ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೊಬೈಲ್ ಬಳಕೆದಾರರ ಖಾಸಗಿತನ ರಕ್ಷಿಸುವ ದೂಸ್ರಾ ನಂಬರ್ ಆ್ಯಪ್ ಬಿಡುಗಡೆ

Last Updated 19 ಸೆಪ್ಟೆಂಬರ್ 2020, 3:07 IST
ಅಕ್ಷರ ಗಾತ್ರ

ಬೆಂಗಳೂರು: ಮೊಬೈಲ್ ಬಳಕೆದಾರರ ಡಿಜಿಟಲ್ ಗುರುತು ರಕ್ಷಿಸಲು ಹೈದರಾಬಾದ್‍ನ ಟೆನ್20 ಇನ್ಫೊಮೀಡಿಯಾ ಪ್ರೈವೇಟ್ ಲಿಮಿಟೆಡ್, ವಿನೂತನ ಸೌಲಭ್ಯವಾಗಿರುವ ದೂಸ್ರಾ ಮೊಬೈಲ್ ಆ್ಯಪ್ ಪರಿಚಯಿಸಿದೆ.

ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆಯನ್ನು ಅನಿವಾರ್ಯವಾಗಿ ಹಂಚಿಕೊಳ್ಳಬೇಕಾದ ಕಡೆಗಳಲ್ಲಿ ಮೊಬೈಲ್‌ ಸಂಖ್ಯೆಗೆ ಪರ್ಯಾಯವಾಗಿರುವ ದೂಸ್ರಾ ಆ್ಯಪ್‌ನ 10 ಅಂಕಿಯ ಸಿಮ್ ರಹಿತ (SIM) ಮೊಬೈಲ್ ಸಂಖ್ಯೆಯನ್ನು ಪರ್ಯಾಯವಾಗಿ ಬಳಸಬಹುದಾಗಿದೆ. ಡಿಜಿಟಲ್ ವೇದಿಕೆಗಳೂ ಸೇರಿದಂತೆ ಗ್ರಾಹಕರು ತಮ್ಮ ವೈಯಕ್ತಿಕ ಮೊಬೈಲ್ ಸಂಖ್ಯೆಯನ್ನು ಹಂಚಿಕೊಳ್ಳಬೇಕಾದ ಸಂದರ್ಭಗಳಲ್ಲಿ ಈ 10 ಅಂಕಿಯ ಸಿಮ್ ಮುಕ್ತ ಮೊಬೈಲ್ ಸಂಖ್ಯೆಯನ್ನು ಗ್ರಾಹಕರು ನಿಶ್ಚಿಂತೆಯಿಂದ ಹಂಚಿಕೊಳ್ಳಬಹುದು. ಅನಪೇಕ್ಷಿತ ವ್ಯಕ್ತಿಗಳು ಮತ್ತು ವಂಚಕರಿಗೆ ತಮ್ಮ ಗುರುತು ಪತ್ತೆಯಾಗದಂತೆ ನೋಡಿಕೊಂಡು ತಮ್ಮ ಡಿಜಿಟಲ್ ಖಾಸಗಿತನದ ಮೇಲೆ ನಿಯಂತ್ರಣ ಸಾಧಿಸಲು ಈ ಆ್ಯಪ್ ಬಳಕೆದಾರರಿಗೆ ನೆರವಾಗಲಿದೆ.

‘ಸಾರ್ವಜನಿಕ ಬದುಕಿನಲ್ಲಿ ಮೊಬೈಲ್‌ ಸಂಖ್ಯೆ ಹಂಚಿಕೊಂಡ ಕಾರಣಕ್ಕೆ ನಡೆಯುವ ವೈಯಕ್ತಿಕ ಮಾಹಿತಿಯ ದುರ್ಬಳಕೆಯ ಸಾಧ್ಯತೆ ತಡೆಗಟ್ಟಲು ದೂಸ್ರಾ, ವಿನೂತನ ಮತ್ತು ಸರಳ ಸ್ವರೂಪದ ಪರಿಹಾರ ಒದಗಿಸಿದೆ. ದೂಸ್ರಾ ನಂಬರ್, ವರ್ಚುವಲ್ ಮೊಬೈಲ್ ನಂಬರ್ ಆಗಿದ್ದು ಎಲ್ಲಿಯೇ ಆಗಲಿ, ಯಾರ ಜತೆಗಾದರೂ ಅದನ್ನು ಹಂಚಿಕೊಳ್ಳಬಹುದು. ವೈಯಕ್ತಿಕ ಮೊಬೈಲ್ ನಂಬರ್ ಬದಲಿಗೆ ಈ ವರ್ಚುವಲ್ ಮೊಬೈಲ್ ನಂಬರ್ ಹಂಚಿಕೊಳ್ಳಬಹುದು. ಇದರಿಂದ ಬೇಡವಾದವರ ಅನಪೇಕ್ಷಿತ ಕರೆಗಳು, ವೈಯಕ್ತಿಕ ಮಾಹಿತಿಯ ವಿವರಗಳ ಕಳ್ಳತನ, ವಂಚಕ ಜಾಲದಲ್ಲಿ ಪ್ರಸರಣ ಮತ್ತಿತರ ಕೃತ್ಯಗಳನ್ನು ತಡೆಗಟ್ಟಬಹುದು‘ ಎಂದು ದೂಸ್ರಾದ ಸಿಇಒ ಆದಿತ್ಯ ವುಚಿ ತಿಳಿಸಿದ್ದಾರೆ. ದೂಸ್ರಾ (Doosra) ಆ್ಯಪ್‌ನಲ್ಲಿ ಗ್ರಾಹಕರು ಈ ಸೇವೆ ಪಡೆಯಲು ವಾರ್ಷಿಕ (₹ 701), ಅರ್ಧವಾರ್ಷಿಕ ಶುಲ್ಕ (₹ 501) ಪಾವತಿಸಬೇಕಾಗುತ್ತದೆ. ಕಂಪನಿಯ ಅಂತರ್ಜಾಲ ತಾಣದಲ್ಲಿ (https://doosra.com) ಹೆಸರು ನೋಂದಾಯಿಸಿ ಇದರ ಸೇವೆ ಪಡೆಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT