ಸೋಮವಾರ, ಆಗಸ್ಟ್ 2, 2021
21 °C

₹300 ಮೌಲ್ಯದ ವಸ್ತು ಆರ್ಡರ್‌ ಮಾಡಿದರೆ, ₹19 ಸಾವಿರದ ಹೆಡ್‌ಫೋನ್‌ ಬರೋದೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇವಲ ₹300 ಮೌಲ್ಯದ ಲೋಷನ್‌ ಆರ್ಡರ್‌ ಮಾಡಿದರೆ, ಅಮೆಜಾನ್‌ನಿಂದ ₹19 ಸಾವಿರ ಮೌಲ್ಯದ ಹೆಡ್‌ಫೋನ್‌ ಬರೋದೇ? ಹೌದು, ತಮಗಾದ ಇಂಥ ಅನುಭವವನ್ನು ಟೆಕಿಯೊಬ್ಬರು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

‘ಜೋಶ್‌ ಸಾಫ್ಟ್‌ವೇರ್‌’ ಎಂಬ ಕಂಪನಿಯ ಸಹ ಸಂಸ್ಥಾಪಕ, ನಿರ್ದೇಶಕ ಗೌತಮ್‌ ರೆಗೆ ಎಂಬುವವರು ಈ ಕುರಿತು ತಮ್ಮ ಟ್ವಿಟರ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 

‘₹300 ಸ್ಕಿನ್‌ ಲೋಷನ್‌ ಆರ್ಡರ್‌ ಮಾಡಿದರೆ, ₹19 ಸಾವಿರದ ಬಾಸ್‌ ವೈಯರ್‌ ‌ಲೆಸ್‌ ಇಯರ್‌ಬಡ್‌ಗಳನ್ನು ನೀಡಲಾಗಿದೆ. ಈ ಬಗ್ಗೆ ಅಮೆಜಾನ್‌ನಲ್ಲಿ ಕೇಳಿದರೆ, ಅದನ್ನು ಹಿಂತಿರುಗಿಬೇಕಿಲ್ಲ. ನೀವೇ ಇಟ್ಟುಕೊಳ್ಳಿ ಎಂದು ಹೇಳಿದೆ’ ಎಂದು ಅವರು ಪೋಸ್ಟ್‌ ಮಾಡಿದ್ದಾರೆ. 

ರೆಗೆ ಅವರು ಈ ರೀತಿಯ ಪೋಸ್ಟ್‌ ಹಾಕಿದ್ದೇ ತಡ, ಬಗೆಬಗೆಯ ಪ್ರತಿಕ್ರಿಯೆಗಳು ಟ್ವಿಟರ್‌ ಬಳಕೆದಾರರಿಂದ ಬಂದಿವೆ. 

‘ನೀವು ಆರ್ಡರ್‌ ಮಾಡಿದ ಲೋಷನ್‌ ಇನ್ನೂ ಲಭ್ಯವಿದೆಯೇ? ಇದ್ದರೆ ಅದರ ಲಿಂಕ್‌ ಕಳುಹಿಸಿ’ ಎಂದು ಒಬ್ಬರು ಕಮೆಂಟ್‌ ಮಾಡಿದ್ದರೆ, ‘ನಾನು ಬಾಸ್‌ ಇಯರ್‌ ಬಡ್‌ಗಳನ್ನು ಆರ್ಡರ್‌ ಮಾಡಿದ್ದೆ. ಅದರ ಬದಲಿಗೆ ಲೋಷನ್‌ ಬಂದಿದೆ. ನಾವಿಬ್ಬರು ಪರಸ್ಪರ ವಿನಿಮಯ ಮಾಡಿಕೊಳ್ಳೋಣವೇ’ ಎಂದು ಲಘುಬಗೆಯ ಹಾಸ್ಯದ ಧಾಟಿಯಲ್ಲಿ ಕೆಲವರು ಕಮೆಂಟ್‌ ಮಾಡಿದ್ದಾರೆ.

ಇದೇ ಟ್ವೀಟ್‌ನಲ್ಲಿ ವ್ಯಕ್ತಿಯೊಬ್ಬರು ಅಮೆಜಾನ್‌ ವಿರುದ್ಧ ಗಂಭೀರ ಆರೋಪವನ್ನೂ ಮಾಡಿದ್ದಾರೆ. ನಾನು ₹13 ಸಾವಿರ ಮೌಲ್ಯದ ಡೆಲ್‌ ಮಾನಿಟರ್‌ ಆರ್ಡರ್‌ ಮಾಡಿದರೆ, ಕೋಲಿನ್‌ ಬಾಟಲ್‌ಗಳನ್ನು ಕಳುಹಿಸಲಾಗಿದೆ. ಈಗ ಹಣವನ್ನು ರೀಫಂಡ್‌ ಮಾಡುವುದಿಲ್ಲ ಎಂದೂ ಕಂಪೆನಿ ಹೇಳುತ್ತಿದೆ. ಇದು ಅಮೆಜಾನ್‌ನ ಅಸಲಿ ಮುಖವನ್ನು ಅನಾವರಣ ಮಾಡಿದೆ ಎಂದು ಆಕ್ರೋಶ ತೋಡಿಕೊಂಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು