ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್ಎಎಲ್‌ನಿಂದ 10 ಕೆ.ಜಿ ತೂಕದ ಪುಟಾಣಿ ಹೆಲಿಕಾಪ್ಟರ್‌!

Last Updated 3 ಆಗಸ್ಟ್ 2018, 19:40 IST
ಅಕ್ಷರ ಗಾತ್ರ

ಬೆಂಗಳೂರು: ಸೇನೆ, ಪ್ಯಾರಾ ಮಿಲಿಟರಿ ಮತ್ತು ನಾಗರಿಕ ಭದ್ರತೆಗೆ ಬಳಸಬಹುದಾದ 10.5 ಕೆ.ಜಿ ತೂಕದ ರೋಟರಿ ಹೆಲಿಕಾಪ್ಟರ್‌ನ ಪರೀಕ್ಷಾರ್ಥ ಹಾರಾಟವನ್ನು ಎಚ್‌ಎಎಲ್‌ (ಹಿಂದೂಸ್ತಾನ್ ಏರೋನಾಟಿಕ್ಸ್‌ ಲಿಮಿಟೆಡ್‌) ನಡೆಸಿದೆ.

ಐಐಟಿ ಕಾನ್ಪುರದ ಸಹಭಾಗಿತ್ವದಲ್ಲಿ ಎಚ್‌ಎಎಲ್‌ ಇದನ್ನು ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿದೆ.ವೈರ್‌ ಸಿಸ್ಟಮ್‌ ಮೂಲಕ ರೋಟರಿ ಮಾನವ ರಹಿತ ಪುಟ್ಟ ಹೆಲಿಕಾಪ್ಟರ್‌ ಕಾರ್ಯ ನಿರ್ವಹಿಸುತ್ತದೆ. ನ್ಯಾವಿಗೇಷನ್‌ ಮತ್ತು ಭೂ ನಿಯಂತ್ರಣ ವ್ಯವಸ್ಥೆಯನ್ನು ಇದಕ್ಕೆ ಅಳವಡಿಸಲಾಗಿದೆ.

ಇತ್ತೀಚೆಗೆ ಆಡಳಿತ ಮಂಡಳಿ ಸದಸ್ಯರ ಸಮ್ಮುಖದಲ್ಲಿ ಪರೀಕ್ಷಾರ್ಥ ಹಾರಾಟ ನಡೆಸಲಾಯಿತು. ಈ ಸಂದರ್ಭದಲ್ಲಿ ಯಾವುದೇ ತೊಂದರೆ ಕಂಡು ಬರಲಿಲ್ಲ. ಇದು ‘ಟೂ ಸ್ಟ್ರೋಕ್‌’ ಪೆಟ್ರೊಲ್‌ ಎಂಜಿನ್‌ ಹೊಂದಿದೆ. 2.5 ಕೆ.ಜಿ ತೂಕದ ವಸ್ತುಗಳನ್ನು ಹೊತ್ತೊಯ್ಯತ್ತದೆ. ನೇರ ಪ್ರಸಾರ ಮಾಡುವ ವಿಡಿಯೊ ಕ್ಯಾಮರಾ ಒಳಗೊಂಡಿದ್ದು, ಒಂದು ಗಂಟೆಯಲ್ಲಿ 8 ರಿಂದ 10 ಕಿ.ಮೀ ವ್ಯಾಪ್ತಿಯಲ್ಲಿ ಹಾರಾಟ ನಡೆಸುತ್ತದೆ ಎಂದು ಎಚ್‌ಎಎಲ್‌ ತಿಳಿಸಿದೆ.

ಹಾರಾಟದ ಸಂದರ್ಭದಲ್ಲಿ ಇದರ ವಿವಿಧ ಕ್ಷಮತೆಯ ಸಾಮರ್ಥ್ಯದ ಪ್ರದರ್ಶನವೂ ನಡೆಯಿತು. ಹೆಲಿಕಾಪ್ಟರ್‌ ಹೊಂದಿದ್ದ ವಿಡಿಯೊ ಕ್ಯಾಮರಾ ದೃಶ್ಯಾವಳಿಗಳ ನೇರ ಪ್ರಸಾರ ಮಾಡಿತು.

ವೈಮಾನಿಕ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ಉದ್ದೇಶದಿಂದ ಐಐಟಿ ಮದ್ರಾಸ್‌, ರೂರ್ಕಿ, ಖರಗ್‌ಪುರ್‌, ಬಾಂಬೆ, ಕಾನ್ಪುರ್‌ ಮತ್ತು ಬೆಂಗಳೂರಿನ ಐಐಎಸ್‌ಸಿಗಳಂತಹ ಶೈಕ್ಷಣಿಕ ಸಂಸ್ಥೆಗಳೊಂದಿಗೆ ಎಚ್‌ಎಎಲ್‌ ಕಾರ್ಯನಿರ್ವಹಿಸುತ್ತಿದೆ. ಈ ಸಹಭಾಗಿತ್ವದ ಮೊದಲ ರೋಟರಿ ಮಾನವ ರಹಿತ ಕಿರು ಹೆಲಿಕಾಪ್ಟರ್‌ ಇದಾಗಿದೆ ಎಂದು ಎಚ್‌ಎಎಲ್‌ ವ್ಯವಸ್ಥಾಪಕ ನಿರ್ದೇಶಕ ಟಿ.ಸುವರ್ಣರಾಜು ತಿಳಿಸಿದರು.

ಈ ಮಾದರಿಯನ್ನು ಅನುಸರಿಸಿ ಸ್ವಲ್ಪ ಹೆಚ್ಚು ತೂಕದ ಮಾನವ ರಹಿತ ಹೆಲಿಕಾಪ್ಟರ್‌ ಅಭಿವೃದ್ಧಿಪಡಿಸಲಾಗುವುದು. ಇದರಿಂದ ಅಲ್ಪ ಪ್ರಮಾಣ ಶಸ್ತ್ರಾಸ್ತ್ರಗಳನ್ನು ಒಯ್ಯಲು ಅನುಕೂಲವಾಗುತ್ತದೆ ಎಂದೂ ತಿಳಿಸಿದರು.

ಟಿ.ಸುವರ್ಣರಾಜು,ವ್ಯವಸ್ಥಾಪಕ ನಿರ್ದೇಶಕ, ಎಚ್ಎಎಲ್‌​
ಟಿ.ಸುವರ್ಣರಾಜು,ವ್ಯವಸ್ಥಾಪಕ ನಿರ್ದೇಶಕ, ಎಚ್ಎಎಲ್‌​

* ವೈಮಾನಿಕ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲುಐಐಟಿ ಮದ್ರಾಸ್‌, ರೂರ್ಕಿ, ಖರಗ್‌ಪುರ, ಬಾಂಬೆ, ಕಾನ್ಪುರ ಮತ್ತು ಬೆಂಗಳೂರಿನ ಐಐಎಸ್‌ಸಿಗಳಂತಹ ಶೈಕ್ಷಣಿಕ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ.

–ಟಿ.ಸುವರ್ಣರಾಜು, ವ್ಯವಸ್ಥಾಪಕ ನಿರ್ದೇಶಕ, ಎಚ್ಎಎಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT