ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Xavier Uncle: ಮಿಮ್ ಸ್ಟಾರ್ ಝೇವಿಯರ್ ಯಾರು?

Xavier ಹೆಸರಿನ ಪ್ರತಿಕ್ರಿಯಾತ್ಮಕ ಮಿಮ್‌ಗಳು ಸಾಮಾಜಿಕ ಜಾಲತಾಣದಲ್ಲಿ ಬಹಳ ಜನಪ್ರಿಯ
Published 10 ಅಕ್ಟೋಬರ್ 2023, 12:48 IST
Last Updated 10 ಅಕ್ಟೋಬರ್ 2023, 12:48 IST
ಅಕ್ಷರ ಗಾತ್ರ

ಬೆಂಗಳೂರು: ಸಾಮಾಜಿಕ ಜಾಲತಾಣಗಳು ಬಂದ ಮೇಲೆ ಅದರ ಹಿಂದೆಯೇ ಓಡಿ ಬಂದಂತಹವು ಮಿಮ್‌ಗಳು, ಟ್ರೋಲ್‌ಗಳು..

ಭಾರತದಲ್ಲಿ ಕೂಡ ಟ್ರೋಲ್‌ಗಳಿಗೆ, ಮಿಮ್‌ಗಳಿಗೆ ಕೊರತೆಯೇನಿಲ್ಲ. ಪ್ರತಿದಿನ ಇಂಗ್ಲಿಷ್, ಹಿಂದಿ ಸೇರಿದಂತೆ ಅನೇಕ ಪ್ರಾದೇಶಿಕ ಭಾಷೆಗಳಲ್ಲಿ ಸಾವಿರಾರು ಮಿಮ್‌ಗಳು, ಟ್ರೋಲ್‌ಗಳು ಹುಟ್ಟಿಕೊಳ್ಳುತ್ತವೆ. ಅದರಲ್ಲೂ ಮಿಮ್‌ಗಳಲ್ಲಿ ಕೆಲವು ಫೋಟೊಗಳು, ಕೆಲವರ ಭಾವಚಿತ್ರಗಳು, ವಿಡಿಯೊಗಳು ಜನಮಾನಸದಲ್ಲಿ ಅಚ್ಚಳಿಯದೇ ಉಳಿಯುತ್ತವೆ. ಕೆಲವೊಂದು ಭಾರಿ ಗಮನ ಸೆಳೆಯುತ್ತವೆ.

ಭಾರತದ ಸಾಮಾಜಿಕ ಜಾಲತಾಣಗಳಲ್ಲಿ ಈ ಮಿಮ್‌ಗಳಲ್ಲಿ ಒಂದು ಜನಪ್ರಿಯ ಮುಖ ಎಂದರೆ ಅದು ಝೇವಿಯರ್ ಅಲಿಯಾಸ್ Xavier Uncle. ಈ ಝೇವಿಯರ್ ಮುಖ ಸಾಮಾಜಿಕ ಜಾಲತಾಣಗಳಲ್ಲಿ ಅಷ್ಟೊಂದು ಪರಿಚಿತ.

ಜಾಲತಾಣಗಳನ್ನು ಬಳಸುವ ಅನೇಕರಿಗೆ ಈ Xavier ಯಾರು? ಎಂಬ ಅನುಮಾನ, ಪ್ರಶ್ನೆ ಮೂಡುತ್ತದೆ. ಇವರ ವಿಶೇಷವೆಂದರೆ ಪೊಸ್ಟ್‌ಗಳಿಗೆ ಇವರು ಕೊಡುವ ಮೊನಚಾದ ಹಾಗೂ ಹಾಸ್ಯಭರಿತ ಪ್ರತಿಕ್ರಿಯೆಗಳು.

ವಿವಿಧ ಪೋಸ್ಟ್‌ಗಳಿಗೆ ಇವರು ಕೊಡುವ ಪ್ರತಿಕ್ರಿಯೆಗಳೇ ಮುಂದೆ ಮಿಮ್‌ಗಳಾಗಿ ಹರಿದಾಡುತ್ತವೆ. ನೋಡುಗರಿಗೆ ಅವರ ಪೋಸ್ಟ್‌ಗಳು ಸಾಕಷ್ಟು ಕಚಗುಳಿ ಇಡುತ್ತವೆ.

ಅಸಲಿಗೆ Xavier ಎನ್ನುವ ವ್ಯಕ್ತಿ ಇದ್ದಾರೋ? ಅಥವಾ ಕಾಲ್ಪನಿಕವೋ? ಎಂಬುದು ಪ್ರಶ್ನೆಯಾಗಿದೆ.

Xavier ಎನ್ನುವ ವ್ಯಕ್ತಿ ಇದ್ದಾರೆ. ಅವರು ಭಾರತೀಯ ಮೂಲದ ಟೆಕಿಯಾಗಿದ್ದು ಅಮೆರಿಕದಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ. ಅವರ ಮೂಲ ಹೆಸರು ಪಾಕಲು ಪಾಪಿಟೊ (Pakalu Papito) ಎನ್ನಲಾಗಿದೆ.

ಬಹುತೇಕ ಸಾಮಾಜಿಕ ಜಾಲತಾಣದಲ್ಲಿ Xavier ಹೆಸರಿನಲ್ಲಿ ಸಾವಿರಾರು ಮಿಮ್‌ಗಳು ಕಾಣಿಸುತ್ತವೆ. ಇವರು ಕೊಡುವ ಪ್ರತಿಕ್ರಿಯೆಗಳಿಂದ ಅನೇಕರು ಇವರನ್ನು ಝೇವಿಯರ್ ಅಂಕಲ್ ಎಂದೇ ಕರೆಯುತ್ತಾರೆ.

ಇನ್ನೊಂದು ವಿಶೇಷವೆಂದರೆ ಅನೇಕ ಟ್ರೋಲ್‌ ಪೇಜ್‌ಗಳು ತಮ್ಮ ಪೋಸ್ಟ್‌ಗಳಿಗೆ ಝೇವಿಯರ್ ಹೆಸರನ್ನು ಬಳಸಿಕೊಂಡು ಪೋಸ್ಟ್ ಮಾಡುವುದು ಇದೆ.

ಆಧಾರ– Know Your Memes ವೆಬ್‌ಸೈಟ್

ಝೇವಿಯರ್ ಹೆಸರಿನ ಕೆಲವೊಂದು ಮಿಮ್‌ಗಳು ಇಲ್ಲಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT