ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

New Update: ವಾಟ್ಸ್ಆ್ಯಪ್ ವೆಬ್‌ನಲ್ಲಿ ಈಗ ಪೋಲ್ ಆಯ್ಕೆ

ವಾಟ್ಸ್ಆ್ಯಪ್ ಹೊಸ ಫೀಚರ್ ಈಗ ಡೆಸ್ಕ್‌ಟಾಪ್ ಆವೃತ್ತಿಯಲ್ಲೂ ಲಭ್ಯ
Last Updated 30 ನವೆಂಬರ್ 2022, 7:08 IST
ಅಕ್ಷರ ಗಾತ್ರ

ಬೆಂಗಳೂರು: ವಾಟ್ಸ್‌ಆ್ಯಪ್ ಪೋಲ್ ಆಯ್ಕೆಯನ್ನು ಈಗಾಗಲೇ ಆ್ಯಂಡ್ರಾಯ್ಡ್ ಮತ್ತು ಐಫೋನ್‌ಗಳಲ್ಲಿ ನೀಡಿದೆ.

ಹೊಸ ಫೀಚರ್ ಕುರಿತು ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೈಯಕ್ತಿಕ ಚಾಟ್ ಮತ್ತು ಗ್ರೂಪ್‌ಗಳಲ್ಲಿ ವಾಟ್ಸ್ಆ್ಯಪ್ ಪೋಲ್ ಆಯ್ಕೆ ಇರುವುದು ಉತ್ತಮ ಎಂದು ಜನರು ಹೇಳಿದ್ದಾರೆ. ಹಲವು ಸಂದರ್ಭಗಳಲ್ಲಿ ಪ್ರತಿಯೊಬ್ಬರಿಗೂ ಪ್ರತ್ಯೇಕ ಸಂದೇಶ ಕಳುಹಿಸಿ, ಅಭಿಪ್ರಾಯ ಕೇಳುವ ಬದಲು, ವಾಟ್ಸ್ಆ್ಯಪ್ ಪೋಲ್ ಆಯ್ಕೆ ಮೂಲಕವೇ ಸುಲಭದಲ್ಲಿ ತಿಳಿದುಕೊಳ್ಳಬಹುದಾಗಿದೆ.

ನೂತನ ಪೋಲ್ ಆಯ್ಕೆಯನ್ನು ವಾಟ್ಸ್ಆ್ಯಪ್ ಈಗ ಡೆಸ್ಕ್‌ಟಾಪ್ ಆವೃತ್ತಿಯಲ್ಲೂ ಪರಿಚಯಿಸಿದೆ.

ಬಳಕೆದಾರರು ಡೆಸ್ಕ್‌ಟಾಪ್ ಮಾದರಿಯಲ್ಲಿ ಇರುವ ಕ್ಲಿಪ್ ಅಟ್ಯಾಚ್ ಆಯ್ಕೆ ಕ್ಲಿಕ್ ಮಾಡಿದರೆ, ಅಲ್ಲಿ ಪೋಲ್ ರಚಿಸುವ ಆಪ್ಷನ್ ಕಾಣಿಸಿಕೊಳ್ಳುತ್ತದೆ.

ಒಂದು ಪ್ರಶ್ನೆಯನ್ನು ನೀಡಿದ ಬಳಿಕ, ನಂತರ ಅದಕ್ಕೆ ಆಯ್ಕೆಗಳನ್ನು ರಚಿಸಲು ಅವಕಾಶವಿದೆ. ಒಂದು ಪೋಲ್‌ನಲ್ಲಿ 12 ರವರೆಗೆ ಆಯ್ಕೆಗಳನ್ನು ನೀಡಬಹುದು. ಅದಾದ ಬಳಿಕ ಸೆಂಡ್ ಕೊಟ್ಟರೆ ಸಾಕು.

ನಿಮ್ಮ ಪೋಲ್‌ಗೆ ಎಷ್ಟು ಮತ ಬಂದಿದೆ, ಯಾವ ಆಯ್ಕೆಗಳಿಗೆ ಆದ್ಯತೆ ನೀಡಲಾಗಿದೆ ಎನ್ನುವುದು ಕಾಣಿಸುತ್ತದೆ. ಮೊಬೈಲ್‌ನಲ್ಲಿ ಇರುವಂತೆಯೇ, ಇಲ್ಲೂ ಕೂಡ ಬಳಕೆದಾರರು ಒಂದಕ್ಕಿಂತ ಹೆಚ್ಚಿನ ಆಯ್ಕೆ ಕ್ಲಿಕ್ ಮಾಡಬಹುದು. ಪೋಲ್ ಫಾರ್ವಡ್ ಮಾಡಲು ಸಾಧ್ಯವಾಗುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT