ವಾಟ್ಸ್ಆ್ಯಪ್‍ನಲ್ಲಿ ನಿಮ್ಮದೇ ಸ್ಟಿಕ್ಕರ್ ಸೃಷ್ಟಿಸಿ

7

ವಾಟ್ಸ್ಆ್ಯಪ್‍ನಲ್ಲಿ ನಿಮ್ಮದೇ ಸ್ಟಿಕ್ಕರ್ ಸೃಷ್ಟಿಸಿ

Published:
Updated:

ವಾಟ್ಸ್ಆ್ಯಪ್‍ನಲ್ಲಿ ಚಾಟ್ ಮಾಡುವಾಗ ಇಮೋಜಿಗಳ ಜತೆ ಸ್ಟಿಕ್ಕರ್‌ಗಳೂ ಹೆಚ್ಚು ಬಳಕೆಯಾಗುತ್ತವೆ. ನಮಗೆ ಇಷ್ಟವಾದ ಸ್ಟಿಕ್ಕರ್‌ಗಳನ್ನು ಡೌನ್‍ಲೋಡ್ ಮಾಡುವುದರ ಜತೆಗೇ ಸ್ಟಿಕ್ಕರ್‌ಗಳನ್ನು ಸೃಷ್ಟಿಸುವ ಅವಕಾಶವೂ ಇದೆ. ಸ್ಟಿಕ್ಕರ್ ಮೇಕರ್ ಆ್ಯಪ್ ಮೂಲಕ ನಮಗೆ ಇಷ್ಟವಾದ ಚಿತ್ರವನ್ನು ಅಥವಾ ನಿಮ್ಮದೇ ಚಿತ್ರವನ್ನು ಸ್ಟಿಕ್ಕರ್‌ ಮಾಡಿ ವಾಟ್ಸ್ಆ್ಯಪ್‌ನಲ್ಲಿ ಬಳಸಬಹುದು.

ಮಾಡಬೇಕಾಗಿರುವುದು ಇಷ್ಟೇ

ಅಂಡ್ರಾಯ್ಡ್ ಫೋನ್ ಬಳಕೆದಾರರಾಗಿದ್ದರೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ Sticker Maker ಆ್ಯಪ್ ಡೌನ್‍ಲೋಡ್ ಮಾಡಿ ಆ್ಯಪ್ ತೆರೆದ ಕೂಡಲೇ create a new Sticker Pack ಕ್ಲಿಕ್ ಮಾಡಿ. ನಿಮ್ಮ ಸ್ಟಿಕ್ಕರ್ ಪ್ಯಾಕ್‍ಗೆ ಒಂದು ಹೆಸರು ನೀಡಿ. ಅದರ ಕೆಳಗೆ sticker pack author ಹೆಸರು ಟೈಪಿಸಿ ಕ್ರಿಯೇಟ್ ಒತ್ತಿ.

ಮುಂದಿನ ಸ್ಕ್ರೀನ್‌ನಲ್ಲಿ ಒಂದು ಟ್ರೇ ಐಕಾನ್ ಸೇರಿದಂತೆ 30 tiles ಕಾಣಬಹುದು. ಇದರಲ್ಲಿ ಒಂದು tile ಒತ್ತಿದರೆ ಫೋಟೊ ಆಯ್ಕೆ ಮಾಡಲು Take photo, Open Gallery ಮತ್ತು Select File ಎಂಬ ಆಪ್ಶನ್ ಕಾಣಿಸಿಕೊಳ್ಳುತ್ತದೆ.

ಗ್ಯಾಲರಿಯಲ್ಲಿರುವ ನಿಮ್ಮಿಷ್ಟದ ಚಿತ್ರ ಅಥವಾ ನಿಮ್ಮದೇ ಚಿತ್ರವನ್ನು ಆಯ್ಕೆ ಮಾಡಿಕೊಳ್ಳಿ. ಆ ಚಿತ್ರವನ್ನು ನಿಮಗೆ ಬೇಕಾದ ಆಕೃತಿಯಲ್ಲಿ ಕತ್ತರಿಸಿ. ಇಲ್ಲಿ Free hand, Cut Square ಮತ್ತು Cut circle ಆಯ್ಕೆಗಳಿರುತ್ತವೆ.

ಚಿತ್ರವನ್ನು ನಿಮಗೆ ಬೇಕಾದ ರೀತಿಯಲ್ಲಿ ಕತ್ತರಿಸಿದ ನಂತರ ಸೇವ್ ಮಾಡಿದರೆ ಸ್ಟಿಕ್ಕರ್ ಸೇವ್ ಆಗುತ್ತದೆ.

ಟ್ರೇ ಐಕಾನ್‍ಗಾಗಿ ಒಂದು ಸ್ಟಿಕ್ಕರ್ ಮತ್ತು ಮೂರು ಸ್ಟಿಕ್ಕರ್ ಕ್ರಿಯೇಟ್ ಮಾಡಿದ ನಂತರ Add to Whatsapp ಕ್ಲಿಕ್ ಮಾಡಿ., ನಿಮ್ಮ ಸ್ಟಿಕ್ಕರ್ ವಾಟ್ಸ್ಆ್ಯಪ್‍ಗೆ ಸೇರ್ಪಡೆಯಾಗಿದೆ ಎಂಬ ಸಂದೇಶವೂ ನಿಮಗೆ ಲಭಿಸುತ್ತದೆ. 

ಸ್ಟಿಕ್ಕರ್ ಕ್ರಿಯೇಟ್ ಆದ ನಂತರ ವಾಟ್ಸ್ಆ್ಯಪ್ ಚಾಟ್ ಓಪನ್ ಮಾಡಿ.

ಚಾಟ್ ಬಾಕ್ಸ್ನ ಎಡಭಾಗದಲ್ಲಿ ಇಮೋಜಿ ಐಕಾನ್ ಕ್ಲಿಕ್ ಮಾಡಿದರೆ ಕೆಳಗಡೆ GIF ಬಲಭಾಗದಲ್ಲಿ ಸ್ಟಿಕ್ಕರ್ ಐಕಾನ್ ಕಾಣಿಸುತ್ತದೆ. ಅಲ್ಲಿ ನೀವು ಕ್ರಿಯೇಟ್ ಮಾಡಿದ ಸ್ಟಿಕ್ಕರ್‌ಗಳೂ ಇರುತ್ತವೆ.

ನೀವು ಹೆಚ್ಚಿನ ಸ್ಟಿಕ್ಕರ್‌ಗಳನ್ನು ಕ್ರಿಯೇಟ್ ಮಾಡುತ್ತಾ ಹೋದಂತೆ ಅದನ್ನು ವಾಟ್ಸ್ಆ್ಯಪ್ ಗೆ ಸೇರಿಸುತ್ತಾ ಹೋಗಬೇಕು. ಸ್ಟಿಕ್ಕರ್ ಐಕಾನ್ ಕ್ಲಿಕ್ ಮಾಡಿದರೆ ಬಲಭಾಗದಲ್ಲಿ ಮೇಲೆ '+' ಕ್ಲಿಕ್ಕಿಸಿ. ಅಲ್ಲಿ All stickers ಮತ್ತು My stickers ಎಂಬ ಲೇಬಲ್ ಕಾಣಿಸುತ್ತದೆ. My Stickers ನಲ್ಲಿ ನೀವು ಕ್ರಿಯೇಟ್ ಮಾಡಿದ ಎಲ್ಲ ಸ್ಟಿಕ್ಕರ್‌ಗಳು ಕಾಣಿಸಿಕೊಳ್ಳುತ್ತವೆ. ಡಿಲೀಟ್ ಮಾಡಲು ಬಯಸುವುದಾದರೆ ಇಲ್ಲಿ ಡಿಲೀಟ್ ಆಪ್ಶನ್ ಕೂಡಾ ಇದೆ.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !