ಮೆಲ್ಬರ್ನ್ (ಪಿಟಿಐ): ‘ಆಸ್ಟ್ರೇಲಿಯಾ ವಿಜ್ಞಾನ ಮತ್ತು ತಂತ್ರಜ್ಞಾನ (ಎಸ್‌ಟಿಎ) ಸಂಸ್ಥೆಯು ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಹಾಗೂ ಗಣಿತ ಕ್ಷೇತ್ರಗಳಲ್ಲಿ ಛಾಪು ಮೂಡಿಸಿರುವ ಒಟ್ಟು 60 ಮಹಿಳೆಯರನ್ನು ಆಸ್ಟ್ರೇಲಿಯಾದ ‘ಸ್ಟೆಮ್ ಸೂಪರ್‌ಸ್ಟಾರ್’ಗಳನ್ನಾಗಿ ಆಯ್ಕೆ ಮಾಡಿದೆ. ಇದರಲ್ಲಿ ಭಾರತ ಮೂಲದ ಮೂವರು ಇದ್ದಾರೆ’ ಎಂದು ‘ದಿ ಆಸ್ಟ್ರೇಲಿಯಾ ಟುಡೇ’ ಬುಧವಾರ ವರದಿ ಮಾಡಿದೆ.

‘ನಾಲ್ಕೂ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಿಳೆಯರಿಗೆ ಸಮಾಜದಲ್ಲಿ ಮನ್ನಣೆ ಒದಗಿಸುವ ಹಾಗೂ ಲಿಂಗ ತಾರತಮ್ಯ ತೊಡೆದು ಹಾಕುವ ಉದ್ದೇಶದಿಂದ ಎಸ್‌ಟಿಎ ಪ್ರತಿ ವರ್ಷವೂ 60 ಮಂದಿ ಸಾಧಕಿಯರನ್ನು ‘ಸ್ಟೆಮ್ ಸೂಪರ್‌ಸ್ಟಾರ್’ಗಳನ್ನಾಗಿ ಆಯ್ಕೆ ಮಾಡುತ್ತದೆ. ಈ ಬಾರಿ ಭಾರತ ಮೂಲದ ನೀಲಿಮಾ ಕಡಿಯಾಳ, ಡಾ.ಆರ್ನ ಬಾಬುರಮಣಿ ಹಾಗೂ ಡಾ.ಇಂದ್ರಾಣಿ ಮುಖರ್ಜಿ ಅವರು ಈ ಗೌರವಕ್ಕೆ ಪಾತ್ರರಾಗಿದ್ದಾರೆ’ ಎಂದು ಪತ್ರಿಕೆಯು ವರದಿಯಲ್ಲಿ ತಿಳಿಸಿದೆ.

‘ನೀಲಿಮಾ ಅವರು ಚಾಲೆಂಜರ್ ಲಿಮಿಟೆಡ್ ಕಂಪನಿಯಲ್ಲಿ ಐಟಿ ಪ್ರೋಗ್ರಾಂ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಕ್ಷೇತ್ರದಲ್ಲಿ 15 ವರ್ಷಕ್ಕೂ ಹೆಚ್ಚಿನ ಸೇವಾ ಅನುಭವ ಹೊಂದಿದ್ದಾರೆ. ಬಾಬುರಮಣಿ ಅವರು ರಕ್ಷಣಾ–ವಿಜ್ಞಾನ ಮತ್ತು ತಂತ್ರಜ್ಞಾನ ಸಮೂಹದಲ್ಲಿ ವೈಜ್ಞಾನಿಕ ಸಲಹೆಗಾರ್ತಿಯಾಗಿದ್ದಾರೆ. ಇಂದ್ರಾಣಿ ಅವರು ತಾಸ್ಮೇನಿಯಾ ವಿಶ್ವವಿದ್ಯಾಲಯದಲ್ಲಿ ಭೂವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ವರದಿಯಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.