ಭಾನುವಾರ, ಏಪ್ರಿಲ್ 5, 2020
19 °C

WhatApp ಗೆ ಬರಲಿದೆ ಸ್ವಯಂ-ಡಿಲೀಟ್ ವೈಶಿಷ್ಟ್ಯ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

WhatsApp

ಜನಪ್ರಿಯ ಸಂವಹನಾ ಸಾಮಾಜಿಕ ಜಾಲದ ವೇದಿಕೆಯಾಗಿರುವ ವಾಟ್ಸ್ಆ್ಯಪ್‌ನಲ್ಲಿ ಕಳುಹಿಸಿದ ಸಂದೇಶಗಳು ನಿರ್ದಿಷ್ಟ ಅವಧಿಯೊಳಗೆ ಸ್ವಯಂ ನಾಶವಾಗಬಲ್ಲ ವೈಶಿಷ್ಟ್ಯವನ್ನು ಪರಿಚಯಿಸಲು ಮುಂದಾಗುತ್ತಿದೆ.

ಇತ್ತೀಚೆಗಷ್ಟೇ ಕಣ್ಣುಗಳಿಗೆ ಆಗಬಹುದಾದ ತ್ರಾಸ ಕಡಿಮೆ ಮಾಡಬಲ್ಲ ಡಾರ್ಕ್ ಮೋಡ್ ಪರಿಚಯಿಸಿರುವ ವಾಟ್ಸ್ಆ್ಯಪ್, ಬಹುಚರ್ಚಿತ ಈ ಸ್ವಯಂ-ಡಿಲೀಟ್ ವೈಶಿಷ್ಟ್ಯವನ್ನು ಬಳಕೆದಾರರಿಗೆ ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರತವಾಗಿದೆ. ಈ ಸೌಕರ್ಯವು ಪರೀಕ್ಷಾ ಹಂತದಲ್ಲಿದ್ದು, 2019ರ ಅಕ್ಟೋಬರ್ ತಿಂಗಳಿಂದಲೇ ಇದಕ್ಕೆ ಸಿದ್ಧತೆ ನಡೆದಿತ್ತು.

ಇದುವರೆಗೆ ನಾವು ಕಳುಹಿಸಿದ ವೈಯಕ್ತಿಕವಾಗಿ ಹಾಗೂ ಗ್ರೂಪ್‌ಗಳಿಗೆ ಮಾಡಿದ ಪೋಸ್ಟ್‌ಗಳನ್ನು ನಿಗದಿತ ಸಮಯದೊಳಗೆ ನಾವಾಗಿಯೇ ಡಿಲೀಟ್ ಮಾಡಬಹುದಾಗಿತ್ತು. ಇದನ್ನೇ ನಿರ್ದಿಷ್ಟ ಸಮಯಕ್ಕೆ  ಈ ಸಂದೇಶವು ತಾನಾಗಿ ಡಿಲೀಟ್ ಆಗುವ ವೈಶಿಷ್ಟ್ಯವಿದು. ಆಂಡ್ರಾಯ್ಡ್‌ನಲ್ಲಿ ವಾಟ್ಸ್ಆ್ಯಪ್ ಬೀಟಾ (ಪ್ರಯೋಗಾತ್ಮಕ) ಆವೃತ್ತಿಯಲ್ಲಿ ಈ ವೈಶಿಷ್ಟ್ಯ ಗೋಚರಿಸಿರುವುದಾಗಿ ತಿಳಿದುಬಂದಿದೆ. ಗ್ರೂಪ್‌ಗಳಲ್ಲಿ ಮಾತ್ರವಲ್ಲದೆ ವೈಯಕ್ತಿಕ ಸಂದೇಶಗಳಿಗೂ ಈ ಸೌಕರ್ಯ ಲಭ್ಯವಾಗಲಿದೆ.

ಆದರೆ, ಇದು ಎಲ್ಲರಿಗೂ ಲಭ್ಯವಾದಾಗ, ನಾವು ವೈಶಿಷ್ಟ್ಯವನ್ನು ಸಕ್ರಿಯಗೊಳಿಸಬೇಕಾಗುತ್ತದೆ. ವಾಟ್ಸ್ಆ್ಯಪ್‌ನಲ್ಲಿ ನಿರ್ದಿಷ್ಟ ವ್ಯಕ್ತಿ ಅಥವಾ ಗ್ರೂಪ್ ಹೆಸರನ್ನು ಕ್ಲಿಕ್ ಮಾಡಿದಾಗ, ನೋಟಿಫಿಕೇಶನ್ ಮ್ಯೂಟ್ ಮಾಡುವ, ಮೀಡಿಯಾ ಗೋಚರತೆಯ, ಎನ್‌ಕ್ರಿಪ್ಷನ್ ಮುಂತಾದ ವೈಶಿಷ್ಟ್ಯಗಳು ಕಾಣಿಸುತ್ತವೆ. ಅವುಗಳ ಜೊತೆಗೆ, 'ಡಿಲೀಟ್ ಮೆಸೇಜಸ್' ಎಂಬ ಆಯ್ಕೆಯೂ ಸೇರಿಕೊಳ್ಳಲಿದೆ. ಇದರಲ್ಲಿ ಆಫ್, 1 ಗಂಟೆ, 1 ವಾರ ಇತ್ಯಾದಿ ಸಮಯ ಇರುತ್ತದೆ. ಅದನ್ನು ಕ್ಲಿಕ್ ಮಾಡಿದರೆ, ನಿಗದಿತ ಸಮಯ ಬಂದಾಗ ಬೇರೆಯವರ ಫೋನ್‌ನಲ್ಲಿರುವ ವಾಟ್ಸ್ಆ್ಯಪ್‌ನಿಂದ ಈ ಸಂದೇಶ ತಾನಾಗಿ ಡಿಲೀಟ್ ಆಗುತ್ತದೆ.

ಫೇಸ್‌ಬುಕ್ ಒಡೆತನದ ವಾಟ್ಸ್ಆ್ಯಪ್ ಈ ವೈಶಿಷ್ಟ್ಯವನ್ನು ಎಲ್ಲ ಮೊಬೈಲ್ ಫೋನ್‌ಗಳಿಗೆ ಬಿಡುಗಡೆ ಮಾಡಲಿದೆಯಾದರೂ, ಯಾವಾಗ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇನ್ನೂ ಪರೀಕ್ಷಾ ಹಂತದಲ್ಲಿದ್ದು, ಆಂಡ್ರಾಯ್ಡ್, ಐಒಎಸ್ ಸಾಧನಗಳಿಗೆ ಶೀಘ್ರವೇ ಬಿಡುಗಡೆಯಾಗುವ ನಿರೀಕ್ಷೆ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು