ವಾಷಿಂಗ್ಟನ್: ದತ್ತಾಂಶ ಭದ್ರತೆಗೆ ಸಂಬಂಧಿಸಿ ಅಮೆರಿಕದ ನಿಲುವಿಗೆ ಈಗಾಗಲೇ ಬದ್ಧವಾಗಿದ್ದರೂ ನಿಷೇಧ ಹೇರಿರುವುದು ನಿರಾಶೆ ತಂದಿದೆ ಎಂದು ಚೀನಾದ ಬೈಟ್ಡ್ಯಾನ್ಸ್ ಒಡೆತನದ ಟಿಕ್ಟಾಕ್ ಹೇಳಿದೆ. ಭಾನುವಾರದಿಂದ ಜಾರಿಗೆ ಬರುವಂತೆ ಅಮೆರಿಕದ ಆ್ಯಪ್ ಸ್ಟೋರ್ಗಳಿಂದ ಟಿಕ್ಟಾಕ್ಗೆ ನಿಷೇಧ ಹೇರಲಾಗಿದೆ.

ಆದಾಗ್ಯೂ, ಒರಾಕಲ್ ಜತೆಗಿನ ಒಪ್ಪಂದ ಪೂರ್ಣಗೊಂಡಲ್ಲಿ ಆ್ಯಪ್ ಮೇಲಿನ ನಿಷೇಧ ತೆರವುಗೊಳಿಸುವ ಸಾಧ್ಯತೆ ಇದೆ. ಬಳಕೆದಾರರ ದತ್ತಾಂಶ ಸುರಕ್ಷತೆಗೆ ಸಂಬಂಧಿಸಿ ಅಮೆರಿಕ ಸೂಚಿಸಿರುವ ಕ್ರಮಗಳನ್ನು ಕೈಗೊಳ್ಳಲು ಸಿದ್ಧವಿರುವುದಾಗಿ ಸರ್ಕಾರಕ್ಕೆ ಈಗಾಗಲೇ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಟಿಕ್ಟಾಕ್ ತಿಳಿಸಿದೆ.

ಇದನ್ನೂ ಓದಿ:ಅಮೆರಿಕದಲ್ಲಿ ಮೈಕ್ರೊಸಾಫ್ಟ್ಗಿಲ್ಲ ಟಿಕ್ಟಾಕ್ ಮಾರಾಟ; ಒರಾಕಲ್ ಜೊತೆ ಪಾಲುದಾರಿಕೆ

ಟಿಕ್ಟಾಕ್ ಅನ್ನು ಅಮೆರಿಕ ಒಡೆತನದ ಕಂಪನಿಗೆ ಮಾರಾಟ ಮಾಡಲು ಅವಕಾಶ ನೀಡಿ ಈ ಹಿಂದೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ಹೊರಡಿಸಿದ್ದರು. ಅದರಂತೆ, ಟಿಕ್ಟಾಕ್ ಮಾರಾಟ ಒಪ್ಪಂದ ಪೂರ್ಣಗೊಳಿಸಲು ಬೈಟ್ಡ್ಯಾನ್ಸ್ಗೆ 45 ದಿನಗಳ ಕಾಲಾವಕಾಶ ನೀಡಲಾಗಿತ್ತು. ಈ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಅಮೆರಿಕ ಆಡಳಿತ ಮುಂದಿನ ಕ್ರಮ ಕೈಗೊಂಡಿತ್ತು.

ಟಿಕ್ಟಾಕ್ ಅನ್ನು ಮಾರಾಟ ಮಾಡಲು ಅಥವಾ ಸ್ಥಗಿತಗೊಳಿಸಲು ಚೀನಾದ ಬೈಟ್ಡ್ಯಾನ್ಸ್ ಕಂಪನಿಗೆ ವಿಧಿಸಲಾಗಿರುವ ಸೆಪ್ಟೆಂಬರ್ 15ರ ಗಡುವನ್ನು ವಿಸ್ತರಿಸುವುದಿಲ್ಲ ಎಂದು ಟ್ರಂಪ್ ಇತ್ತೀಚೆಗೆ ಹೇಳಿದ್ದರು.

ಬೈಟ್ಡಾನ್ಸ್ ಕಂಪನಿಯು ಟಿಕ್ಟಾಕ್ ಬಳಕೆದಾರರ ದತ್ತಾಂಶವನ್ನು ಕದ್ದು ಅದನ್ನು ಬೀಜಿಂಗ್ಗೆ ರವಾನಿಸುತ್ತಿದೆ ಎಂದು ಅಮೆರಿಕದ ಗೂಗಲ್, ಆ್ಯಪಲ್ ಸೇರಿದಂತೆ ಇತರ ಪ್ರತಿಷ್ಠಿತ ಕಂಪನಿಗಳು ಸಹ ದೂರಿದ್ದವು. ಆದರೆ, ಈ ಆರೋಪವನ್ನು ಬೈಟ್ಡಾನ್ಸ್ ನಿರಾಕರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.