ಸೌದಿ ಅರೇಬಿಯಾ ದೇಶವು 2017ರ ಅಕ್ಟೋಬರ್ನಲ್ಲಿ ಸೋಫಿಯಾ ಎನ್ನುವ ರೋಬೊಗೆ ಪೌರತ್ವ ನೀಡುವ ಮೂಲಕ ಇತಿಹಾಸ ಸೃಷ್ಟಿಸಿತು.

ಮನುಷ್ಯನಂತೆಯೇ ಕಾಣಿಸುವ (humanoid robot) ರೋಬೊ ಎಂದರೆ ಏನು?

ಕೆಲವು ಕೆಲಸಗಳನ್ನು ತಾನೇ ತಾನಾಗಿ ಮಾಡಬಲ್ಲ, ಕಂಪ್ಯೂಟರ್ ಚಾಲಿತ ಯಂತ್ರವನ್ನು ರೋಬೊ ಎಂದು ಕರೆಯುತ್ತಾರೆ. ಮನುಷ್ಯನಂತೆಯೇ ಕಾಣಿಸುವ ರೋಬೊ ಎಂದರೆ, ‘ಚಲನೆಯಲ್ಲಿ ಹಾಗೂ ರೂಪದಲ್ಲಿ ಮನುಷ್ಯನನ್ನು ಹೋಲುವ ಯಂತ್ರ’.

ಸೋಫಿಯಾ ಸೃಷ್ಟಿಸಿದವ ಯಾರು?

ಇದನ್ನು ಸೃಷ್ಟಿಸಿದ್ದು ಹಾಂಕಾಂಗ್ ಮೂಲದ ಹ್ಯಾನ್ಸನ್ ರೋಬೊಟಿಕ್ಸ್ ಕಂಪನಿ. ಇದರ ನೇತೃತ್ವ ವಹಿಸಿದವ ಮನುಷ್ಯನಂತೆಯೇ ಕಾಣಿಸುವ ರೋಬೊಗಳ ನಿರ್ಮಾಣದಲ್ಲಿ ಪರಿಣತಿ ಸಾಧಿಸಿರುವ ಡೇವಿಡ್ ಹ್ಯಾನ್ಸನ್. ಸೋಫಿಯಾ ರೋಬೊ ಸಹಾಯದಿಂದ ವಯಸ್ಸಾದವರಿಗೆ ನೆರವು ನೀಡುವುದು, ಆರೋಗ್ಯ ಸೇವೆ ಒದಗಿಸುವುದು, ದೈಹಿಕ ವ್ಯಾಯಾಮಕ್ಕೆ ಸಹಾಯ ಮಾಡುವುದು, ಶಿಕ್ಷಣ ಕೊಡುವುದು, ಗ್ರಾಹಕ ಸೇವೆಗಳನ್ನು ಒದಗಿಸುವ ಕೆಲಸಗಳು ಸಾಧ್ಯವಾಗುತ್ತವೆ ಎನ್ನುವುದು ಡೇವಿಡ್ ಅವರ ಅನಿಸಿಕೆ.

ಸೋಫಿಯಾ ನೋಡಲು ಹೇಗಿದ್ದಾಳೆ?

ಹಾಲಿವುಡ್ ನಟಿ ಆಡ್ರಿ ಹೆಪ್ಬರ್ನ್ ಅವರನ್ನು ಮನಸ್ಸಿನಲ್ಲಿ ಇಟ್ಟುಕೊಂಡು, ಸೋಫಿಯಾಳನ್ನು ಸೃಷ್ಟಿಸಲಾಗಿದೆ. ಈಕೆಯ ಚರ್ಮವನ್ನು ಪೇಟೆಂಟ್ ಪಡೆದಿರುವ ಸಿಲಿಕಾನ್ನಿಂದ ತಯಾರಿಸಲಾಗಿದೆ. ಈಕೆಯ ಮುಖದ ಮೇಲೆ ಕಿರುನಗು ಇದೆ. ಸೋಫಿಯಾಳ ಕಣ್ಣುಗಳಿಗೆ ಕ್ಯಾಮೆರಾ ಅಳವಡಿಸಲಾಗಿದ್ದು, ಇದು ಆಕೆಗೆ ಎದುರಿರುವ ವ್ಯಕ್ತಿಯನ್ನು ಗುರುತಿಸಲು ಸಹಾಯ ಮಾಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.