ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್‌ನಲ್ಲಿ ನೋಟಿಫಿಕೇಶನ್ ನಿಯಂತ್ರಿಸಿ

Last Updated 9 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಹುಟ್ಟುಹಬ್ಬ, ಕಾರ್ಯಕ್ರಮ, ಟ್ಯಾಗ್ ಮಾಡಿದ ಪೋಸ್ಟ್, ಹೊಸ ಫ್ರೆಂಡ್ ರಿಕ್ವೆಸ್ಟ್ ಹೀಗೆ ಎಲ್ಲದರ ಬಗ್ಗೆಯೂ ಫೇಸ್‌ಬುಕ್ ನೋಟಿಫಿಕೇಶನ್ ನೀಡುತ್ತದೆ. ಬೇರೆಯವರ ಪೋಸ್ಟ್‌ಗೆ ನಾವು ಕಾಮೆಂಟಿಸಿದಾಗ ಮುಂದಿನ ಕಾಮೆಂಟ್‌ಗಳ ಬಗ್ಗೆ ನಮಗೆ ನೋಟಿಫಿಕೇಶನ್ ಬರುತ್ತಿರುತ್ತದೆ. ಈ ರೀತಿ ನೋಟಿಫಿಕೇಶನ್ ಬೇಡ ಅಂದರೆ Turn off Notification ಆಯ್ಕೆಯೂ ಇರುತ್ತದೆ. ಇದಲ್ಲದೆ ಕೆಲವೊಂದು ಬಾರಿ ನೋಟಿಫಿಕೇಶನ್‌ಗಳು ಕಿರಿಕಿರಿ ಉಂಟು ಮಾಡುತ್ತವೆ. ಸದ್ಯ ನೋಟಿಫಿಕೇಶನ್ ರಗಳೆ ಏನೂ ಬೇಡ ಎಂದಾದರೆ ನೋಟಿಫಿಕೇಶನ್ MUTE ಮಾಡಿದರೆ ಸಾಕು.

ಅಂಡ್ರಾಯ್ಡ್‌ನಲ್ಲಾದರೆ: ನಿಮ್ಮ ಫೋನ್‌ನಲ್ಲಿ ಫೇಸ್‌ಬುಕ್ ಆ್ಯಪ್‌ಓಪನ್ ಮಾಡಿ ಸೆಟ್ಟಿಂಗ್ಸ್ ಆ್ಯಂಡ್ ಪ್ರೈವೆಸಿ ಕ್ಲಿಕ್ ಮಾಡಿ.

ಅಲ್ಲಿ ಡ್ರಾಪ್‌ ಡೌನ್ ಮೆನುನಲ್ಲಿ ಸೆಟ್ಟಿಂಗ್ಸ್ ಕ್ಲಿಕ್ ಮಾಡಿ. ಕೆಳಗಡೆ ಸ್ಕ್ರಾಲ್‌ ಮಾಡಿದಾಗ notifications ನಲ್ಲಿ Notification Settings ಕ್ಲಿಕ್ ಮಾಡಿ. Push Notification Off ಮಾಡಲಿರುವ ಆಪ್ಶನ್ ಅಲ್ಲಿದ್ದು, ಎಷ್ಟು ಗಂಟೆಗಳ ಕಾಲ ಆಫ್ ಮಾಡಬೇಕು ಅಥವಾ ಸದಾ ಆಫ್ ಮಾಡಿಡಲು ಇಲ್ಲಿ ಆಯ್ಕೆ ಇದೆ.
ಅದರ ಕೆಳಗೆ What notifications you receive ಎಂಬ ವಿಭಾಗದಲ್ಲಿ ಕಾಮೆಂಟ್, ಟ್ಯಾಗ್, ಬರ್ತ್‌ಡೇ ಹೀಗೆ ಹಲವಾರು ವಿಷಯಗಳಿರುತ್ತವೆ. ನಿಮಗೆ ಯಾವುದರ ನೋಟಿಫಿಕೇಶನ್ ಬೇಡ ಎಂಬುದನ್ನು ನಿರ್ದಿಷ್ಟ ವಿಭಾಗ ಕ್ಲಿಕ್ ಮಾಡಿ ನೋಟಿಫಿಕೇಷನ್ ಆಫ್ ಮಾಡಿದರೆ ಸಾಕು.

ಉದಾಹರಣೆಗೆ ನಿಮ್ಮ ಫೇಸ್‌ಬುಕ್‌ನಲ್ಲಿ ‘ನಿಮ್ಮ ಗೆಳೆಯರ ಹುಟ್ಟುಹಬ್ಬದ ನೋಟಿಫಿಕೇಶನ್ಬರುವುದು ಬೇಡ’ ಎಂದು ನೀವು ಬಯಸುವುದಾದರೆ Birthdays ಕ್ಲಿಕ್ ಮಾಡಿ. ಅಲ್ಲಿ Allow notifications on Facebook ಎಂಬ ಆಪ್ಶನ್ ಇರುತ್ತದೆ. ಅದು ಎನೇಬಲ್ ಆಗಿದ್ದರೆ ಡಿಸೇಬಲ್ ಮಾಡಿ. ಒಂದು ವೇಳೆ ನೀವು ಡಿಸೇಬಲ್ ಆಗಿದ್ದ ಆಪ್ಶನ್ ಎನೇಬಲ್ ಮಾಡಿದರೆ ಅಲ್ಲಿ ಅಲ್ಲಿ Push, Email, SMS ಎಂಬ ಆಪ್ಶನ್ ಇರುತ್ತದೆ. ಯಾವ ರೀತಿಯಲ್ಲಿ ನಿಮಗೆ ನೋಟಿಫಿಕೇಶನ್ ಕಳಿಸಬೇಕು ಎಂಬ ಆಯ್ಕೆ ಇದಾಗಿದ್ದು ನೀವು ಈ ಮೂರರಲ್ಲಿ ನಿಮಗಿಷ್ಟವಾದ ವಿಧಾನವನ್ನುಆರಿಸಿಕೊಳ್ಳಬಹುದು.

ವೆಬ್‌ ಬ್ರೌಸರ್‌ನಲ್ಲಿ: ಬ್ರೌಸರ್‌ನಲ್ಲಿ ಫೇಸ್‌ಬುಕ್ ಖಾತೆಗೆ ಲಾಗಿನ್ ಆಗಿ ಸೆಟ್ಟಿಂಗ್ಸ್ ಕ್ಲಿಕ್ ಮಾಡಿ ಬಲಭಾಗದಲ್ಲಿ ಸ್ಕ್ರಾಲ್ ಮಾಡಿದ ನೋಟಿಫಿಕೇಶನ್ ಆಪ್ಶನ್ ಕಾಣಿಸುತ್ತದೆ ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ಫೇಸ್‌ಬುಕ್ ನೋಟಿಫಿಕೇಶನ್ ಬರುವಾಗ ಸೌಂಡ್ ಆನ್/ಆಫ್ ಆಯ್ಕೆ ಕಾಣುತ್ತದೆ.ನಿಮ್ಮ ಫೇಸ್‌ಬುಕ್ ಖಾತೆಗೆ ಯಾವೆಲ್ಲಾ ನೋಟಿಫಿಕೇಶನ್‌ಗಳು ಬರುತ್ತವೆ ಎಂಬುದರ ಮಾಹಿತಿ ಇಲ್ಲಿರುತ್ತದೆ. ಅಲ್ಲಿ ನಿಮಗೆ ಯಾವ ನೋಟಿಫಿಕೇಶನ್ ಬೇಕು/ ಬೇಡ ಎಂಬುದನ್ನು ನೀವೇ ನಿರ್ಧರಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT