ಭಾನುವಾರ, ಮೇ 29, 2022
31 °C

ಅತ್ಯಾಧುನಿಕ ತಂತ್ರಜ್ಞಾನ: ಊಸರವಳ್ಳಿ ಕಾರುಗಳು!

ಪೃಥ್ವಿರಾಜ್‌ Updated:

ಅಕ್ಷರ ಗಾತ್ರ : | |

Prajavani

ಅತ್ಯಾಧುನಿಕ ತಂತ್ರಜ್ಞಾನ ಪ್ರದರ್ಶನಕ್ಕೆ ವೇದಿಕೆಯನ್ನು ಕಲ್ಪಿಸುವ ವಿಶ್ವದ ಅತಿದೊಡ್ಡ ಟೆಕ್ ಹಬ್ಬ ‘ಸಿಇಎಸ್’ (ಕನ್ಸ್ಯೂಮರ್ ಎಲೆಕ್ಟ್ರಾನಿಕ್ ಶೋ) ಈಚೆಗೆ ಅಮೆರಿಕದ ಲಾಸ್‌ವೆಗಾಸ್‌ನಲ್ಲಿ ಸಂಪನ್ನವಾಯಿತು. ನಿಬ್ಬೆರಗಾಗಿಸುವ ಅದ್ಭುತ ಆವಿಷ್ಕಾರಗಳು ತಂತ್ರಜ್ಞಾನ ಪ್ರಿಯರ ಗಮನ ಸೆಳೆದವು. ಅಂತಹ ಕೆಲವು ಆವಿಷ್ಕಾರಗಳ ಮಾಹಿತಿ ಇಲ್ಲಿದೆ.

ವಿಲಾಸಿಕಾರುಗಳನ್ನು ತಯಾರಿಸುವ ಬಿಎಂಡಬ್ಲ್ಯೂ ಸಂಸ್ಥೆ ಕ್ಷಣಾರ್ಧದಲ್ಲಿ ಬಣ್ಣ ಬದಲಿಸುವಂಥಹ ಅದ್ಭುತ ಕಾರನ್ನು ಈ ಬಾರಿಯ ‘ಸಿಇಎಸ್‌’ನಲ್ಲಿ ಪ್ರದರ್ಶಿಸಿತು. ಒಂದು ಬಟನ್ ಒತ್ತಿದರೆ ಸಾಕು ಬಿಎಂಡಬ್ಲ್ಯೂ ಐಎಕ್ಸ್ ಫ್ಲೊ (BMW iX flow) ಹೆಸರಿನ ಈ ಐಷಾರಾಮಿ ಕಾರಿನ ಬಣ್ಣ ಬದಲಾಗುತ್ತದೆ.

ಎಲೆಕ್ಟ್ರೊಫೊರೆಟಿಕ್ ತಂತ್ರಜ್ಞಾನ ಆಧರಿಸಿ ಇದು ಕಾರ್ಯನಿರ್ವಹಿಸುತ್ತದೆಯಂತೆ. ಈ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಸ್ಥೆ ಇನ್ನೂ ಹೊರಡಿಸಿಲ್ಲ. ಆದರೆ ಕಾರಿನ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಬ್ಯಾಟರಿ ಇಲ್ಲದ ರಿಮೋಟ್
ಇ-ತ್ಯಾಜ್ಯ ಪ್ರಮಾಣ ಕಡಿಮೆ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ಸ್ಯಾಮ್‌ಸಂಗ್ ಬ್ಯಾಟರಿಗಳ ಅಗತ್ಯವಿಲ್ಲದೆ ಕಾರ್ಯನಿರ್ವಹಿಸುವಂಥ ವಿಶೇಷ ರಿಮೋಟ್ ತಯಾರಿಸಿದೆ. ಇದರಲ್ಲಿ ವಿಶೇಷ ರೀತಿಯ ಸೌರಫಲಕಗಳನ್ನು ಅಳವಡಿಸಲಾಗಿದ್ದು, ಸೌರಶಕ್ತಿಯ ನೆರವಿನಿಂದ ಈ ರಿಮೋಟ್ ಕಾರ್ಯನಿರ್ವಹಿಸುತ್ತದೆ ಎಂದು ಸಂಸ್ಥೆ ಹೇಳಿದೆ.

ಚಾಲಕನಿಲ್ಲದೆ ಹೊಲದ ಕೆಲಸ
ಚಾಲಕರಹಿತ ವಾಹನಗಳು ಈ ಬಾರಿಯ ‘ಸಿಇಎಸ್‌’ನಲ್ಲಿ ಹೆಚ್ಚು ಸದ್ದು ಮಾಡಿದವು. ಇವುಗಳಲ್ಲಿ ಜಾನ್ ಡೀರೊ ಅಟಾನಮಸ್ ಟ್ರ್ಯಾಕ್ಟರ್ ಕೂಡ ಒಂದು. ಇದದಲ್ಲಿ ಕ್ಯಾಮೆರಾ ಸೇರಿದಂತೆ ತಂತ್ರಜ್ಞಾನ ಆಧಾರಿತ ವಿವಿಧ ಉಪಕರಣಗಳನ್ನು ಅಳವಡಿಸಲಾಗಿದೆ. ಈ ಉಪಕರಣಗಳಿಂದಾಗಿ ಹೊಲದಲ್ಲಿ ಚಾಲಕನ ಸಹಾಯವಿಲ್ಲದೆ ಸ್ವಯಂಚಾಲಿತವಾಗಿ ಈ ಟ್ರ್ಯಾಕ್ಟರ್‌ ಕಾರ್ಯನಿರ್ವಹಿಸುತ್ತದೆ. ಸ್ಮಾರ್ಟ್‌ಫೋನ್ ನೆರವಿನಿಂದ ರೈತರು ಈ ಟ್ರ್ಯಾಕ್ಟರನ್ನು ನಿಯಂತ್ರಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು