ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

WhatsApp: ಹೊಸ ಅ‍ಪ್‌ಡೇಟ್‌ನಲ್ಲಿ ಪಿಕ್ಚರ್–ಇನ್–ಪಿಕ್ಚರ್ ಮೋಡ್

ಐಫೋನ್‌ ಬಳಕೆದಾರರಿಗೆ ಶೀಘ್ರದಲ್ಲೇ ದೊರೆಯಲಿದೆ ಹೊಸ ಅಪ್‌ಡೇಟ್
Last Updated 6 ಡಿಸೆಂಬರ್ 2022, 13:42 IST
ಅಕ್ಷರ ಗಾತ್ರ

ಬೆಂಗಳೂರು: ಇತ್ತೀಚೆಗಷ್ಟೇ ಮೆಸೇಜ್ ಯುವರ್‌ಸೆಲ್ಫ್ ಮತ್ತು ಸ್ಕ್ರೀನ್‌ಶಾಟ್ ನಿರ್ಬಂಧದಂತಹ ವೈಶಿಷ್ಟ್ಯಗಳನ್ನು ಪರಿಚಯಿಸಿದ್ದ ವಾಟ್ಸ್‌ಆ್ಯಪ್, ಐಫೋನ್‌ ಬಳಕೆದಾರರಿಗೆ ಹೊಸ ಅಪ್‌ಡೇಟ್ ಬಿಡುಗಡೆ ಮಾಡುತ್ತಿದೆ.

ಪಿಕ್ಚರ್–ಇನ್–ಪಿಕ್ಚರ್ ಮೋಡ್ ವಿಶೇಷತೆಯನ್ನು ಒದಗಿಸಬೇಕು ಎನ್ನುವ ಐಫೋನ್ ಬಳಕೆದಾರರ ಬೇಡಿಕೆಗೆ ಪೂರಕವಾಗಿ, ಹೊಸ ವೈಶಿಷ್ಟ್ಯವನ್ನು ವಾಟ್ಸ್‌ಆ್ಯಪ್ ಪರಿಶೀಲಿಸುತ್ತಿದೆ.

ಈ ಕುರಿತು ವಾಬೀಟಾ ಇನ್ಫೋ ವರದಿ ಮಾಡಿದ್ದು, v22.24.0.79 ಐಓಎಸ್ ಬೀಟಾ ಆವೃತ್ತಿಯಲ್ಲಿ ಹೊಸ ಸಾಧ್ಯತೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದೆ.

ಹೊಸ ವಿಶೇಷತೆ ಲಭ್ಯವಾದರೆ, ಬಳಕೆದಾರರು ವಿಡಿಯೊ ಕಾಲ್ ಮಾಡುತ್ತಿರುವಾಗಲೇ, ಇತರ ಆ್ಯಪ್ ಬಳಸಬಹುದು. ಜತೆಗೆ, ವಾಟ್ಸ್‌ಆ್ಯಪ್ ವಿಡಿಯೊ ನೋಡುತ್ತಿರುವಾಗಲೇ ಇತರ ಚಾಟ್ ವಿಂಡೋ ಬಳಸಬಹುದಾಗಿದೆ.

ಈಗಾಗಲೇ ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ನೂತನ ವೈಶಿಷ್ಟ್ಯವನ್ನು ವಾಟ್ಸ್‌ಆ್ಯಪ್ ಒದಗಿಸಿದೆ. ಬೀಟಾ ಆವೃತ್ತಿ ಪರಿಶೀಲನೆ ಮುಗಿದ ಬಳಿಕ ಐಫೋನ್ ಬಳಕೆದಾರರಿಗೆ ಹೊಸ ಆಯ್ಕೆ ದೊರೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT