ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರತೆ ಲೋಪದ ಬಗ್ಗೆ ಸ್ಫೋಟಕ ಮಾಹಿತಿ ಹೊರಹಾಕಿದ ಟ್ವಿಟರ್ ಮಾಜಿ ಭದ್ರತಾ ಮುಖ್ಯಸ್ಥ

Last Updated 23 ಆಗಸ್ಟ್ 2022, 14:33 IST
ಅಕ್ಷರ ಗಾತ್ರ

ನ್ಯೂಯಾರ್ಕ್: ಬಳಕೆದಾರರ ವೈಯಕ್ತಿಕ ಮಾಹಿತಿ ಹಾಗೂ ರಾಷ್ಟ್ರೀಯ ಭದ್ರತೆಗೆ ಕಂಠಕವಾಗುವಂತಹ ಕೆಲಸವನ್ನು ಸಾಮಾಜಿಕ ಜಾಲತಾಣಗಳ ದೈತ್ಯ ‘ಟ್ವಿಟರ್’ ಮಾಡುತ್ತಿದೆ ಎಂಬ ಸ್ಫೋಟಕ ವರದಿಯೊಂದು ಬಹಿರಂಗವಾಗಿದೆ.

ಈ ಆಘಾತಕಾರಿ ಮಾಹಿತಿಯನ್ನು ಟ್ವಿಟರ್‌ನ ಮಾಜಿ ಭದ್ರತಾ ಮುಖ್ಯಸ್ಥ ಫೀಟರ್ ಜಟ್ಕೊ (ಮಡ್ಜ್)ಅವರೇ ಮಾಧ್ಯಮಗಳ ಎದುರು ಬಾಯಿಬಿಟ್ಟಿದ್ದಾರೆ ಎಂದು ರಾಯಿಟರ್ಸ್‌ ವರದಿ ಮಾಡಿದೆ.

‘ಟ್ವಿಟರ್ ತನ್ನ ಭದ್ರತಾ ವ್ಯವಸ್ಥೆ ಹಾಗೂ ಸ್ಪ್ಯಾಮ್ ಅಕೌಂಟ್‌ಗಳ ಬಗ್ಗೆ ಸರಿಯಾದ ಮಾಹಿತಿ ಹೊಂದಿಲ್ಲ. ಆದಾಗ್ಯೂ ಕೂಡ ಯುಎಸ್ ಕಾಂಗ್ರೆಸ್‌ಗೆ ಹಾಗೂ ಫೆಡರಲ್ ಏಜೆನ್ಸಿಗಳಿಗೆ ತಪ್ಪು ಮಾಹಿತಿ ಕೊಟ್ಟಿತ್ತು’ ಎಂದು ಜಟ್ಕೊ ಹೇಳಿದ್ದಾರೆ.

‘ಟ್ವಿಟರ್‌ನ ಕಾರ್ಯಕಾರಿ ಮುಖ್ಯಸ್ಥರು (ಸಿಇಒ ಸೇರಿದಂತೆ ಇತರ ಎಕ್ಸಿಕ್ಯೂಟಿವ್‌ಗಳು) ಟ್ವಿಟರ್‌ ಬಳಿ ಇರುವ ಸ್ಪ್ಯಾಮ್ ಖಾತೆಗಳು ಹಾಗೂ ಬೊಟ್ಸ್‌ ಬಗ್ಗೆ (ಸಾಮಾಜಿಕ ಮಾಧ್ಯಮಗಳ ಭದ್ರತಾ ವ್ಯವಸ್ಥೆಗಳು) ಅಧ್ಯಯನ ಮಾಡಲು ಸರಿಯಾದ ಸಂಪನ್ಮೂಲಗಳನ್ನೇ ಹೊಂದಿಲ್ಲ’ ಎಂದುಜಟ್ಕೊ ಆರೋಪಿಸಿದ್ದಾರೆ.

‘ಇನ್ನೊಂದು ಮಹತ್ವದ ವಿಷಯವೆಂದರೆ ಟ್ವಿಟರ್‌ನಲ್ಲಿ ಇರುವ ಕೆಲವರು ಅನೇಕ ದೇಶಗಳ ಪ್ರಮುಖ ಗುಪ್ತಚರ ಸಂಸ್ಥೆಗಳಿಗೆ ಕೆಲಸ ಮಾಡುತ್ತಿದ್ದಾರೆ’ ಎಂದು ಕೂಡಜಟ್ಕೊ ಹೇಳಿದ್ದಾರೆ.

ವಿಶೇಷವೆಂದರೆ ಇದೇ ವಿಚಾರವಾಗಿಯೇ ಟ್ವಿಟರ್ ಖರೀದಿಯಿಂದ ವಿಶ್ವದ ಶ್ರೀಮಂತ ವ್ಯಕ್ತಿ ಇಲಾನ್ ಮಸ್ಕ್ ಹಿಂದೆ ಸರಿದಿದ್ದರು. 44 ಬಿಲಿಯನ್ ಡಾಲರ್ ಕೊಟ್ಟು ಟ್ವಿಟರ್ ಖರೀದಿಗೆ ಮಸ್ಕ್ ಮುಂದಾಗಿದ್ದರು. ಬಳಿಕ ಅವರು ಹಿಂದೆ ಸರಿದಿದ್ದರಿಂದ ಕಾನೂನು ಸಂಘರ್ಷ ಏರ್ಪಟ್ಟಿದೆ. ಅಲ್ಲದೇಜಟ್ಕೊ ಅವರು ಮಸ್ಕ್ ಜೊತೆ ಮೊದಲೇ ಸಂಪರ್ಕದಲ್ಲಿದ್ದರೇ ಎನ್ನುವ ಊಹಾಪೋಹಗಳೂ ಹರಿದಾಡುತ್ತಿವೆ.

ಎರಡು ವರ್ಷಜಟ್ಕೊ ಅವರು ಟ್ವಿಟರ್‌ನಲ್ಲಿ ಮುಖ್ಯ ಭದ್ರತಾ ಅಧಿಕಾರಿಯಾಗಿದ್ದರು. ಕಳಪೆ ನಿರ್ವಹಣೆ ಆಧಾರದ ಮೇಲೆ ಅವರನ್ನು ಕಳೆದ ಜನವರಿಯಲ್ಲಿ ಕೆಲಸದಿಂದ ಕಿತ್ತು ಹಾಕಲಾಗಿತ್ತು ಎಂದು ರಾಯಿಟರ್ಸ್‌ ಸುದ್ದಿಸಂಸ್ಥೆಗೆ ಟ್ವಿಟರ್ ಪ್ರತಿಕ್ರಿಯೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT