WhatsApp: ಎಮೋಜಿ ರಿಯಾಕ್ಷನ್ಸ್ ಹೊಸ ಅಪ್ಡೇಟ್ ಬಿಡುಗಡೆ

ಬೆಂಗಳೂರು: ಮೆಸೇಜ್ಗಳಿಗೆ ಎಮೋಜಿ ಮೂಲಕ ರಿಯಾಕ್ಷನ್ ಕೊಡುವ ಹೊಸ ಫೀಚರ್ ಅನ್ನು ವಾಟ್ಸ್ಆ್ಯಪ್ ಬಳಕೆದಾರರಿಗೆ ಪರಿಚಯಿಸಿದೆ.
ಹೊಸ ಅಪ್ಡೇಟ್ ಮೂಲಕ ಎಲ್ಲ ಬಳಕೆದಾರರಿಗೆ ವಾಟ್ಸ್ಆ್ಯಪ್ ನೂತನ ಆಯ್ಕೆ, ಹಂತಹಂತವಾಗಿ ಲಭ್ಯವಾಗಲಿದೆ ಎಂದು ಮೆಟಾ ಕಂಪನಿ ಹೇಳಿದೆ.
ನೂತನ ಅಪ್ಡೇಟ್ ಬಿಡುಗಡೆ ಕುರಿತು ಮಾರ್ಕ್ ಜುಕರ್ಬರ್ಗ್, ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮೆಸೇಜ್ ರಿಯಾಕ್ಷನ್ ಆರಂಭಿಕ ಹಂತದ ಅಪ್ಡೇಟ್ ಆಗಿದ್ದು, ಲೈಕ್ ಥಂಬ್, ಹಾರ್ಟ್, ಹಾಹಾ, ವಾವ್ಹ್, ಕ್ರೈ ಮತ್ತು ಹೈ–ಫೈ ಎನ್ನುವ ಆರು ಎಮೋಜಿಗಳು ಲಭ್ಯವಾಗಲಿದೆ.
ಮುಂದಿನ ಹಂತದಲ್ಲಿ ಮತ್ತಷ್ಟು ಎಮೋಜಿ ರಿಯಾಕ್ಷನ್ ಲಭ್ಯವಾಗಲಿದೆ ಎಂದು ಕಂಪನಿ ಹೇಳಿದೆ.
ಮಾರ್ಚ್ನಲ್ಲಿ ಭಾರತದ 18 ಲಕ್ಷ ವಾಟ್ಸ್ಆ್ಯಪ್ ಖಾತೆಗಳ ನಿಷೇಧ: ಕಾರಣವೇನು?
ಫೇಸ್ಬುಕ್ ಪೋಸ್ಟ್ಗಳಿಗೆ ಎಮೋಜಿ ರಿಯಾಕ್ಷನ್ ಇರುವ ಮಾದರಿಯಲ್ಲಿಯೇ, ವಾಟ್ಸ್ಆ್ಯಪ್ ಎಮೋಜಿ ರಿಯಾಕ್ಷನ್ ಇರಲಿದೆ ಎಂದು ಮೆಟಾ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.