ಶನಿವಾರ, ಸೆಪ್ಟೆಂಬರ್ 25, 2021
29 °C

ಸನ್ನಿ ಲಿಯೋನ್‌, ಮಿಯಾ ಖಲೀಫಾ ಹೆಸರಿನ ಖಾದ್ಯ ದೆಹಲಿ ರೆಸ್ಟೋರೆಂಟ್‌ನಲ್ಲಿ ಲಭ್ಯ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತ ವೈವಿಧ್ಯಮಯ ಪಾಕ ಪದ್ಧತಿಗಳ ತವರಾಗಿದೆ. ದೇಶದ ವಿವಿಧ ಭಾಗಗಳಲ್ಲಿರುವ ಖಾದ್ಯಗಳ ಹೆಸರುಗಳು ಕೂಡ ತುಂಬಾ ಆಸಕ್ತಿದಾಯಕವಾಗಿರುತ್ತವೆ.

ದೇಶದ ನಾನಾ ಮೂಲೆಗಳಲ್ಲಿನ ಖಾದ್ಯಗಳ ಹೆಸರುಗಳು ಕೂಡ ಆ ಪ್ರದೇಶಗಳ ವೈಭವವನ್ನು ಹೆಚ್ಚಿಸುತ್ತವೆ. ಅಂತಹ ಖಾದ್ಯಗಳನ್ನು ಸವಿಯಲು ಜನರು ಅಲ್ಲಿಗೆ ಬರುತ್ತಾರೆ. ಇದರಿಂದ ಪ್ರವಾಸೋದ್ಯಮ ಚಟುವಟಿಕೆಗಳು ಹೆಚ್ಚಿ ಸ್ಥಳೀಯರಿಗೆ ಉದ್ಯೋಗ, ಆದಾಯವು ದೊರೆಯುತ್ತದೆ.

ಇತ್ತೀಚಿಗೆ ಪೋರ್ನ್‌ ನಟಿಯರ ಹೆಸರಿನ ಖಾದ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುವ ಮೂಲಕ ವಿವಾದಕ್ಕೂ ಕಾರಣವಾಗಿವೆ. ಈ ಖಾದ್ಯಗಳಿಗೆ ಕೆಲವರು ಜೈ ಎಂದರೆ ಮತ್ತೆ ಕೆಲವರು ಮೂಗು ಮುರಿಯುತ್ತಿದ್ದಾರೆ.

ದೆಹಲಿಯ ವೀರ್ ಜಿ ಮಲೈ ಹೆಸರಿನ ರೆಸ್ಟೋರೆಂಟ್‌ನಲ್ಲಿ ಮಾಜಿ ಪೋರ್ನ್‌ ನಟಿಯರಾದ ಸನ್ನಿ ಲಿಯೋನ್ ಮತ್ತು ಮಿಯಾ ಖಲೀಫಾ ಅವರ ಹೆಸರಿನ ಖಾದ್ಯಗಳು ದೊರೆಯುತ್ತವೆ. ಸನ್ನಿ ಲಿಯೋನ್ ಚಾಪ್ಸ್‌ ಹಾಗೂ ಮಿಯಾ ಖಲೀಫಾ ಚಾಪ್ಸ್‌ ಇಲ್ಲಿ ದೊರೆಯುತ್ತವೆ. ಇವು ವೆಜ್ ಚಾಪ್ಸ್‌ ಆಗಿರುವುದು ವಿಶೇಷ! ಹಾಗೇ ರಾಗಿಣಿ ಎಂಎಂಎಸ್‌ ಚಿತ್ರದಲ್ಲಿನ ‘ಬೇಬಿ ಡಾಲಿ‘ ಹಾಡು ಈಗ ವೆಜ್‌ ಚಾಪ್ಸ್‌ವೊಂದರ ಹೆಸರಾಗಿದೆ. 

ದೆಹಲಿಯ ವಿಜಯ ಶೇಖರ್‌ ಶರ್ಮಾ ಸೇರಿದಂತೆ ಹಲವರು ಈ ರೆಸ್ಟೋರೆಂಟ್‌ ಮೆನುವಿನ ಚಿತ್ರಗಳನ್ನು ತೆಗೆದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ ಮಾಡುತ್ತಿದ್ದಾರೆ. ಇಂತಹ ಪೋಸ್ಟ್‌ಗಳಿಗೆ ಸನ್ನಿ ಲಿಯೋನ್, ಮಿಯಾ ಖಲೀಫಾ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಹಾರ ಖಾದ್ಯಗಳಿಗೆ ಇವರ ಹೆಸರು ಬೇಕೇ? ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು