ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಆ್ಯಪ್‌ಗಳು: ಫುಟ್ಬಾಲ್‌ ಆಟವೂ.. ಗೂಗಲ್‌ ಭಾಷಾಂತರವೂ

Last Updated 10 ಜುಲೈ 2018, 19:48 IST
ಅಕ್ಷರ ಗಾತ್ರ

ರಷ್ಯಾದಲ್ಲಿ ನಡೆಯುತ್ತಿರುವ ವಿಶ್ವಕಪ್‌ ಫುಟ್ಬಾಲ್ ಜಾತ್ರೆ ಅಂತಿಮ ಹಂತಕ್ಕೆ ಬಂದಿದೆ. ಫುಟ್ಬಾಲ್ ಪಂದ್ಯಗಳನ್ನು ಕಣ್ತುಂಬಿಕೊಳ್ಳಲು ವಿದೇಶಗಳಿಂದ ಕೋಟ್ಯಂತರ ಅಭಿಮಾನಿಗಳು ರಷ್ಯಾ ದೇಶಕ್ಕೆ ಭೇಟಿ ನೀಡಿದ್ದಾರೆ. ವಿದೇಶಿಯರಿಗೆ ಗೂಗಲ್ ಭಾಷಾಂತರ ನೆರವು ನಿಡಿದೆ.

ರಷ್ಯಾದ 11 ಮಹಾನಗರಗಳಲ್ಲಿ ಫುಟ್ಬಾಲ್‌ ಪಂದ್ಯಗಳನ್ನು ಆಯೋಜನೆ ಮಾಡಲಾಗಿದೆ. ವಿಶ್ವದಾದ್ಯಂತ ಇರುವ ಫುಟ್ಬಾಲ್‌ ಅಭಿಮಾನಿಗಳ ದಂಡು ರಷ್ಯಾದಲ್ಲಿ ನೆರೆದಿದ್ದಾರೆ. ಸ್ಥಳೀಯ ಹೋಟೆಲ್‌ಗಳು, ಬಾರ್‌ಗಳು, ಆಹಾರ, ಆಸ್ಪತ್ರೆ, ಶಾಪಿಂಗ್ ಮಾಲ್‌ಗಳು, ಪ್ರವಾಸಿ ತಾಣಗಳು, ಟಿಕೇಟ್‌ ಬುಕ್ಕಿಂಗ್‌ ಮಾಡಲು ಗೂಗಲ್‌ ಭಾಷಾಂತರ ಸಾಕಷ್ಟು ನೆರವಿಗೆ ಬಂದಿದೆ. ಹಾಗೇಗೂಗಲ್ ಮೂಲಕ ರಷ್ಯಾದ ಮಾಹಿತಿಯನ್ನು ಪಡೆದು ಅಲ್ಲಿನ ಸ್ಥಳೀಯ ಜನರೊಂದಿಗೆ ವ್ಯವಹಾರ ನಡೆಸಿದ್ದೇನೆ ಎಂದು ಬ್ರೆಜಿಲ್‌ ಅಭಿಮಾನಿಯೊಬ್ಬರು ಹೇಳಿದ್ದಾರೆ.

ಗೂಗಲ್‌ ಎಲ್ಲವನ್ನೂ ಸರಿಯಾಗಿ ಭಾಷಾಂತರ ಮಾಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಕೊಲಂಬಿಯಾ ಅಭಿಮಾನಿಯೊಬ್ಬರು ಹೇಳಿದ್ದಾರೆ. ಅವರ ಪ್ರಕಾರ ’ನಾನು ಸ್ಥಳೀಯ ಶಾಪಿಂಗ್ ಮಾಲ್‌ಗೆ ಹೋಗಿದ್ದೆ. ಅಲ್ಲಿ ರಷ್ಯನ್ ಯುವತಿಯನ್ನು ಕಂಡು ನೀವು ತುಂಬಾ ಸುಂದರವಾಗಿದ್ದೀರಿ ಎಂದು ಹೇಳಲು ಪ್ರಯತ್ನಿಸಿದೆ. ನನ್ನ ಭಾಷೆಯನ್ನು ಗೂಗಲ್‌ಗೆ ಹಾಕಿ ಇಂಗ್ಲಿಷ್‌ ಭಾಷಾಂತರ ಮಾಡಿಕೊಂಡೇ! ಆದರೆ ಗೂಗಲ್ ಭಾಷಾಂತರದಲ್ಲಿ ಯಡವಟ್ಟಾಗಿತ್ತು! ಅದು ‘ಈ ಹಳೇ ಮಹಿಳೆ ಜಾಸ್ತಿ ಸುಂದರವಾಗಿದ್ದಾಳೆ ಎಂದು ಭಾಷಾಂತರ ಮಾಡಿತ್ತು’ ಎಂದು ಅವರು ಹೇಳುತ್ತಾರೆ.

ಸ್ಥಳಗಳ ಹೆಸರು, ಹೋಟೆಲ್, ಆಹಾರದ ಮಾಹಿತಿ ಮಾತ್ರ ಸರಿಯಾಗಿ ಸಿಗುತ್ತಿತ್ತು. ಆದರೆ ಗೂಗಲ್ ಭಾಷಾಂತರ ಮಾಡಿಕೊಂಡು ಸ್ಥಳೀಯರ ಜತೆ ವ್ಯವಹರಿಸುವುದು ಕಷ್ಟವಾಗುತ್ತಿತ್ತು. ಗೂಗಲ್‌ ತಪ್ಪು ವಾಕ್ಯಗಳನ್ನು ರಚನೆ ಮಾಡಿಕೊಡುತ್ತಿತ್ತು ಎಂದು ಕ್ರೊವೇಶಿಯಾ ಅಭಿಮಾನಿ ಹೇಳುತ್ತಾರೆ.

ಥಾಮ್ಸನ್‌ನಿಂದ ಹೊಸ ಟಿವಿ

ಥಾಮ್ಸನ್‌ ಕಂಪನಿಯು ಭಾರತದ ಮಾರುಕಟ್ಟೆಗೆ ನಾನ್‌ ಸ್ಮಾರ್ಟ್‌ (ಆಧುನಿಕ ತಂತ್ರಾಂಶಗಳನ್ನು ಒಳಗೊಳ್ಳದ) ಟಿವಿಗಳನ್ನು ಬಿಡುಗಡೆ ಮಾಡಿದೆ. ದೇಶದಲ್ಲಿ ಇನ್ನೂ ಸ್ಮಾರ್ಟ್‌ ಟಿವಿ ಬಳಕೆಯ ಬಗ್ಗೆ ಹೆಚ್ಚಿನ ಅರಿವು ಮೂಡಿಲ್ಲ. ಹೀಗಾಗಿಯೇ ನಾವು 24 ಇಂಚು, 32 ಇಂಚು ಮತ್ತು 50 ಇಂಚುಗಳ ನಾನ್‌ ಸ್ಮಾರ್ಟ‌ ಟಿವಿಗಳನ್ನು ಬಿಡುಗಡೆ ಮಾಡಿದ್ದೇವೆ ಎಂದು ಥಾಮ್ಸನ್‌ ಇಂಡಿಯಾದ ಸಿಇಒ ಅವನೀತ್‌ ಸಿಂಗ್‌ ಮಾರ್ವ್ಹಾ ತಿಳಿಸಿದ್ದಾರೆ.

ಭಾರತದಲ್ಲಿ ತಯಾರಿಕಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲಾಗಿದೆ. ಶೇ 20ರಷ್ಟು ಪಾಲು ಹೊಂದುವ ಮೂಲಕ ಭಾರತದಲ್ಲಿನ ಪ್ರಮುಖ ಮೂರು ಆನ್‌ಲೈನ್‌ ಟಿವಿ ಬ್ರ್ಯಾಂಡ್‌ಗಳಲ್ಲಿ ಸ್ಥಾನ ಪಡೆದುಕೊಳ್ಳುವ ಗುರಿಯನ್ನು ಹೊಂದಿದ್ದೇವೆ.ಇತ್ತೀಚಿನ 32 ಮತ್ತು 40 ಇಂಚುಗಳ ಸ್ಮಾರ್ಟ್‌ ಟಿವಿಗಳಲ್ಲಿ ‘ಮೈ ವಾಲ್‌’ ಪರಿಚಯಿಸಲಾಗಿದೆ. ಇದರಲ್ಲಿ ಬಾಲಿವುಡ್‌ನ ಪ್ರಮುಖ ವಿಡಿಯೊಗಳು, ಜನಪ್ರಿಯ ಸಂಗೀತ, ಕ್ರೀಡಾ ಜಗತ್ತಿನ ಪ್ರಮುಖ ವಿದ್ಯಮಾನಗಳು, ವಿಡಿಯೊಗಳು ಹೋಮ್‌ ಸ್ಕ್ರೀನ್‌ನಲ್ಲಿ ಲಭ್ಯವಾಗಲಿವೆ. ಅಲ್ಲದೆ, ಬಿಗ್‌ ಬಾಸ್ಕೆಟ್‌, ಜೊಮಾಟೊ ದಂತಹ ಕಂಪನಿಗಳಿಂದ ಮನೆಗೆ ದಿನಸಿಯನ್ನು ತರಿಸಿಕೊಳ್ಳಲೂ ಈ ಸ್ಮಾರ್ಟ್‌ ಟಿವಿಗಳು ನೆರವಾಗಲಿವೆ.

ಆ್ಯಪ್‌ನಲ್ಲಿ ಸಿಬ್ಬಂದಿ ಮಾಹಿತಿ

ಇನ್ನು ಮುಂದೆ ದೆಹಲಿ ನಾಗರಿಕರು ತಮ್ಮ ಮನೆಗೆ ಬಂದು ಹೋಗಿರುವವಿದ್ಯುತ್ ಪ್ರಸರಣಾ ನಿಗಮದ (ಡಿಸ್ಕಾಂ) ನೌಕರರು ಮತ್ತು ಅಧಿಕಾರಿಗಳ ಮಾಹಿತಿಯನ್ನು ಮೊಬೈಲ್‌ ಆ್ಯಪ್‌ ಮೂಲಕವೇ ತಿಳಿದುಕೊಳ್ಳುವಂತಹ ಸೌಲಭ್ಯವನ್ನು ‘ಡಿಸ್ಕಾಂ’ ಪರಿಚಯಿಸಿದೆ.

ವಿವಿಧ ತಾಂತ್ರಿಕ ಕೆಲಸಗಳಿಗೆ ವಿದ್ಯುತ್ ಮಂಡಳಿಯ ನೌಕರರು, ಮೀಟರ್ ಮಾಪನದವರು ಹಾಗೂ ತಾಂತ್ರಿಕ ಪರಿಶೀಲನೆ ತಂಡದ ಅಧಿಕಾರಿಗಳು ಬಳಕೆದಾರರ ಮನೆಗಳಿಗೆ ಭೇಟಿ ನೀಡಿರುತ್ತಾರೆ. ಈ ವೇಳೆ ಗ್ರಾಹಕರು ಮನೆಯಲ್ಲಿ ಇರುವುದಿಲ್ಲ, ಹಾಗೇ ಅಧಿಕಾರಿಗಳು ಅಥವಾ ನೌಕರರು ಮನೆಗೆ ಭೇಟಿ ನೀಡಿರುವ ಮಾಹಿತಿಯೂ ಗ್ರಾಹಕರಿಗೆ ತಿಳಿದಿರುವುದಿಲ್ಲ. ಈ ಹಿನ್ನೆಲೆಯಲ್ಲಿ ತಾಂತ್ರಿಕ ಕೆಲಸ ಕಾರ್ಯಗಳಿಗೆ ಅಡಚಣೆಯಾಗಿ, ಗ್ರಾಹಕರಿಗೆ ಹೆಚ್ಚಿನ ತೊಂದರೆಯಾಗುತ್ತದೆ. ಈ ಸಮಸ್ಯೆಯನ್ನು ತಪ್ಪಿಸಲು ‘ಡಿಸ್ಕಾಂ’ ತನ್ನ ಮೊಬೈಲ್‌ ಆ್ಯಪ್‌ನಲ್ಲಿ ಹೊಸ ಸೌಲಭ್ಯ ಪರಿಚಯಿಸಿದೆ. ಇದರಿಂದ ಗ್ರಾಹಕರ ಮನೆಗಳಿಗೆ ಭೇಟಿ ನೀಡಿರುವ ಅಧಿಕಾರಿಗಳ ಮಾಹಿತಿ ಮೊಬೈಲ್ ಆ್ಯಪ್‌ ಮೂಲಕ ತಿಳಿಯುತ್ತದೆ. ನಂತರ ಗ್ರಾಹಕರು ಅಧಿಕಾರಿಗಳೊಂದಿಗೆ ಸುಲಭವಾಗಿ ಸಂವಹನ ನಡೆಸಬಹುದು ಎಂದುಡಿಸ್ಕಾಂ ತಿಳಿಸಿದೆ.

ಎಎಂಸಿ ಸಿನಿಮಾ ಟಿಕೆಟ್‌ ಬುಕ್ಕಿಂಗ್‌

ಅಮೆರಿಕದ ಎಎಂಸಿ ಸಿನಿಮಾ ಟಿಕೆಟ್‌ ಬುಕ್ಕಿಂಗ್‌ ಸಂಸ್ಥೆ ಹೊಸ ಚಂದಾದಾರ ವ್ಯವಸ್ಥೆಯನ್ನು ಪರಿಚಯಿಸಿದೆ. ವಾರಕ್ಕೆ ಮೂರು ಸಿನಿಮಾಗಳನ್ನು ವೀಕ್ಷಿಸುವ ಅವಕಾಶವನ್ನು ಕಲ್ಪಿಸಿದೆ. ಇದಕ್ಕಾಗಿ ಸಿನಿಮಾ ಅಭಿಮಾನಿಗಳು ತಿಂಗಳಿಗೆ ₹ 1400 ಹಣವನ್ನು ನೀಡಬೇಕಾಗುತ್ತದೆ.

ಈ ಹಿಂದಿನ ವ್ಯವಸ್ಥೆಯಲ್ಲಿ ತಿಂಗಳಿಗೆ 700 ರೂಪಾಯಿ ನೀಡಿ ಹತ್ತಿರದ ಸಿನಿಮಾ ಮಂದಿರಗಳು, ಮಾಲ್‌ಗಳು, ಸಿನಿಮಾಗಳ ಪಟ್ಟಿ ನೋಡಿಕೊಂಡು ಮುಂಗಡ ಟಿಕೇಟ್‌ ಕಾಯ್ದಿರಿಸಬಹುದಾಗಿತ್ತು. ಆದರೆ ಸಿನಿಮಾಗಳನ್ನು ಉಚಿತವಾಗಿ ವೀಕ್ಷಣೆ ಮಾಡುವ ಅವಕಾಶವನ್ನು ನೀಡಿರಲಿಲ್ಲ. ಇದೀಗ ತಿಂಗಳಿಗೆ 1400 ರೂಪಾಯಿ ನೀಡಿದರೆ ಒಟ್ಟು 12 ಸಿನಿಮಾಗಳನ್ನು ವೀಕ್ಷಣೆ ಮಾಡಬಹುದು ಎಂದು ಕಂಪೆನಿ ತಿಳಿಸಿದೆ.

ಕಂಪನಿಯ ಈ ಹೊಸ ವ್ಯವಸ್ಥೆಗೆ ಸಾಕಷ್ಟು ಟೀಕೆಗಳೂ ವ್ಯಕ್ತವಾಗಿವೆ. ಆದಾಗ್ಯೂ ಪ್ರಾಯೋಗಿಕ ಪರೀಕ್ಷೆಯ ಬಳಿಕ ಸಾಧಕ–ಬಾಧಕಗಳ ಬಗ್ಗೆ ಅವಲೋಕಿಸಿ ಹೊಸ ವ್ಯವಸ್ಥೆಯನ್ನು ಪರಿಚಯಿಸಲಾಗುವುದು ಎಂದು ಎಎಂಸಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT