ಗುರುವಾರ , ಜೂನ್ 24, 2021
22 °C

ವಾಟ್ಸ್‌ಆ್ಯಪ್‌: ಭಾರತದಲ್ಲಿ ಹೊಸ ವರ್ಷಕ್ಕೆ 2,000 ಕೋಟಿ ಸಂದೇಶಗಳ ವಿನಿಮಯ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ವಾಟ್ಸ್ಆ್ಯಪ್‌ ಸಂದೇಶ

ನವದೆಹಲಿ: ಹೊಸ ವರ್ಷಕ್ಕೆ ವಾಟ್ಸ್‌ಆ್ಯಪ್‌ ಮೂಲಕ ಕೋಟ್ಯಂತರ ಶುಭಾಶಯ ಸಂದೇಶಗಳು ಹರಿದಾಡಿವೆ. 2019 ಮುಗಿದು 2020 ಆರಂಭವಾಗುವ ಮಧ್ಯರಾತ್ರಿಯಿಂದ 24 ಗಂಟೆಗಳ ವರೆಗೂ ಭಾರತದಲ್ಲಿ 2,000 ಕೋಟಿ (20 ಬಿಲಿಯನ್‌) ಸಂದೇಶಗಳು ವಿನಿಮಯಗೊಂಡಿವೆ. 

ದೇಶದಲ್ಲಿ ಸುಮಾರು 40 ಕೋಟಿ ವಾಟ್ಸ್‌ಆ್ಯಪ್‌ ಬಳಕೆದಾರರಿದ್ದು, ಒಟ್ಟು 2 ಸಾವಿರ ಕೋಟಿ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ವಾಟ್ಸ್‌ಆ್ಯಪ್‌ ಬಹಿರಂಗ ಪಡಿಸಿದೆ. ಒಂದೇ ದಿನ ಜಗತ್ತಿನಾದ್ಯಂತ ವಾಟ್ಸ್‌ಆ್ಯಪ್‌ ಮೂಲಕ ವಿನಿಮಯ ಆಗಿರುವ ಸಂದೇಶಗಳು ಸುಮಾರು 10,000 ಕೋಟಿ.

ವಾಟ್ಸ್‌ಆ್ಯಪ್‌ನ 10 ವರ್ಷಗಳ ಇತಿಹಾಸದಲ್ಲೇ 2019ರ ಡಿಸೆಂಬರ್‌ 31 ಅತ್ಯಂತ ಹೆಚ್ಚು ಸಂದೇಶಗಳನ್ನು ಕಂಡ ದಿನವಾಗಿದೆ. ವಿನಿಮಯಗೊಂಡಿರುವ 10 ಸಾವಿರ ಕೋಟಿ ಸಂದೇಶಗಳ ಪೈಕಿ 1,200 ಕೋಟಿ ಚಿತ್ರ ಸಂದೇಶಗಳಾಗಿವೆ. 

ವಾಟ್ಸ್‌ಆ್ಯಪ್‌ನ ಟೆಕ್ಸ್ಟ್‌ ಮೆಸೇಜ್‌, ಸ್ಟೇಟಸ್‌, ಪಿಕ್ಟರ್‌ ಮೆಸೇಜ್‌, ಕಾಲಿಂಗ್‌ ಹಾಗೂ ವಾಯ್ಸ್‌ ನೋಟ್ಸ್‌ ಆಯ್ಕೆಗಳನ್ನು 2019ರಲ್ಲಿ ಬಳಕೆದಾರರು ಹೆಚ್ಚು ಬಳಸಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು