ಸೋಮವಾರ, ಜೂನ್ 1, 2020
27 °C

ಪ್ರಧಾನಿ 'ಲಾಕ್‌ಡೌನ್‌-2' ಘೋಷಣೆಗೆ ಟ್ವಿಟರ್‌ನಲ್ಲಿ ಮೀಮ್‌ಗಳ ಮಹಾಪೂರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಮೇ 3ರವರೆಗೆ ಲಾಕ್‌ಡೌನ್ ವಿಸ್ತರಿಸುವ ಹೇಳಿಕೆ ನೀಡಿದ ಬೆನ್ನಿಗೇ ಟ್ವಿಟರ್‌ನಲ್ಲಿ ಲಾಕ್‌ಡೌನ್‌ಗೆ ಸಂಬಂಧಿಸಿದ ಹ್ಯಾಷ್‌ಟ್ಯಾಗ್‌ಗಳು ಟ್ರೆಂಡ್ ಆಗುತ್ತಿವೆ. ಈ ಹ್ಯಾಷ್‌ಟ್ಯಾಗ್‌ಗಳನ್ನು ಬಳಸಿ ಸಾಕಷ್ಟು ಜನರು ಮೀಮ್‌ಗಳನ್ನು ಹರಿಬಿಟ್ಟಿದ್ದಾರೆ. ಹಾಸ್ಯದ ಲೇಪನದಲ್ಲಿ ನೋವು, ಸಂಕಷ್ಟ ಮತ್ತು ಆತಂಕಗಳು ಕಾಣಿಸಿಕೊಳ್ಳುತ್ತಿವೆ.

#Lockdown2 #3rdMay #pmmodiaddresstonation ಹ್ಯಾಷ್‌ಟ್ಯಾಗ್‌ಗಳು ಇಂಡಿಯಾ ಟ್ರೆಂಡ್ಸ್‌ನಲ್ಲಿ ಟಾಪ್‌ ಟ್ರೆಂಡಿಂಗ್‌ ಇವೆ. ಹಲವರು ಮೋದಿ ಭಾಷಣದ ಬಗ್ಗೆ ವಿಶ್ಲೇಷಣೆಯನ್ನೂ ಮಾಡಿದ್ದಾರೆ.

'ನರೇಂದ್ರ ಮೋದಿ ನಿರ್ಭಯದಿಂದ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. ಗುರಿ ಮುಟ್ಟುವವರೆಗೆ ನಿರ್ಬಂಧ ಸಡಿಲಿಕೆ ಸಲ್ಲದು. ನಾನು ಮೋದಿ ಅವರ ನಿರ್ಧಾರವನ್ನು ಸಂಪೂರ್ಣ ಬೆಂಬಲಿಸುತ್ತೇನೆ' ಎಂದು ರತ್ನೀಶ್‌ ಎಂಬುವವರು ಟ್ವೀಟ್ ಮಾಡಿದ್ದಾರೆ.

'ಪ್ರಧಾನಿ ಭಾಷಣದ ಒಂದೇ ಮಂತ್ರ. ಸರ್ಕಾರಕ್ಕಾಗಿ ನೀನು ಏನು ಮಾಡಬೇಕು ಎಂಬುದನ್ನು ಕೇಳಿಸಿಕೊ. ಸರ್ಕಾರ ನಿನಗೆ ಏನು ಮಾಡಬೇಕು ಎಂಬುದನ್ನು ಕೇಳಬೇಡ' ಎಂದು ಪತ್ರಕರ್ತ ರಾಜ್‌ದೀಪ್ ಸರ್‌ದೇಸಾಯಿ ಟೀಕಿಸಿದ್ದಾರೆ.

ಮೋದಿ ಅವರು ಮಾಸ್ಕ್‌ ಧರಿಸಿ ಭಾಷಣ ಆರಂಭಿಸಿ, ಆರಂಭದಲ್ಲಿಯೇ ಮಾಸ್ಕ್‌ ಜಾರಿಸಿದ್ದೂ ಸಹ ಹಾಸ್ಯದ ವಸ್ತುವಾಗಿದೆ.

ಬಿಳಿ ಕುರ್ತಾ ಮೇಲೆ ಆಕರ್ಷಕ ಮಫ್ಲರ್ ಮತ್ತು ಮ್ಯಾಚಿಂಗ್ ಧರಿಸಿದ್ದ ಮೋದಿ ಅವರು ಉಡುಗೆಯೂ ಹಲವರ ಗಮನ ಸೆಳೆದಿದೆ.

ಲಾಕ್‌ಡೌನ್ ವಿಸ್ತರಣೆ ಆದೇಶ ತಿಳಿದ ಹಲವರು ಕುಂಭಕರ್ಣನಂತೆ ನಿದ್ದೆಗೆ ಜಾರಿದರು ಎಂದು ಹಲವರು ಕಾಲೆಳೆದಿದ್ದಾರೆ.

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು