ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Whatsapp | ಗುಣಮಟ್ಟದ ಫೋಟೊ ಕಳುಹಿಸಲು ಹೊಸ ಅಪ್‌ಡೇಟ್

ವಾಟ್ಸ್‌ಆ್ಯಪ್ ಮೂಲಕ ಗುಣಮಟ್ಟ ಕಡಿಮೆಯಾಗದಂತೆ ಫೋಟೊ ಕಳುಹಿಸುವ ಅವಕಾಶ
Last Updated 23 ಜನವರಿ 2023, 9:54 IST
ಅಕ್ಷರ ಗಾತ್ರ

ಬೆಂಗಳೂರು: ವಾಟ್ಸ್‌ಆ್ಯಪ್ ಮೂಲಕ ಕಳುಹಿಸಲಾಗುವ ಫೋಟೊಗಳ ಗುಣಮಟ್ಟ ಕಡಿಮೆಯಾಗುವುದು ಸಾಮಾನ್ಯ ಸಂಗತಿ. ಈ ಬಗ್ಗೆ ಬಳಕೆದಾರರು ಸದಾ ದೂರುತ್ತಲೇ ಇರುತ್ತಾರೆ. ಅಲ್ಲದೆ, ಫೋಟೊಗಳನ್ನು ಬೇಗನೆ ಹೆಚ್ಚು ಫೈಲ್ ಗಾತ್ರವಿಲ್ಲದೇ ಕಳುಹಿಸಬೇಕು ಎನ್ನುವ ಉದ್ದೇಶದಿಂದ ಈ ಕ್ರಮ ಬಳಕೆಯಲ್ಲಿದೆ.

ಆದರೆ, ಗುಣಮಟ್ಟದಲ್ಲಿ ವ್ಯತ್ಯಾಸವಾಗದೇ ಇರುವ ಫೋಟೊ ಕಳುಹಿಸಬೇಕು ಎಂದಾದರೆ, ಅದಕ್ಕೆ ಡಾಕ್ಯುಮೆಂಟ್ ಫೀಚರ್ ಬಳಸಿ, ಕಳುಹಿಸಬಹುದು.

ಅದ್ಯಾವುದರ ತೊಂದರೆ ಬೇಡ ಎನ್ನುವ ಉದ್ದೇಶದಿಂದ, ವಾಟ್ಸ್ಆ್ಯಪ್, ಮೂಲ ಫೋಟೊವನ್ನು, ಅದೇ ಫೈಲ್ ಸೈಜ್, ಗುಣಮಟ್ಟದೊಂದಿಗೆ ಕಳುಹಿಸುವ ಆಯ್ಕೆಯನ್ನು ಬಳಕೆದಾರರಿಗೆ ಒದಗಿಸುತ್ತಿದೆ.

ಈ ಬಗ್ಗೆ ವಾಟ್ಸ್ಆ್ಯ‍ಪ್ ಪರಿಶೀಲನೆ ನಡೆಸುತ್ತಿದ್ದು, ಆ್ಯಂಡ್ರಾಯ್ಡ್ ಬೀಟಾ ವಿ2.23.2.11 ರಲ್ಲಿ ಹೊಸ ಫೀಚರ್ ಅನ್ನು ಪರೀಕ್ಷಿಸಲಾಗುತ್ತಿದೆ. ಹೊಸ ಫೀಚರ್ ಮೂಲಕ, ಬಳಕೆದಾರರು ಫೋಟೊ ಕಳುಹಿಸುವಾಗ, ಅದರಲ್ಲಿ ಫೈಲ್ ಗಾತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು. ಫೋಟೊ ಕ್ಲಾರಿಟಿಯಲ್ಲಿ ಯಾವುದೇ ವ್ಯತ್ಯಾಸವಾಗದಂತೆ ಫೈಲ್ ಕಳುಹಿಸಲು ನೂತನ ಅಪ್‌ಡೇಟ್‌ನಲ್ಲಿ ಅವಕಾಶ ದೊರೆಯಲಿದೆ. ಪರೀಕ್ಷಾರ್ಥ ಬಳಕೆಯ ನಂತರ ಎಲ್ಲ ಬಳಕೆದಾರರಿಗೂ ಹೊಸ ಫೀಚರ್ ಅಪ್‌ಡೇಟ್ ಮೂಲಕ ಲಭ್ಯವಾಗಲಿದೆ ಎಂದು ವಾಬೀಟಾ ಇನ್ಫೋ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT