ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಬೇಗನೆ ಗುಣಮುಖರಾಗಲಿ ಎಂದು ಟ್ವಿಟರ್‌ನಲ್ಲಿ ಸಾವಿರಾರು ಮಂದಿ ಹಾರೈಸಿದ್ದಾರೆ. #GetwellsoonSir ಹ್ಯಾಷ್‌ಟ್ಯಾಗ್ ಮಂಗಳವಾರ ಬೆಳಿಗ್ಗೆ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿದೆ.

ಮುಖರ್ಜಿ ಅವರು ದೆಹಲಿಯಲ್ಲಿರುವ ಸೇನೆಯ ರಿಸರ್ಚ್ ಆ್ಯಂಡ್ ರೆಫೆರಲ್ ಆಸ್ಪತ್ರೆಯಲ್ಲಿ ಸೋಮವಾರ ಮಿದುಳು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಆದರೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ವೆಂಟಿಲೇಟರ್ ಸಹಕಾರ ನೀಡಲಾಗಿದೆ ಎಂದು ಮೂಲಗಳು ತಿಳಿಸಿದ್ದವು. ಶಸ್ತ್ರಚಿಕಿತ್ಸೆಗೂ ಮುನ್ನ ನಡೆಸಲಾದ ಕೋವಿಡ್ ಪರೀಕ್ಷೆಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿತ್ತು.

ಇದನ್ನೂ ಓದಿ:ಪ್ರಣಬ್ ಮುಖರ್ಜಿಗೆ ಮಿದುಳು ಶಸ್ತ್ರಚಿಕಿತ್ಸೆ; ಆರೋಗ್ಯ ಸ್ಥಿತಿ ಗಂಭೀರ

ಬೇರೆ ಕಾರ್ಯ ನಿಮಿತ್ತ ಆಸ್ಪತ್ರೆಗೆ ಭೇಟಿ ನೀಡಿದ್ದಾಗ ಕೊರೊನಾ ಪರೀಕ್ಷೆ ನಡೆಸಲಾಗಿದ್ದು, ಸೋಂಕು ದೃಢಪಟ್ಟಿದೆ ಎಂದು ಸೋಮವಾರ ಮಧ್ಯಾಹ್ನ ಮುಖರ್ಜಿ ಅವರೇ ಟ್ವೀಟ್ ಮಾಡಿದ್ದರು.

‘ಪ್ರಣಬ್ ಮುಖರ್ಜಿ ಸರ್ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ. ಆರೋಗ್ಯಕರ ಜೀವನ ನಡೆಸಲಿ ಎಂಬ ಹಾರೈಕೆಗಳು’ ಎಂದು ಅನುಭವ್ ಮೊಹಾಂತಿ ಎಂಬುವವರು ಟ್ವೀಟ್ ಮಾಡಿದ್ದಾರೆ.

‘ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಬೇಗನೆ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇವೆ. ದೇವರು ಅವರಿಗೆ ಶಕ್ತಿ ನೀಡಲಿ’ ಎಂದು ಹೇಮಂತ್‌ಪುರಿ ಆರ್. ಗೋಸ್ವಾಮಿ ಎಂಬುವವರು ಟ್ವೀಟ್ ಮಾಡಿದ್ದಾರೆ.

‘ತಲೆಯ ಗಾಯ ಮತ್ತು ಕೋವಿಡ್‌ನಿಂದಾಗಿ ಹಿರಿಯ ನಾಯಕ, ಮಾಜಿ ರಾಷ್ಟ್ರಪತಿಗಳು ಆಸ್ಪತ್ರೆಗೆ ದಾಖಲಾಗಿರುವುದು ಆತಂಕ ಮೂಡಿಸಿದೆ. ಅವರು ಬೇಗ ಗುಣಮುಖರಾಗಲಿ’ ಎಂದು ಕಾಶಿಶ್ ಧಲ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಇನ್ನೂ ಅನೇಕರು ಮುಖರ್ಜಿ ಚೇತರಿಕೆಗೆ ಹಾರೈಸಿ, ಪ್ರಾರ್ಥಿಸಿ ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.