ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಸಂಸ್ಥೆಗಳಿಗೆ ಬೂದು, ಕಂಪನಿಗೆ ಗೋಲ್ಡ್: ಟ್ವಿಟರ್ ಹೊಸ ಟಿಕ್

ಈ ಮೊದಲು ಟ್ವಿಟರ್ ಬ್ಲೂ ಟಿಕ್ ಮಾತ್ರ ಒದಗಿಸುತ್ತಿತ್ತು.
Last Updated 21 ಡಿಸೆಂಬರ್ 2022, 14:29 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರಿ ಸಂಸ್ಥೆಗಳು, ಇಲಾಖೆಗಳು ಮತ್ತು ಸರ್ಕಾರದ ಅಧಿಕೃತ ಟ್ವಿಟರ್ ಖಾತೆಗೆ ಬೂದು ಬಣ್ಣ ಮತ್ತು ಕಂಪನಿಗಳು, ಬ್ರ್ಯಾಂಡ್ ಮತ್ತು ಇತರ ಖಾಸಗಿ ಸಂಸ್ಥೆಗಳಿಗೆ ಚಿನ್ನದ ಬಣ್ಣದ ಟಿಕ್ ಅನ್ನು ಟ್ವಿಟರ್ ಒದಗಿಸುತ್ತಿದೆ.

ಈ ಮೊದಲು ಟ್ವಿಟರ್ ಕಂಪನಿ, ನೀಲಿ ಬಣ್ಣದ ಟಿಕ್ ಅನ್ನು ಮಾತ್ರ ಒದಗಿಸುತ್ತಿತ್ತು. ಈಗ ಹೊಸ ಬಣ್ಣಗಳಲ್ಲಿ ಟ್ವಿಟರ್ ಟಿಕ್ ಮಾರ್ಕ್ ನೀಡುತ್ತಿದೆ.

ಬಣ್ಣಗಳ ಮೂಲಕವೇ ಸುಲಭದಲ್ಲಿ ಟ್ವಿಟರ್ ಅಧಿಕೃತ ಖಾತೆ ಗುರುತಿಸುವುದು ಇದರಿಂದ ಸುಲಭವಾಗಲಿದೆ.

ಈಗಾಗಲೇ ಟ್ವಿಟರ್, ಭಾರತ ಸರ್ಕಾರ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಖಾತೆಗೆ ಬೂದು ಬಣ್ಣವನ್ನು ಒದಗಿಸಿದೆ. ಹೀಗಾಗಿ ಹೊಸ ಅಪ್‌ಡೇಟ್ ಪ್ರಕಾರ, ಅಧಿಕೃತ ಬಣ್ಣದ ಖಾತೆಯನ್ನು ಬಳಕೆದಾರರು ಹೊಂದಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT