ನ.1ರ ಬಳಿಕ ಹಳೆಯ ಸ್ಮಾರ್ಟ್ಫೋನ್ಗಳಲ್ಲಿ ವಾಟ್ಸ್ಆ್ಯಪ್ ಕೆಲಸ ಮಾಡುವುದಿಲ್ಲ!

ಬೆಂಗಳೂರು: ನವೆಂಬರ್ 1ರ ಬಳಿಕ ಹಳೆಯ ಸ್ಮಾರ್ಟ್ಫೋನ್ಗಳಲ್ಲಿ ವಾಟ್ಸ್ಆ್ಯಪ್ ಕೆಲಸ ಮಾಡುವುದನ್ನು ನಿಲ್ಲಿಸಲಿದೆ.
ಫೇಸ್ಬುಕ್ ಒಡೆತನದ ವಾಟ್ಸ್ಆ್ಯಪ್ ಈ ಕುರಿತು ಈಗಾಗಲೇ ವಿವರ ನೀಡಿದ್ದು, ಆಂಡ್ರಾಯ್ಡ್ 4.0.3 ಐಸ್ ಕ್ರೀಂ ಸ್ಯಾಂಡ್ವಿಚ್ ಓಎಸ್ ಮತ್ತು ಆ್ಯಪಲ್ ಐಓಎಸ್ 9 ಹಾಗೂ ಕಾಯ್ಓಎಸ್ 2.5.0 ಬಳಸುತ್ತಿರುವ ಹಳೆಯ ಆವೃತ್ತಿಯ ಸ್ಮಾರ್ಟ್ಫೋನ್ಗಳಲ್ಲಿ ಬೆಂಬಲ ಸ್ಥಗಿತವಾಗಲಿದೆ ಎಂದು ಹೇಳಿದೆ.
ಆಂಡ್ರಾಯ್ಡ್ ಫೋನ್ಗಳ ಪಟ್ಟಿಯನ್ನು ವಾಟ್ಸ್ಆ್ಯಪ್ ಬಿಡುಗಡೆ ಮಾಡಿದ್ದು, ಅದರಲ್ಲಿ ಸ್ಯಾಮ್ಸಂಗ್, ಎಲ್ಜಿ, ಝೆಡ್ಟಿಇ, ಹುವೈ, ಸೋನಿ, ಅಲ್ಕಾಟೆಲ್ ಮತ್ತು ಇತರ ಕಂಪನಿಗಳ ವಿವಿಧ ಹಳೆಯ ಮಾದರಿಗಳು ಇದ್ದು, ಅವುಗಳಲ್ಲಿ ವಾಟ್ಸ್ಆ್ಯಪ್ ಬೆಂಬಲ ಸ್ಥಗಿತಗೊಳ್ಳಲಿದೆ.
ಜತೆಗೆ ಐಓಎಸ್ 9 ಬಳಕೆ ಮಾಡುತ್ತಿರುವ ಐಫೋನ್ಗಳಲ್ಲಿ ಕೂಡ ವಾಟ್ಸ್ಆ್ಯಪ್ ಮುಂದೆ ಕೆಲಸ ಮಾಡುವುದಿಲ್ಲ.
ವಾಟ್ಸ್ಆ್ಯಪ್ ಪರಿಚಯಿಸಲಿದೆ ಹೊಸ ಅಪ್ಡೇಟ್: ಲಾಸ್ಟ್ ಸೀನ್, ಸ್ಟೇಟಸ್ ಸೆಟ್ಟಿಂಗ್ಸ್
ನಿರ್ವಹಣೆ ಮತ್ತು ಹೆಚ್ಚುವರಿ ಆವೃತ್ತಿ ಅಪ್ಡೇಟ್, ಹೊಸ ಫೀಚರ್ಗಳಿಗೆ ಬೆಂಬಲ ನೀಡದಿರುವ ಫೋನ್ಗಳು ಸೇರಿದಂತೆ ಹಲವು ಅಂಶಗಳನ್ನು ಗಮನದಲ್ಲಿರಿಸಿಕೊಂಡು ವಾಟ್ಸ್ಆ್ಯಪ್ ಹೊಸ ಫೀಚರ್ ಬಿಡುಗಡೆ ಮಾಡುತ್ತಿದೆ. ಜತೆಗೆ ಹಳೆಯ ಆವೃತ್ತಿಗೆ ಅಪ್ಡೇಟ್ ನಿಲ್ಲಿಸುತ್ತಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.