ಸೋಮವಾರ, ನವೆಂಬರ್ 18, 2019
24 °C

ಖಾನ್‌ಗಳು ಸಿನಿಮಾರಂಗಕ್ಕೆ ಒಡೆಯರಲ್ಲ; ಮೋದಿ ನಡೆ ಬಗ್ಗೆ ಜಗ್ಗೇಶ್ ಅಸಮಾಧಾನ 

Published:
Updated:

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಬಾಲಿವುಡ್ ಕಲಾವಿದರು ಮತ್ತು ಗಣ್ಯರನ್ನು  ಭೇಟಿ ಮಾಡಿ ಅವರೊಂದಿಗೆ ಸಂವಾದ ನಡೆಸಿರುವ ಬಗ್ಗೆ ನಟ ಜಗ್ಗೇಶ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು ಕರ್ನಾಟಕ ರಾಜ್ಯದಲ್ಲಿ ಹೆಚ್ಚು ಮನರಂಜನಾ ತೆರಿಗೆ  ಸಂಗ್ರಹವಾಗುತ್ತಿದೆ ಎಂಬುದನ್ನು ನೆನಪಿಡಿ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಮಹಾತ್ಮ ಗಾಂಧಿ ಸ್ಮರಿಸಿದ ಬಾಲಿವುಡ್

ಈ ದೇಶದ ಚಿತ್ರರಂಗ ಬಹುಭಾಷಾ ಭಾವನೆಯಿಂದ ಕೂಡಿದೆ ವಿನಾ ಹಿಂದಿ ಸಿನಿಮಾರಂಗದಿಂದ ಅಲ್ಲ ಎಂಬುದನ್ನು ದೇಶಕ್ಕೆ ಮನವರಿಕೆ ಮಾಡಿಕೊಡುವ ಕನ್ನಡ ಮನಸ್ಸುಗಳು ಇಲ್ಲವೇ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಬಾಲಿವುಡ್‌ ಸಿನಿಮಾರಂಗ ಅಂದರೇ ಕೇವಲ ಖಾನ್‌ಗಳು ಮಾತ್ರವಲ್ಲ ಎಂದು ಟ್ವೀಟ್‌ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ. 

ಗಾಂಧೀಜಿಯ 150ನೇ ಜನ್ಮದಿನಾಚರಣೆ ಅಂಗವಾಗಿ ನಿರ್ಮಿಸಿದ ‘ಚೇಂಜ್ ವಿತ್‌ಇನ್’ ಎಂಬ ವಿಡಿಯೊ ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಬಾಲಿವುಡ್ ಕಲಾವಿದರು ಮತ್ತು ಗಣ್ಯರನ್ನು ಭೇಟಿ ಮಾಡಿ ಅವರೊಂದಿಗೆ ಸಂವಾದ ನಡೆಸಿದ್ದರು. ಈ ಕಾರ್ಯಕ್ರಮದಲ್ಲಿ ಕನ್ನಡದ  ಸಿನಿಮಾ ನಟರು ಮತ್ತು ಗಣ್ಯರು ಭಾಗವಹಿಸಿರಲಿಲ್ಲ. 

ಕನ್ನಡಿಗರು ಬಹುತೇಕ ಪರಭಾಷೆ ನಟ ನಟಿಯರಿಗೆ ಚಪ್ಪಾಳೆ ಹೊಡೆದ ತಪ್ಪಿಗೆ ಇಂದು ಕನ್ನಡಿಗರು ದಾರಿತಪ್ಪಿದವರಂತೆ ಆಗಿದ್ದಾರೆ. ಉತ್ತರ ಭಾರತದ ನಟನಟಿಯರಿಗಿಂತ ನಾವು ಯಾವುದರಲ್ಲು ಕಮ್ಮಿಇಲ್ಲ, ಖಾನ್‌ಗಳು ಮಾತ್ರವೇ ಕಲಾರಂಗಕ್ಕೆ ಒಡೆಯರಲ್ಲ! ನಿಮ್ಮ ಭಾವನೆಗಳನ್ನು ಗೌರವಿಸಲು ಅನೇಕ ಕನ್ನಡದ ಕಲಿಗಳು ಇದ್ದಾರೆ ಎನ್ನುವ ಮೂಲಕ  ಮೋದಿಗೆ ಜಗ್ಗೇಶ್‌ ಟಾಂಗ್‌ ನೀಡಿದ್ದಾರೆ. 

ಪ್ರತಿಕ್ರಿಯಿಸಿ (+)