ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವಿಟರ್‌ ಬ್ಲೂ ಭಾರತದ‌ಲ್ಲಿ ಯಾವಾಗ?: ಇಲಾನ್‌ ಮಸ್ಕ್‌ ಹೇಳಿದ್ದೇನು?

Last Updated 6 ನವೆಂಬರ್ 2022, 8:23 IST
ಅಕ್ಷರ ಗಾತ್ರ

ನವದೆಹಲಿ: ಬ್ಲೂಟಿಕ್‌ ಹೊಂದಿರುವ ಟ್ವಿಟರ್‌ ಖಾತೆಗಳಿಗೆ ಮಾಸಿಕ $7.99 ಶುಲ್ಕ ವಿಧಿಸುವ ‘ಟ್ವಿಟರ್ ಬ್ಲೂ‘ (Twitter Blue) ಇನ್ನು ಒಂದು ತಿಂಗಳ ಒಳಗಾಗಿ ಭಾರತದ ಬಳಕೆದಾರರಿಗೂ ಲಭ್ಯವಾಗಲಿದೆ ಎಂದು ಟ್ವಿಟರ್‌ ಮಾಲೀಕ ಇಲಾನ್‌ ಮಸ್ಕ್‌ ಹೇಳಿದ್ದಾರೆ.

ಪ್ರಭು ಎನ್ನುವ ಬಳಕೆದಾರರೊಬ್ಬರು ‘ಭಾರತದಲ್ಲಿ ಟ್ವಿಟರ್‌ ಬ್ಲೂ ಯೋಜನೆ ಯಾವಾಗಿನಿಂದ ಪ್ರಾರಂಭವಾಗಬಹುದು?‘ ಎಂದು ಇಲಾನ್‌ ಮಸ್ಕ್‌ ಅವರಿಗೆ ಟ್ಯಾಗ್‌ ಮಾಡಿ ಟ್ವಿಟರ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಇಲಾನ್‌ ಮಸ್ಕ್‌, ‘ಇನ್ನೊಂದು ತಿಂಗಳ ಒಳಗಾಗಿ‘ ಎಂದು ಹೇಳಿದ್ದಾರೆ.

‘ಟ್ವಿಟರ್ ಬ್ಲೂ' ಚಂದಾದಾರಿಕೆ ಸೇವೆ ಸದ್ಯ ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಹಾಗೂ ಬ್ರಿಟನ್‌ನ ಐಫೋನ್‌ ಬಳಕೆದಾರರಿಗೆ ಲಭ್ಯವಿದೆ. ಇದರ ಬೆನ್ನಲ್ಲೇ ಇದೀಗ ಭಾರತದಲ್ಲೂ ಟ್ವಿಟ್ಟರ್ ಬ್ಲೂ ಆರಂಭಿಸುವ ಬಗ್ಗೆ ಮಸ್ಕ್‌ ಸೂಚನೆ ನೀಡಿದ್ದಾರೆ.

ಟ್ವಿಟರ್‌ ಬ್ಲೂ ಕುರಿತು ಟ್ವೀಟ್ ಮಾಡಿರುವ ಇಲಾನ್ ಮಸ್ಕ್ 'ಜನರಿಗೆ ಅಧಿಕಾರ' ಎಂದು ಹೇಳಿದ್ದಾರೆ. ಸೆಲೆಬ್ರಿಟಿ, ಕಂಪನಿ, ರಾಜಕಾರಣಿಗಳಂತೆಯೇ ನಿಮ್ಮ ಖಾತೆಯು ಬ್ಲೂ ಟಿಕ್ ಮಾರ್ಕ್ ಪಡೆಯಲಿದೆ ಎಂದು ಟ್ವಿಟರ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT