ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಟಿಎಂ, ಜೊಮ್ಯಾಟೊ ಸೇವೆಯಲ್ಲಿ ತಾತ್ಕಾಲಿಕ ವ್ಯತ್ಯಯ

Last Updated 23 ಜುಲೈ 2021, 3:17 IST
ಅಕ್ಷರ ಗಾತ್ರ

ನವದೆಹಲಿ: ನೆಟ್‌ವರ್ಕ್‌, ಸೈಬರ್‌ ಸೆಕ್ಯುರಿಟಿ ಸೇರಿದಂತೆ ಇಂಟರ್‌ನೆಟ್ ಮೂಲಸೌಕರ್ಯ ಒದಗಿಸುವ ಕಂಪನಿ ಆಕಮಾಯ್‌ ಟೆಕ್ನಾಲಜೀಸ್‌ ಸೇವೆಯಲ್ಲಿ ಜಾಗತಿಕವಾಗಿ ವ್ಯತ್ಯಯ ಉಂಟಾದ ಪರಿಣಾಮ ಭಾರತದಲ್ಲೂ ಜೊಮ್ಯಾಟೊ, ಪೇಟಿಎಂ ಸೇರಿದಂತೆ ವಿವಿಧ ಆನ್‌ಲೈನ್ ವೆಬ್‌ಸೈಟ್‌ಗಳು ತಾತ್ಕಾಲಿಕವಾಗಿ ತೊಂದರೆ ಎದುರಿಸಿದವು.

ಗುರುವಾರ ರಾತ್ರಿ 10 ಗಂಟೆಯ ಅಸುಪಾಸಿನಲ್ಲಿ ಟ್ವೀಟ್‌ ಮಾಡಿರುವ ಆಕಮಾಯ್‌,ಸೇವೆಗಳಲ್ಲಿ ಅಡೆತಡೆಯನ್ನು ಎದುರಿಸಿದೆ ಎಂದು ತಿಳಿಸಿದೆ. ಅಲ್ಲದೆ ಈ ಕುರಿತು ಪರೀಶೀಲಿಸುವುದಾಗಿ ಹೇಳಿದೆ.

ಆದರೆ ಯಾವುದೇ ರೀತಿಯ ಸೈಬರ್ ದಾಳಿ ನಡೆದಿಲ್ಲ ಎಂದು ಸ್ಪಷ್ಟಪಡಿಸಿದೆ.

ಬಳಿಕ 10.42ರ ಸುಮಾರಿಗೆ ಸಮಸ್ಯೆಯನ್ನು ಬಗೆಹರಿಸಲಾಗಿದ್ದು, ಕಾರ್ಯಾಚರಣೆಯನ್ನು ಪುನರಾರಂಭಿಸಲಾಗಿದೆ ಎಂದು ತಿಳಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಡಿಜಿಟಲ್ ಪಾವತಿ ಸೇವಾ ಕಂಪನಿ ಪೇಟಿಎಂ, ಆಕಮಾಯ್‌ ಜಾಗತಿಕವಾಗಿ ವ್ಯತ್ಯಯ ಎದುರಾದ ಹಿನ್ನೆಲೆಯಲ್ಲಿ ಸೇವೆಯ ಮೇಲೆ ಪರಿಣಾಮ ಬೀರಿದೆ ಎಂದಿದೆ. ಸ್ವಲ್ಪ ಸಮಯದ ಬಳಿಕ ಕಾರ್ಯಾಚರಣೆ ಯಥಾಸ್ಥಿತಿಗೆ ಬಂದಿದೆ ಎಂಬುದನ್ನು ತಿಳಿಸಿದೆ.

ಈ ಬಗ್ಗೆ ಜೊಮ್ಯಾಟೊ ಕೂಡ ಟ್ವೀಟ್ ಮಾಡಿದೆ.

ಇಂಟರ್‌ನೆಟ್ ಸೇವೆ ವ್ಯತ್ಯಯದ ಬಗ್ಗೆ ಹಲವಾರು ಬಳಕೆದಾರರು ಡೌನ್ ಡಿಟೆಕ್ಟರ್ ವೆಬ್‌ಸೈಟ್‌ನಲ್ಲಿ ವರದಿ ಮಾಡಿದ್ದಾರೆ. ಪ್ರಸ್ತುತ ವೆಬ್‌ಸೈಟ್ ಇಂಟರ್‌ನೆಟ್ ಸೇವೆಯಲ್ಲಿ ವ್ಯತ್ಯಯದ ಬಗ್ಗೆ ಟ್ರ್ಯಾಕ್ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT