ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಗಲ್‌ನ ಸ್ಟ್ರೀಟ್ ವ್ಯೂಗೆ ಪ್ರತಿಸ್ಪರ್ಧೆ: ಮ್ಯಾಪ್ಸ್ ರಿಯಲ್ ವ್ಯೂ ಸೇವೆ ಆರಂಭ

ಅಕ್ಷರ ಗಾತ್ರ

ನವದೆಹಲಿ: ಗೂಗಲ್‌ನ ‘ಸ್ಟ್ರೀಟ್ ವ್ಯೂ’ ಸೇವೆಗಳು ಭಾರತದಲ್ಲಿ ಪುನಾರರಂಭವಾದ ಬೆನ್ನಲ್ಲೇ ದೇಶೀಯ ಮ್ಯಾಪ್‌ ಸೇವೆ ಒದಗಿಸುತ್ತಿರುವ ಮ್ಯಾಪ್ಸ್‌ ಮೈ ಇಂಡಿಯಾ ‘ಮ್ಯಾಪ್ಸ್ ರಿಯಲ್ ವ್ಯೂ’ ಸೇವೆಯನ್ನು ಪರಿಚಯಿಸಿದೆ.

ಗೂಗಲ್‌ನ ಸ್ಟ್ರೀಟ್ ವ್ಯೂಗೆ ‘ಮ್ಯಾಪ್ಸ್ ರಿಯಲ್ ವ್ಯೂ’ ಪೈಪೋಟಿ ಒಡ್ಡಲಿದೆ ಎಂದು ವಿಶ್ಲೇಷಿಸಲಾಗಿದೆ.

ನಿರ್ದಿಷ್ಟ ಪ್ರದೇಶಗಳ 360 ಡಿಗ್ರಿ ಕೋನದ ‘ಹೈ ಡೆಫಿನಿಷನ್’ ಚಿತ್ರಗಳನ್ನು ‘ಮ್ಯಾಪ್ಸ್ ರಿಯಲ್ ವ್ಯೂ’ ಬಳಕೆದಾರರಿಗೆ ತೋರಿಸುತ್ತದೆ. ಇದು 360 ಡಿಗ್ರಿ ಪನೋರಮಿಕ್ ಹಾಗೂ ಸ್ಟ್ರೀಟ್ ಲೆವೆಲ್ 3ಡಿ ಚಿತ್ರಗಳನ್ನು ಒಳಗೊಂಡಿರಲಿದೆ ಎಂದು ನ್ಯಾವಿಗೇಷನ್ ತಜ್ಞರು ಹೇಳಿದ್ದಾರೆ.

ಕಂಪನಿಯು ವಿದೇಶಿ ನಕ್ಷೆ ಅಪ್ಲಿಕೇಶನ್‌ಗಳಿಗೆ ಸುಧಾರಿತ, ಸ್ಥಳೀಯ ಪರ್ಯಾಯವನ್ನು ಒದಗಿಸುವ ಗುರಿಯನ್ನು ಹೊಂದಿದೆ. ವರ್ಷಾಂತ್ಯದ ವೇಳೆಗೆ ಈ ಸೇವೆಯನ್ನು ವಿಸ್ತರಿಸುವ ಯೋಜನೆಯೊಂದಿಗೆ ಭಾರತದ 10 ನಗರಗಳಲ್ಲಿ ‘ಸ್ಟ್ರೀಟ್‌ ವ್ಯೂ’ಯೋಜನೆ ಘೋಷಿಸಲಾಗಿದೆ ಎಂದು ಮ್ಯಾಪ್ ಮೈ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ರೋಹನ್ ವರ್ಮಾ ತಿಳಿಸಿದ್ದಾರೆ.

ರಸ್ತೆಗಳು ಮತ್ತು ಇತರ ಪ್ರದೇಶಗಳ ‘ಹೈ ಡೆಫಿನಿಷನ್’ ಚಿತ್ರಗಳನ್ನು ತೋರಿಸುವ ಗೂಗಲ್‌ ಸ್ಟ್ರೀಟ್ ವ್ಯೂ ಸೇವೆಯನ್ನು ಭದ್ರತಾ ಕಾರಣಗಳಿಗಾಗಿ ಈ ಹಿಂದೆ ಸರ್ಕಾರ ನಿಷೇಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT