ಸೋಮವಾರ, ಡಿಸೆಂಬರ್ 6, 2021
27 °C

ಬೆಂಗಳೂರಿನಲ್ಲಿ ವೊಡಾಫೋನ್ ನೆಟ್‌ವರ್ಕ್‌ ಡೌನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ವೊಡಾಫೋನ್ ನೆಟ್‌ವರ್ಕ್‌ ಸಮಸ್ಯೆಯಾಗಿದೆ ಎಂದು ಹಲವು ಬಳಕೆದಾರರು #Vodafonedown ಹ್ಯಾಷ್‌ಟ್ಯಾಗ್ ಬಳಸಿ ಟ್ವೀಟ್ ಮಾಡುತ್ತಿದ್ದಾರೆ. #Vodafonedown ಹ್ಯಾಷ್‌ಟ್ಯಾಗ್ ಶುಕ್ರವಾರ ಮಧ್ಯಾಹ್ನ 3.41ರ ಸಮಯದಲ್ಲಿ ಟ್ವಿಟರ್‌ನ ಇಂಡಿಯಾ ಮತ್ತು ಬೆಂಗಳೂರು ವಿಭಾಗಗಳಲ್ಲಿ ಟಾಪ್ ಟ್ರೆಂಡಿಂಗ್ ಆಗಿದೆ.

ಬೇರೆಯವರಿಗೆ ಕರೆ ಮಾಡಲು, ಕರೆ ಸ್ವೀಕರಿಸಲು, ಮೆಸೇಜ್ ಕಳಿಸಲು ಆಗುತ್ತಿಲ್ಲ. ಇಂಟರ್ನೆಟ್‌ ಸಂಪರ್ಕವೂ ಕಡಿತಗೊಂಡಿದೆ ಎಂದು ಸಾಕಷ್ಟು ಜನರು ಅಳಲು ತೋಡಿಕೊಂಡಿದ್ದಾರೆ.

‘ನನ್ನ ಮೊಬೈಲ್‌ನಲ್ಲಿದ್ದ ವೊಡಾಫೋನ್ ನೆಟ್‌ವರ್ಕ್ ಮಾಯವಾಗಿದೆ. ಯಾರಿಗೂ ಕರೆ ಮಾಡಲು ಆಗುತ್ತಿಲ್ಲ’ ಎಂದು ಕುಮಾರಸ್ವಾಮಿ ಲೇಔಟ್‌ನ ಕುಶಾಲ್ ಎನ್ನುವವರು ಟ್ವೀಟ್‌ ಮಾಡಿದ್ದಾರೆ.

‘ವೊಡಾಫೋನ್‌ನ ಯಾವುದೇ ನಂಬರ್‌ನಲ್ಲಿ ಟವರ್ ಕಾಣಿಸುತ್ತಿಲ್ಲ. ಕಳೆದ ಐದು ನಿಮಿಷಗಳಿಂದ ಫೋನ್‌ನಲ್ಲಿ ಡೇಟಾ ಸಹ ನಿಷ್ಕ್ರಿಯವಾಗಿದೆ’ ಎಂದು ಸುಹಾಸ್ ಎನ್ನುವವರು ಟ್ವೀಟ್‌ನಲ್ಲಿ ಅಳಲು ತೋಡಿಕೊಂಡಿದ್ದಾರೆ.

ಸಮಸ್ಯೆಯನ್ನು ಒಪ್ಪಿಕೊಂಡಿರುವ ವೊಡಾಫೋನ್, ‘ಇದು ತಾತ್ಕಾಲಿಕ ಸಮಸ್ಯೆ. ನಮ್ಮ ತಂಡವು ನೆಟ್‌ವರ್ಕ್‌ ಸಂಪರ್ಕ ಮರುಸ್ಥಾಪಿಸಲು ಕೆಲಸ ಮಾಡುತ್ತಿದೆ. ನಮಗೆ ಸ್ವಲ್ಪ ಸಮಯಕೊಡಿ’ ಎಂದು ಬಳಕೆದಾರಲ್ಲಿ ವಿನಂತಿಸಿದೆ.


ಶುಕ್ರವಾರ ಮಧ್ಯಾಹ್ನ 3.41ರ ಟ್ವಿಟರ್ ಟ್ರೆಂಡಿಂಗ್

ಟ್ವಿಟರ್‌ನಲ್ಲಿ ಟ್ರೆಂಡ್ ಆಗಿರುವ ಹ್ಯಾಷ್‌ಟ್ಯಾಗ್‌ ಗಮನಿಸಿದರೆ ವೊಡಾಫೋನ್‌ ಸೇವೆಗಳ ಕಡಿತದಿಂದ ಕರ್ನಾಟಕದಲ್ಲಿಯೇ ದೊಡ್ಡಮಟ್ಟದ ಬಳಕೆದಾರರಿಗೆ ಮೊಬೈಲ್ ಸಂಪರ್ಕ ಕಡಿತಗೊಂಡಿದೆ ಎನಿಸುತ್ತದೆ.

ಸಮಸ್ಯೆ ಎಷ್ಟೊತ್ತಿಗೆ ಸರಿಯಾಗಬಹುದು ಎನ್ನುವ ಸ್ಪಷ್ಟ ಮಾಹಿತಿ ಎಲ್ಲಿಯೂ ಸಿಗುತ್ತಿಲ್ಲ. ಆದರೆ ಕೆಲವರು ತಮ್ಮ ಮೊಬೈಲ್ ಸಂಖ್ಯೆಗಳನ್ನು ಟ್ವೀಟ್‌ ಮಾಡುತ್ತಿರುವ ಬಗ್ಗೆ ವೊಡಾಫೋನ್ ಎಚ್ಚರಿಕೆ ನೀಡಿದೆ.

‘ದಯವಿಟ್ಟು ನಿಮ್ಮ ವೈಯಕ್ತಿಕ ಮೊಬೈಲ್ ಸಂಖ್ಯೆಗಳನ್ನು ಬಹಿರಂಗವಾಗಿ ಕಾಣಿಸುವಂತೆ ಪೋಸ್ಟ್ ಮಾಡಬೇಡಿ. ನಿಮ್ಮ ಗೌಪ್ಯ ಮಾಹಿತಿ ಇರುವ ಟ್ವೀಟ್‌ಗಳನ್ನು ಡಿಲೀಟ್‌ ಮಾಡಿ’ ಎಂದು ವೊಡಾಫೋನ್ ಗ್ರಾಹಕರೊಬ್ಬರಿಗೆ ಟ್ವಿಟರ್‌ನಲ್ಲಿ ಸಂದೇಶ ಕಳಿಸಿದೆ.

‘ವೊಡಾಫೋನ್‌ನ ಒಎಫ್‌ಸಿ ಕೇಬಲ್‌ಗಳನ್ನು ಬಿಬಿಎಂಪಿ ತುಂಡರಿಸಿದೆ. ಹೀಗಾಗಿ ಕರ್ನಾಟಕದಲ್ಲಿ ಎಲ್ಲಿಯೂ ನೆಟ್‌ವರ್ಕ್ ಸಿಗುತ್ತಿಲ್ಲ’ ಎಂದು ಪತ್ರಕರ್ತ ನಾಗಾರ್ಜುನ ದ್ವಾರಕಾನಾಥ್ ಟ್ವೀಟ್ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು