ಬೆಂಗಳೂರು: ವಿಶ್ವದಾದ್ಯಂತ ಸರ್ವರ್ ಸಮಸ್ಯೆಯಿಂದಾಗಿ 2 ಗಂಟೆಗಳ ಕಾಲ ಸ್ಥಗಿತಗೊಂಡಿದ್ದವಾಟ್ಸಾಪ್ ಸೇವೆಗಳು ಪುನಾರಂಭಗೊಂಡಿವೆ.

ಭಾರತ ಸೇರಿದಂತೆ ಹಲವೆಡೆ ವಾಟ್ಸಾಪ್ ಸೇವೆಗಳು ಪುನಾರಂಭವಾಗಿವೆ ಎಂದು ಮೆಟಾ ಕಂಪನಿ ತಿಳಿಸಿದೆ.

ಭಾರತದ ಹಲವೆಡೆ ವಾಟ್ಸಾಪ್ ಬಳಕೆದಾರರು ಸಂದೇಶ ರವಾನಿಸಲು ಹಾಗೂ ಸ್ವೀಕರಿಸಲು ಸಾಧ್ಯವಾಗದೆ ಪರದಾಡಿದ್ದರು.

ವಾಟ್ಸಾಪ್ ಮೊಬೈಲ್ ಅಪ್ಲಿಕೇಷನ್ ಮತ್ತು ವೆಬ್ ಅಪ್ಲಿಕೇಷನ್ ಎರಡೂ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ವಾಟ್ಸಾಪ್ ಆಡಿಯೊ ಮತ್ತು ವಿಡಿಯೊ ಕಾಲ್ ಸೇವೆಯೂ ಕಾರ್ಯ ನಿರ್ವಹಿಸುತ್ತಿರಲಿಲ್ಲ.

ವಾಟ್ಸಾಪ್ ತೆರೆಯಲು ಸಾಧ್ಯವಾಗುತ್ತಿದೆ. ಆದರೆ ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ ಎಂದು ಹಲವು ಬಳಕೆದಾರರು ದೂರಿದ್ದರು.

ಡೌನ್‌ಡಿಟೆಕ್ಟರ್ ಪ್ರಕಾರ ಶೇ 69ರಷ್ಟು ಬಳಕೆದಾರರು ಈ ಸಮಸ್ಯೆ ಎದುರಿಸಿದ್ದರು. ಶೇ 21ರಷ್ಟು ಬಳಕೆದಾರರಿಗೆ ಸರ್ವರ್ ಸಂಪರ್ಕ ಸಿಕ್ಕಿರಲಿಲ್ಲ. ಶೇ 9ರಷ್ಟು ಮಂದಿ ತಮ್ಮ ಸ್ಮಾರ್ಟ್ ಫೋನ್ ಆ್ಯಪ್‌ಗಳಲ್ಲಿ ಗುರುತಿಸಲಾಗದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದಿತ್ತು.

ಟ್ವಿಟರ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳಲ್ಲಿ ವಾಟ್ಸಾಪ್ ಡೌನ್ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿತ್ತು.

ಓದಿ...ವಾಟ್ಸಾಪ್ ಡೌನ್: ಸಂದೇಶ ರವಾನಿಸಲಾಗದೆ ಪರದಾಡುತ್ತಿರುವ ಬಳಕೆದಾರರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.