ಶನಿವಾರ, ನವೆಂಬರ್ 16, 2019
24 °C
ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಬೇಸರ ತೋಡಿಕೊಂಡ ಗಾಯಕ

ಮೋದಿ ಕಾರ್ಯಕ್ರಮದಲ್ಲಿ ಸೆಲ್ಫೀ: ಎಸ್.ಪಿ.ಬಾಲಸುಬ್ರಹ್ಮಣ್ಯಂ ಖೇದ

Published:
Updated:

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ನಿವಾಸದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಔತಣಕೂಟದಲ್ಲಿ ತಮ್ಮನ್ನು ನಡೆಸಿಕೊಂಡ ರೀತಿಗೆ ಖ್ಯಾತ ಹಿನ್ನಲೆ ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣಂ ಬೇಸರ ವ್ಯಕ್ತಪಡಿಸಿದ್ದಾರೆ.

ಈ ವಿಚಾರವಾಗಿ ಫೇಸ್‌ಬುಕ್‌ನಲ್ಲಿ ಅವರು ಬರೆದಿರುವ ಪೋಸ್ಟ್ ಈಗ ವೈರಲ್ ಆಗಿದೆ.

‘ಗೌರವಾನ್ವಿತ ಪ್ರಧಾನಿಯವರು ಅಕ್ಟೋಬರ್ 29ರಂದು ಅವರ ನಿವಾಸದಲ್ಲಿ ಆಯೋಜಿಸಿದ್ದ ಔತಣಕೂಟದಲ್ಲಿ ಭಾಗವಹಿಸುವಂತಾದದ್ದಕ್ಕೆ ರಾಮೋಜಿ ರಾವ್‌ ಅವರಿಗೆ ನಾನು ಆಭಾರಿಯಾಗಿದ್ದೇನೆ. ಅವರಿಂದಾಗಿ ನನಗೆ ಈ ಅವಕಾಶ ಲಭ್ಯವಾಯಿತು. ಪ್ರಧಾನಿ ನಿವಾಸದ ಒಳ ಪ್ರವೇಶಿಸುತ್ತಿದ್ದಂತೆ ಮೊಬೈಲ್ ಫೋನ್‌ ಅನ್ನು ಭದ್ರತಾ ಸಿಬ್ಬಂದಿ ಬಳಿ ನೀಡಿ ಒಳ ಹೋಗುವಂತೆ ನಮಗೆ ಸೂಚಿಸಲಾಯಿತು. ಅದಕ್ಕಾಗಿ ನಮಗೆ ಟೋಕನ್‌ಗಳನ್ನೂ ನೀಡಲಾಯಿತು. ಆದರೆ, ಆ ದಿನ ಸ್ಟಾರ್‌ಗಳು (ತಾರೆಯರು) ಪ್ರಧಾನಿ ಜತೆ ತಮ್ಮ ಮೊಬೈಲ್‌ಫೋನ್‌ಗಳಲ್ಲಿ ಸೆಲ್ಫಿ ತೆಗೆಯುತ್ತಿದ್ದುದನ್ನು ನೋಡಿ ನಾನು ದಿಗ್ಭ್ರಾಂತನಾದೆ’ ಎಂದು ಬಾಲಸುಬ್ರಹ್ಮಣಂ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಈ ಪೋಸ್ಟ್‌ ಅನ್ನು ಈವರೆಗೆ 560ಕ್ಕೂ ಹೆಚ್ಚು ಜನ ಶೇರ್ ಮಾಡಿದ್ದು, 5 ಸಾವಿರಕ್ಕೂ ಹೆಚ್ಚು ಮಂದಿ ಪ್ರತಿಕ್ರಿಯಿಸಿದ್ದಾರೆ.

ಇನ್ನಷ್ಟು...

ಖಾನ್‌ಗಳು ಸಿನಿಮಾರಂಗಕ್ಕೆ ಒಡೆಯರಲ್ಲ; ಮೋದಿ ನಡೆ ಬಗ್ಗೆ ಜಗ್ಗೇಶ್ ಅಸಮಾಧಾನ

ಶರೀರಕ್ಕೆ ವಯಸ್ಸಾಗಿದೆ, ಶಾರೀರಕ್ಕಲ್ಲ: ಎಸ್‌ಪಿಬಿ

ಪ್ರತಿಕ್ರಿಯಿಸಿ (+)