ಸೋಮವಾರ, ಜೂನ್ 1, 2020
27 °C

'ಕೋಕ್‌ ಬೆಲೆಗೆ ಬ್ಯಾರೆಲ್‌ ಕಚ್ಚಾ ತೈಲವನ್ನೇ ಖರೀದಿಸಬಹುದು'; ಮೀಮ್‌ಗಳ ಮಹಾಪೂರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಚ್ಚಾ ತೈಲ ಕುಸಿತ ಮೀಮ್‌– ಚಿತ್ರ ಕೃಪೆ: ಟ್ವಿಟರ್‌

ಬೆಂಗಳೂರು: ಅಮೆರಿಕ ಕಚ್ಚಾ ತೈಲ ಫ್ಯೂಚರ್ಸ್‌ ದರ ಸೋಮವಾರ ಶೂನ್ಯಕ್ಕಿಂತಲೂ ಕಡಿಮೆಯಾಗಿದೆ. ತೈಲ ಬೆಲೆ ಭಾರೀ ಕುಸಿತ ಸಾಮಾಜಿಕ ಮಾಧ್ಯಮಗಳಲ್ಲಿ ಮೀಮ್ ಸಂಭ್ರಮವನ್ನೇ ಸೃಷ್ಟಿಸಿದೆ. 

ಜಗತ್ತಿನಾದ್ಯಂತ 20 ಲಕ್ಷಕ್ಕೂ ಹೆಚ್ಚು ಕೊರೊನಾ ವೈರಸ್‌ ಸೊಂಕು ಪ್ರಕರಣಗಳು ದಾಖಲಾಗಿದ್ದು, 1.70 ಲಕ್ಷಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಲಾಕ್‌ಡೌನ್‌ ಹಾಗೂ ಮನೆಯಲ್ಲಿಯೇ ಉಳಿಯುವ ಕ್ರಮಗಳಿಂದ  ಸಾರ್ವಜನಿಕ  ಹಾಗೂ ವೈಯಕ್ತಿಕ ಸಂಚಾರ ವಿರಳವಾಗಿದೆ. ಇದರಿಂದಾಗಿ ಜಗತ್ತಿನಾದ್ಯಂತ ತೈಲ ಬೇಡಿಕೆ ಗಣನೀಯ ಮಟ್ಟಕ್ಕೆ ಇಳಿಕೆಯಾಗಿದೆ. ಬೇಡಿಕೆ ಇಲ್ಲದಿದ್ದರೂ ಪೂರೈಕೆ ನಿರಂತರವಾಗಿರುವುದು ತೈಲ ದರ ಮಹಾ ಕುಸಿತಕ್ಕೆ ಕಾರಣವಾಗಿದೆ. 

ಕಚ್ಚಾ ತೈಲ ಸಂಗ್ರಹಕ್ಕೆ ಸಾಕಷ್ಟು ಅವಕಾಶವಿಲ್ಲದೆ, ಅಮೆರಿಕದ ತೈಲ  ಮಾರುಕಟ್ಟೆಯ ಮಾನದಂಡ ವೆಸ್ಟ್‌ ಟೆಕ್ಸಾಸ್‌ ಇಂಟರ್‌ಮೀಡಿಯೇಟ್‌ (ಡಬ್ಲ್ಯುಟಿಐ) ಪ್ರತಿ ಬ್ಯಾರೆಲ್‌ ದರ –37.63 ಡಾಲರ್‌ಗೆ ಇಳಿಕೆಯಾಯಿತು. ಈ ಮಹಾ ಕುಸಿತಕ್ಕೆ ನೆಟಿಜನ್‌ಗಳು ಮೀಮ್‌ಗಳ ಮೂಲಕ ಪ್ರತಿಕ್ರಿಯಿಸಿದ್ದಾರೆ. 

ಸಿನಿಮಾ, ಧಾರಾವಾಹಿ ಸೇರಿದಂತೆ ಮನರಂಜನಾ ಕಾರ್ಯಕ್ರಮಗಳ ವೀಕ್ಷಣೆಯ ಒಟಿಟಿ ಸೇವೆ ನೀಡುವ ನೆಟ್‌ಫ್ಲಿಕ್‌ಗಿಂತಲೂ ತೈಲ ಅಗ್ಗವಾಗಿದೆ ಎಂದು ಬೆಲೆಗಳನ್ನು ಹೋಲಿಸಿದ ಚಿತ್ರವನ್ನು ಹಂಚಿಕೊಳ್ಳಲಾಗಿದೆ. 

'ಕೋಕ್‌ ಮತ್ತು ಕಚ್ಚಾ ತೈಲ ಎರಡನ್ನೂ ಒಂದೇ ಬೆಲೆಗೆ ಖರೀದಿಸಬಹುದು', 'ನೀರಿಗೆ ಬದಲು ತೈಲವನ್ನೇ ಬಳಸಬಹುದು' , 'ಹೂಡಿಕೆದಾರರ ನಗು ಕೊನೆಯಾಗಿದೆ', 'ಈ ದೊಡ್ಡ ಮಹಾ ಕುಸಿತವನ್ನು ಊಹಿಸಿರಲಿಲ್ಲ..', 'ಕೋವಿಡ್‌–19ಗೂ ಹೇಗಿತ್ತು, ಈಗ ಹೇಗಿದೆ',... ಹೀಗೆ ಹಾಸ್ಯದ ಲೇಪವಿರುವ ಹಲವು ಟ್ವೀಟ್‌ಗಳು ಟ್ವಿಟರ್‌ನಲ್ಲಿ ತುಂಬಿವೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು