ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಟ್ಸ್‌ಆ್ಯಪ್‌ಗೂ ಫಿಂಗರ್‌ಪ್ರಿಂಟ್‌ ಲಾಕ್

Last Updated 6 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಈ ‌ಡಿಜಿಟಲ್‌ ಯುಗದಲ್ಲಿ ಖಾಸಗೀತನದ ರಕ್ಷಣೆ ಬಹಳ ಕಷ್ಟ ಎನ್ನುವುದು ಪದೇ ಪದೇ ಸಾಬೀತಾಗುತ್ತಲೇ ಇದೆ.ಜನಪ್ರಿಯ ಸಾಮಾಜಿಕ ಮಾಧ್ಯಮ ವಾಟ್ಸ್‌ಆ್ಯಪ್‌ಗೆ ಬಹಳ ತಡವಾಗಿಯಾದರೂ ಇದರ ಮನವರಿಕೆ ಆದಂತಿದೆ.ನಮ್ಮದು ಎಂಡ್‌–ಟು–ಎಂಡ್‌ ಎನ್‌ಕ್ರಿಪ್ಷನ್‌ ಸುರಕ್ಷತೆ ಎಂದು ಬೀಗುತ್ತಿದ್ದ ವಾಟ್ಸ್‌ಆ್ಯಪ್‌ಗೂ ಮಾಹಿತಿ ಚೋರರು ದಾಳಿ ನಡೆಸಿದ್ದಾರೆ.

ಇಸ್ರೇಲ್‘ಎನ್‌ಎಸ್‌ಒ ಗ್ರೂಪ್’ ನಿರ್ಮಿತಗೂಢಚರ್ಯೆ ತಂತ್ರಾಂಶ ‘ಪೆಗಾಸಸ್‌’ ಬಳಸಿಕೊಂಡು ಜಗತ್ತಿನಾದ್ಯಂತ 1400
ವ್ಯಕ್ತಿಗಳ ವಾಟ್ಸ್‌ಆ್ಯಪ್‌ ಕರೆ, ಸಂದೇಶ ಮತ್ತು ಇತರ ಮಾಹಿತಿ ಕದಿಯಲಾಗಿದೆ. ಹೀಗಾಗಿ ಬಳಕೆದಾರರಿಗೆ ಹೆಚ್ಚಿನ ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ಫಿಂಗರ್‌ಪ್ರಿಂಟ್‌ ಅನ್‌ಲಾಕ್‌ ಸೌಲಭ್ಯ ಕಲ್ಪಿಸಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ.

ಹಾಗಾದರೆ ಇದರಿಂದ ಪೂರ್ಣ ಪ್ರಮಾಣದ ಸುರಕ್ಷತೆ ಸಿಗುತ್ತದೆ ಎಂದು ಪ್ರಶ್ನಿಸಿದರೆ ಹೌದು ಎನ್ನಲಾಗದು. ಏಕೆಂದರೆ ವಾಟ್ಸ್‌ಆ್ಯಪ್‌ಗೆ ಯಾವುದೇ ರೀತಿಯ ಲಾಕ್‌ ಸೌಲಭ್ಯ ಇಲ್ಲ ಎನ್ನುವ ಕಾರಣಕ್ಕೆ ದಾಳಿ ನಡೆದಿರುವುದಲ್ಲ.ಥರ್ಡ್‌ಪಾರ್ಟಿ ಆ್ಯಪ್‌ ಬಳಸಿ ವಾಟ್ಸ್‌ಆ್ಯಪ್‌ ಲಾಕ್‌ ಮಾಡುವ ಬದಲು ಕಂಪನಿಯೇ ಆ ಸೌಲಭ್ಯ ನೀಡಿದೆಯಷ್ಟೆ. ಥರ್ಡ್‌ ಪಾರ್ಟಿ ಆ್ಯಪ್‌ ಬಳಿಸಿದರೆ ಅದು ವಾಟ್ಸ್‌ಆ್ಯಪ್‌ ಅಲ್ಲದೆ ನಮ್ಮ ಮೊಬೈಲ್‌ ಮೇಲೆಯೇ ನಿಗಾ ಇಡಬಹುದು ಎನ್ನುವ ಆತಂಕವನ್ನು ಇದು ನೀಗಿಸಿದೆಯಷ್ಟೆ. ಅಷ್ಟಕ್ಕೂ ಈಗಂತೂ ಮೊಬೈಲ್‌ಗೇ ಫೇಸ್‌ ಅನ್‌ಲಾಕ್‌, ಫಿಂಗರ್‌ಪ್ರಿಂಟ್‌ ಅನ್‌ಲಾಕ್‌ ಇರುವಾಗ ಪ್ರತ್ಯೇಕವಾಗಿ ಒಂದೊಂದು ಆ್ಯಪ್‌ ಅನ್ನೂ ಲಾಕ್‌ ಇರಲೇ ಬೇಕು ಎಂದೇನೂ ಇಲ್ಲ. ಮಕ್ಕಳ ಕೈಗೆ ಮೊಬೈಲ್‌ ಕೊಡುವವರಿಗೆ ಇಂತಹ ಸೌಲಭ್ಯದ ಅಗತ್ಯ ಇರುತ್ತದೆ.

ಲಾಕ್‌ ಸಕ್ರಿಯಗೊಳಿಸುವುದು ಹೇಗೆ?

ಮೊದಲಿಗೆ ಗೂಗಲ್‌ ಪ್ಲೇ ಸ್ಟೋರ್‌ಗೆ ಹೋಗಿ ವಾಟ್ಸ್‌ಆ್ಯಪ್‌ ಅಪ್‌ಡೇಟ್‌ ಆಗಿದೆಯೇ ಪರಿಶೀಲಿಸಿ. ಆಗದೇ ಇದ್ದರೆ ಅಪ್‌ಡೇಟ್‌ ಮಾಡಿ. ಬಳಿಕ ಈ ಕೆಳಗಿನ ಕ್ರಮ ಅನುಸರಿಸಿ.

ವಾಟ್ಸ್‌ಆ್ಯಪ್‌ನಲ್ಲಿ ಬಲತುದಿಗೆ ಕಾಣುವ ಮೂರು ಡಾಟ್‌ಗಳ ಮೇಲೆ ಕ್ಲಿಕ್‌ ಮಾಡಿದ ನಂತರ Settings>Account>Privacy>Fingerprint lock ಮೇಲೆ ಕ್ಲಿಕ್‌ ಮಾಡಿದೆ ಅಲ್ಲಿ ಮೂರು ಆಯ್ಕೆಗಳು ತೆರೆದುಕೊಳ್ಳುತ್ತವೆ. immediately, After 1 minute, After 30 minutes ಅದರಲ್ಲಿ ಸೂಕ್ತ ಎನ್ನಿಸುವುದನ್ನು ಬಳಸಬಹುದು.

ಐಫೋನ್‌: ಈಗಾಗಲೇ ಐಫೋನ್‌ನಲ್ಲಿ ಬಯೊಮೆಟ್ರಿಕ್‌ ಲಾಕ್‌ ಸೌಲಭ್ಯ ಇದೆ. ಸಕ್ರಿಯಗೊಳಿಸಲು Settings > Account > Privacy > Screen Lock

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT