ಅಭಿಮಾನಿಗಳು, ಸ್ನೇಹಿತರು ಶುಭಾಶಯ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT