ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಕ್ಷಿತ ಇಂಟರ್ನೆಟ್‌ ದಿನ: ಆನ್‌ಲೈನ್‌ ವಂಚನೆ ತಪ್ಪಿಸಲು ಈ ಅಂಶಗಳನ್ನು ಪಾಲಿಸಿ..

Last Updated 8 ಫೆಬ್ರುವರಿ 2022, 8:47 IST
ಅಕ್ಷರ ಗಾತ್ರ

ಜಾಗತಿಕವಾಗಿ ಇಂದು (ಫೆ. 08) ಇಂಟರ್ನೆಟ್ಸುರಕ್ಷಿತ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಸುರಕ್ಷಿತವಾಗಿ ಇಂಟರ್ನೆಟ್‌ ಬಳಕೆ ಮಾಡುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದೇ ಈ ದಿನದ ಮುಖ್ಯ ಉದ್ದೇಶವಾಗಿದೆ.

ಜಾಗತಿಕವಾಗಿ 2004ರಿಂದ ಸುರಕ್ಷಿತ ಇಂಟರ್ನೆಟ್ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಇಂದು 19ನೇ ವರ್ಷದ ಸುರಕ್ಷಿತ ಇಂಟರ್ನೆಟ್ ದಿನವನ್ನು 200ಕ್ಕೂ ಹೆಚ್ಚು ದೇಶಗಳಲ್ಲಿ ಆಚರಣೆ ಮಾಡಲಾಗುತ್ತದೆ.

ಈ ದಿನದ ನಿಮಿತ್ತ ಇಂಟರ್ನೆಟ್‌ ಬಳಕೆ ಕುರಿತಂತೆ ಜಾಗೃತಿ ಅಭಿಯಾನಗಳು, ವಿಚಾರ ಸಂಕಿರಣಗಳು, ಶಾಲಾ– ಕಾಲೇಜುಗಳಲ್ಲಿ ಚರ್ಚೆ ಹಾಗೂ ಜಾಗೃತಿ ಸಮಾರಂಭಗಳನ್ನು ಆಯೋಜನೆ ಮಾಡುವುದು ವಿಶೇಷ.

ಪ್ರಸ್ತುತ ದಿನಗಳಲ್ಲಿ ಇಂಟರ್ನೆಟ್‌ ವ್ಯವಹಾರ ಹೆಚ್ಚು ಜನಪ್ರಿಯವಾಗುತ್ತಿದೆ. ಹಾಗೇ ಹ್ಯಾಕಿಂಗ್‌, ರ‍್ಯಾನ್‌ಸಮ್‌ವೇರ್, ಡೆಬಿಟ್‌/ಕ್ರೆಡಿಟ್‌/ ಎಟಿಎಂ ಕಾರ್ಡ್‌ ವಂಚನೆಗಳು ಸೇರಿದಂತೆ ವಿವಿಧ ರೀತಿಯ ಸೈಬರ್‌ ಅಪರಾಧಗಳು ಕೂಡ ಹೆಚ್ಚುತ್ತಿವೆ. ಇವುಗಳಿಂದ ರಕ್ಷಿಸಿಕೊಂಡು ಸುರಕ್ಷಿತವಾಗಿ ಆನ್‌ಲೈನ್‌ ವ್ಯವಹಾರ ನಡೆಸುವುದು ಒಂದು ಸವಾಲಾಗಿದೆ.

ಬಳಕೆದಾರರು ಸಾದ್ಯವಾದಷ್ಟು ಎಚ್ಚರಿಕೆಯಿಂದ ವಹಿವಾಟು ನಡೆಸುವ ಅಗತ್ಯವಿದೆ. ಇದಕ್ಕಾಗಿ ಸೈಬರ್ ಪೊಲೀಸರು ಹಾಗೂ ಇನ್‌ಸೇಪ್‌ ನೆಟ್‌ವರ್ಕ್‌ (ಸುರಕ್ಷಿತ ಬಳಕೆದಾರರ ವೇದಿಕೆ) ನೀಡುವ ಸಲಹೆ ಸೂಚನೆಗಳನ್ನು ಪಾಲಿಸುವುದು ಅಗತ್ಯವಾಗಿದೆ.

ನಾವು ಆನ್‌ಲೈನ್‌ ಬಳಕೆ ಮಾಡುವಾಗ ಪಾಲಿಸಬೇಕಾದ ಕೆಲವು ಸುರಕ್ಷಿತ ಅಂಶಗಳು...

* ಸೈಬರ್‌ ಕೆಫೆ ಹಾಗೂ ಸಾರ್ವಜನಿಕ ವೈ–ಫೈ ಬಳಸಿ ಆನ್‌ಲೈನ್‌ ವಹಿವಾಟು ನಡೆಸದಿರುವುದು.

* ಪಾಸ್‌ವರ್ಡ್‌, ಪಿನ್‌, ಸಿವಿವಿ ನಂಬರ್‌ಗಳನ್ನು ಬೇರೆಯವರೊಂದಿಗೆ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಬಾರದು.

* ನಮ್ಮ ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಹಾಗೂ ಸ್ಮಾರ್ಟ್‌ಫೋನ್‌ಗಳಲ್ಲಿ ಆ್ಯಂಟಿ ವೈರಸ್‌ ಬಳಕೆ ಮಾಡುವುದು ಉತ್ತಮ. ಕಂಪ್ಯೂಟರ್‌, ಲ್ಯಾಪ್‌ಟಾಪ್‌ನಲ್ಲಿ ಫೈರ್‌ವಾಲ್‌ ಇರುವಂತೆ ನೋಡಿಕೊಳ್ಳಬೇಕು. ಆಗಾಗ ಅಪ್ಡೇಟ್‌ ಮಾಡುತ್ತಿರಬೇಕು.

* ಇ-ಮೇಲ್ ಅಥವಾ ಮೊಬೈಲ್‌ ಸಂದೇಶಗಳ ಮೂಲಕ ಬರುವ ಯಾವುದೇ ಲಿಂಕ್‌ಗಳನ್ನು ಕ್ಲಿಕ್‌ ಮಾಡದಿರುವುದು.

* ಬ್ಯಾಂಕ್‌ ವೆಬ್‌ಸೈಟ್‌ನ ಲಾಗಿನ್‌ ಪುಟದಲ್ಲಿ ಎಸ್‌ಎಸ್‌ಎಲ್‌ (Secure Socket Layer) ಭದ್ರತೆ ಇರುವುದನ್ನು ಗಮನಿಸಿಕೊಳ್ಳಬೇಕು. ಇದರಲ್ಲಿ http ಬಳಿಕ ಬರುವ 's' ಎಂಬ ಅಕ್ಷರ ಇದು ಸುರಕ್ಷಿತ ಸೈಟ್‌ ಎಂಬುದನ್ನು ಸೂಚಿಸುತ್ತದೆ.

* ಆನ್‌ಲೈನ್‌ ಶಾಪಿಂಗ್‌ ತಾಣ ಸೇರಿದಂತೆ ಬಳಕೆಯ ವಿವಿಧವೆಬ್‌ಸೈಟ್‌ಗಳಲ್ಲಿ ಸುರಕ್ಷತೆ ಇದೆಯೇ ಎಂಬುದನ್ನು ಖಾತ್ರಿಪಡಿಸಿಕೊಂಡ ನಂತರ ವ್ಯವಹಾರ ಮಾಡುವುದು.

* ಸೈಬರ್‌ ಭದ್ರತೆಗೆ ಸಂಬಂಧಿಸಿದಂತೆ ಸರಕಾರ, ಸೆಬಿ, ಆರ್‌ಬಿಐ ನೀಡುವ ಸಲಹೆ ಸೂಚನೆಗಳನ್ನು ಪಾಲಿಸುವುದು.

* ವಂಚನೆ, ಅನಧಿಕೃತ ವ್ಯವಹಾರ ನಡೆದಲ್ಲಿ ಕೂಡಲೇ ಸೈಬರ್‌ ಪೊಲೀಸರು ಅಥವಾ ಸಂಬಂಧಿಸಿದ ಪ್ರೊವೈಡರ್‌ಗಳು ಅಥವಾ ಬ್ಯಾಂಕಿನ ಗಮನಕ್ಕೆ ತರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT